Sunday, January 19, 2025

ಹರದನಹಳ್ಳಿ ಜನ್ಮಸ್ಥಳ..ಬಿಡದಿ ಕರ್ಮಸ್ಥಳ : ಹೆಚ್ ಡಿ ಕುಮಾರಸ್ವಾಮಿ

ರಾಮನಗರ : ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವಣ ಗಲಾಟೆಯ ಸಮ್ಮುಖದಲ್ಲಿ ಡಿಕೆ ಬ್ರದರ್ಸ್​ಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟ್ವಿಟರ್​ನಲ್ಲಿ ಕುಟುಕಿದ್ದಾರೆ.

ಕಲ್ಲು ಬಂಡೆಗಳನ್ನು ನುಂಗಿ, ಕೋಟೆ ಕಟ್ಟಿಕೊಂಡು ಮೆರೆಯುತ್ತಿರುವ ‘ಡಿಸೈನ್ ವೀರರಿಗೆʼ ನಮ್ಮ ನೆಲ, ನಮ್ಮ ಜಲ ಎನ್ನುವುದು ಈಗ ನೆನಪಿಗೆ ಬಂದಿದೆ. ಆಭದ್ರತೆ ಅಡಿಪಾಯವನ್ನೇ ಅಲ್ಲಾಡಿಸುತ್ತಿದೆ ಅಲ್ಲವೇ? ಕನಕಪುರ, ರಾಮನಗರ ಯಾರೊಬ್ಬರ ಸ್ವತ್ತಲ್ಲ.

 ಈ ನೆಲದ ಮಕ್ಕಳು ಎಂದು ಬಡಾಯಿ ಬಿಡುವ ಸಹೋದರರು ಇದೇ ನೆಲವನ್ನು ಹೇಗೆಲ್ಲಾ ನುಂಗಿ ನೀರು ಕುಡಿಯುತ್ತಿದ್ದಾರೆ. ಆಟ ಎಂದ ಮೇಲೆ ಅಂತ್ಯವೂ ಇರಬೇಕಲ್ಲವೇ? ಆ ಕ್ಷಣ ಹತ್ತಿರ ಬಂದಿದೆಯೇನೋ. ಹರದನಹಳ್ಳಿ ನನ್ನ ಜನ್ಮಸ್ಥಳ, ಬಿಡದಿ ಕರ್ಮಸ್ಥಳ ಇದುವೇ ನನಗೆ ಧರ್ಮಸ್ಥಳ. ಈ ಮಣ್ಣಲ್ಲಿಯೇ ನಾನು ಮಣ್ಣಾಗುವೆ ಎಂದು ಈಗಾಗಲೇ ಹೇಳಿದ್ದೇನೆ. ಇದರ ಹೊರತಾಗಿ ರಾಮನಗರಕ್ಕೆ ರಿಯಲ್ ಎಸ್ಟೇಟ್ ಮಾಡಲಿಕ್ಕೆ ನಾನು ಬಂದವನಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಹೋದರರಾದ ಡಿಕೆ ಸುರೇಶ್​ ಮತ್ತು ಡಿಕೆ ಶಿವಕುಮಾರ್​​ರವರಿಗೆ ಗುಡುಗಿದ್ದಾರೆ.

RELATED ARTICLES

Related Articles

TRENDING ARTICLES