Wednesday, January 22, 2025

ಸರಿ ತಪ್ಪುಗಳ ವೆಡ್ಡಿಂಗ್ ಗಿಫ್ಟ್ ಲೆಕ್ಕಾಚಾರದಲ್ಲಿ ಸೋನು

ಸ್ಯಾಂಡಲ್​ವುಡ್ ಎವರ್​ಗ್ರೀನ್ ನಟಿ ಪ್ರೇಮ ನಾಲ್ಕು ವರ್ಷಗಳ ಬಳಿಕ ಇದೀಗ ಮತ್ತೆ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಚಂದನವನದ ಮತ್ತೊಬ್ಬ ಚೆಲುವೆ ಸೋನು ಗೌಡಗೆ ವೆಡ್ಡಿಂಗ್ ಗಿಫ್ಟ್ ಕೊಡಲು ಬರ್ತಿದ್ದಾರೆ. ಅಷ್ಟಕ್ಕೂ ಆ ವೆಡ್ಡಿಂಗ್ ಗಿಫ್ಟ್ ಏನು..? ಹೇಗಿದೆ..?

ಸ್ಯಾಂಡಲ್​ವುಡ್​​ನಲ್ಲಿ ವೆಡ್ಡಿಂಗ್ ಗಿಫ್ಟ್ ಅನ್ನೋ ಟೈಟಲ್​ನಲ್ಲಿ ಸಿನಿಮಾ ಮೂಡಿಬರ್ತಿರೋ ವಿಷ್ಯ ಈಗಾಗ್ಲೇ ನಿಮಗೆಲ್ಲಾ ಗೊತ್ತೇ ಇದೆ. ಸಿನಿಮಾ ಬಗ್ಗೆ ಸಾಕಷ್ಟು ಆಸಕ್ತಿ ಇರೋ ವಿಕ್ರಂ ಪ್ರಭು ಅವರುಈ ಚಿತ್ರವನ್ನು ನಿರ್ದೇಶಿಸೋದ್ರ ಜೊತೆಗೆ ತಾವೇ ನಿರ್ಮಾಣವನ್ನೂ ಮಾಡ್ತಿದ್ದಾರೆ. ನಟ ನಿಶಾನ್ ನಾಣಯ್ಯ ಈ ಸಿನಿಮಾದಲ್ಲಿ ನಾಯಕರಾಗಿ ಕಾಣಿಸಿಕೊಳ್ತಿದ್ದಾರೆ. ನಾಯಕಿಯ ಪಾತ್ರದಲ್ಲಿ ಸೋನು ಗೌಡ ಬಣ್ಣ ಹಚ್ಚಿದ್ರೆ, ನಟಿ ಪ್ರೇಮ ಕೂಡ ಲೀಡ್ ರೋಲ್​ನಲ್ಲಿ ನಟಿಸಿದ್ದಾರೆ.

ಟೈಟಲ್ ಹಾಗೂ ಪೋಸ್ಟರ್ಸ್ ಮೂಲಕ ಎಲ್ಲರ ಗಮನ ಸೆಳೆದಿದ್ದ ವೆಡ್ಡಿಂಗ್ ಗಿಫ್ಟ್ ಸಿನಿಮಾ, ಸದ್ಯ ಸೈಲೆಂಟ್​ ಆಗಿ ಚಿತ್ರದ ಶೂಟಿಂಗ್ ಕೂಡ ಕಂಪ್ಲೀಟ್ ಮಾಡಿದೆ. ಪರುಷರಿಂದ ಅನ್ಯಾಯಕ್ಕೊಳಗಾದ ಮಹಿಳೆಯರ ರಕ್ಷಣೆಗಾಗಿ ಭಾರತದಲ್ಲಿ ಹಲವು ಕಾನೂನುಗಳಿವೆ. ಆದ್ರೆ ಮಹಿಳೆಯರಿಂದ ಶೋಷಣೆಗೊಳಗಾದ ಪುರುಷರ ಹಿತರಕ್ಷಣೆಗಾಗಿ ಯಾವುದೇ ಕಾನೂನು ಇಲ್ಲ. ಇದೇ ಸಬ್ಜೆಕ್ಟ್ ಇಟ್ಕೊಂಡು ವೆಡ್ಡಿಂಗ್ ಗಿಫ್ಟ್​ ಸಿನಿಮಾ ಮಾಡಲಾಗಿದ್ಯಂತೆ.

ಲಾಯರ್ ಪಾತ್ರದಲ್ಲಿ ಎವರ್​ಗ್ರೀನ್ ಪ್ರೇಮಾ ಮಿಂಚು :

ಮದುವೆಯಾದ ಪುರುಷನೊಬ್ಬ ಯಾವ ರೀತಿ ಶೋಷಣೆಯನ್ನು ಎದುರಿಸ್ತಾನೆ ಅನ್ನೋದೇ ವೆಡ್ಡಿಂಗ್ ಗಿಫ್ಟ್​ ಚಿತ್ರದ ಸ್ಟೋರಿಲೈನ್. ಅಂದಹಾಗೆ ನಟಿ ಸೋನು ಗೌಡ ಈ ಸಿನಿಮಾದಲ್ಲಿ ಮೊದಲ ಬಾರಿಗೆ ಬಹಳ ಬೋಲ್ಡ್ ಅಂಡ್ ಚಾಲೆಂಜಿಂಗ್ ಕ್ಯಾರೆಕ್ಟರ್​ನಲ್ಲಿ ಕಾಣಿಸಿಕೊಳ್ತಿದ್ದಾರೆ. ತಮ್ಮ ಪಾತ್ರದ ಕುರಿತು ನಟಿ ಸೋನು ಗೌಡ ಕೆಲ ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ಹಂಚಿಕೊಂಡರು.

ಇಡೀ ಸಿನಿಮಾದಲ್ಲಿ ಎಲ್ಲರ ಗಮನ ಸೆಳೆಯೋ ಮತ್ತೊಂದು ಮುಖ್ಯ ಪಾತ್ರ ಅಂದ್ರೆ ಪ್ರೇಮ ಅವರದ್ದು. 2017ರ ಉಪೇಂದ್ರ ಮತ್ತೆ ಬಾ ಸಿನಿಮಾ ಬಳಿಕ ನಾಲ್ಕು ವರ್ಷಗಳು ಚಿತ್ರರಂಗದಿಂದ ಲಾಂಗ್ ಗ್ಯಾಪ್ ತೆಗೆದುಕೊಂಡಿದ್ದ ಪ್ರೇಮ, ಇದೀಗ ವೆಡ್ಡಿಂಗ್ ಗಿಫ್ಟ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರೇಮ ಲಾಯರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ವೆಡ್ಡಿಂಗ್ ಗಿಫ್ಟ್ ಚಿತ್ರಕ್ಕೆ ಬಾಲಚಂದ್ರ ಪ್ರಭು ಅನ್ನೋ ಹೊಸ ಪ್ರತಿಭೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಶೂಟಿಂಗ್ ಕಂಪ್ಲೀಟ್ ಮಾಡಿರೋ ಚಿತ್ರತಂಡ, ಸದ್ಯ ಪೋಸ್ಟ್​ ಪ್ರೊಡಕ್ಷನ್ ವರ್ಕ್​​ನಲ್ಲಿ ಬ್ಯುಸಿಯಾಗಿದೆ. ಅಂದಹಾಗೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಸಿನಿಮಾನ ರಿಲೀಸ್ ಮಾಡೋ ಯೋಜನೆಯಲ್ಲಿದೆ ಟೀಂ.
ಚಂದನ.ಎಸ್, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES