Sunday, January 19, 2025

ದಕ್ಷಿಣ ಆಫ್ರಿಕಾವನ್ನು 229 ಕ್ಕೆ ಕಟ್ಟಿಹಾಕಿದ ಭಾರತ; ಠಾಕೂರ್ ಅದ್ಭುತ ಬೌಲಿಂಗ್

ಜೊಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕ ಹಾಗೂ ಭಾರತದ ನಡುವೆ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕ 229ರನ್ನುಗಳಿಗೆ ಆಲೌಟ್ ಆಗಿ 27ರನ್ನುಗಳ ಅಲ್ಪ ಮುನ್ನಡೆ ಪಡೆದುಕೊಂಡಿದೆ. ಇತ್ತೀಚಿನ ವರದಿಯಂತೆ  ಭಾರತ 2ನೇ ದಿನದಾಟದ ಮೂರನೆಯ ಅವಧಿಯಲ್ಲಿ ವಿಕೆಟ್ ಕಳೆದುಕೊಳ್ಳದೆ15ರನ್ನು ಗಳಿಸಿದೆ. ಮಯಾಂಕ್ 8 ಹಾಗೂ ರಾಹುಲ್ 7ರನ್ನುಗಳನ್ನು ಗಳಿಸಿ ಆಡುತ್ತಿದ್ದಾರೆ. ಭಾರತದ ಪರ ಕ್ಯಾಪ್ಟನ್ ಕೆ.ಎಲ್.ರಾಹುಲ್ ಹಾಗೂ ಮಯಾಂಕ್ ಇನ್ನಿಂಗ್ಸ್ ಓಪನ್ ಮಾಡಿದ್ದಾರೆ.

ಇದಕ್ಕೆ ಮುನ್ನ ದಕ್ಷಿಣ ಆಫ್ರಿಕಾವನ್ನು 229ರನ್ನುಗಳಿಗೆ ಆಲೌಟ್ ಮಾಡುವಲ್ಲಿ ಭಾರತದ ವೇಗಿ ಠಾಕೂರ್ ಅದ್ಭುತ ಬೌಲಿಂಗ್ ಕಾರಣವಾಯಿತು. ಠಾಕೂರ್ ಅತ್ಯಧಿಕ 7 ವಿಕೆಟ್​ಗಳನ್ನು ಪಡೆದುಕೊಂಡರೆ, ಶಮಿ 2 ವಿಕೆಟ್​ಗಳು ಹಾಗು ಬೂಮ್ರ 1 ವಿಕೆಟ್ ಕಬಳಿಸಿದರು.

RELATED ARTICLES

Related Articles

TRENDING ARTICLES