Tuesday, December 24, 2024

ಬಿರುಗಾಳಿ ಸಹಿತ ಮೀನಿನ ಮಳೆ..!

ಜಗತ್ತಿನ ಜೀವ ಸಮೂಹ ಬದುಕಿ ಉಳಿಯೋದಕ್ಕೆ ನೀರು ಅತ್ಯ ಅಮೂಲ್ಯ, ಇವತ್ತು ಸಮುದ್ರದ ನೀರು ಆವಿಯಾಗಿ, ಅದು ಮಳೆಯಾದರೆ ಜಗತ್ತಿನ ಎಲ್ಲಾ ಜೀವ ಸಂಕುಲಗಳ ಉಳಿವಿಗೆ ಕಾರಣವಾಗುತ್ತದೆ. ಈ ಮಳೆ ಹೆಚ್ಚು ನದಿ ಮೂಲವಿಲ್ಲದ ರಾಷ್ಟ್ರಗಳಿಗೆ ಕುಡಿಯಲು ಯೋಗ್ಯವಾದ ನಿರನ್ನೇ ಪೂರೈಸುತ್ತದೆ. ಇಲ್ಲಿ ಇನ್ನೂ ಒಂದು ಪ್ರಮುಖ ಅಂಶ ಅಂದರೆ, ಜಗತ್ತಿನಲ್ಲಿ ಮಾನವನಿಗೆ ನದಿ ಮೂಲವನ್ನ ಹೊರತು ಪಡಿಸಿ, ಬೇರೆ ಯಾವುದಾದರು ಮೂಲದಿಂದ ಸಿಹಿ ನೀರು ಸಿಗುತ್ತದೆ ಅಂದ್ರೆ ಅದು ಕೇವಲ ಮಳೆಯಿಂದ ಮಾತ್ರ, ಹಾಗಾಗಿನೇ ಜಗತ್ತಿನಲ್ಲಿ ಸಾಕಷ್ಟು ಜನ ಮಳೆ ನೀರನ್ನ ತಮ್ಮ ಜೀವನಾಧರಕ್ಕೆ ಮೂಲವಾಗಿ ಅವಲಂಬಿಸಿರುತ್ತಾರೆ.

ಆದರೆ, ಕೆಲವೊಮ್ಮೆ ಮಳೆ ಕೂಡ ಮಾನವನಿಗೆ ಬೇರೆ ಬೇರೆ ರೀತಿಯಾಗಿ ಆಘಾತವನ್ನ ನೀಡುತ್ತದೆ. ಅದರಲ್ಲೂ ಕೆಲವೊಮ್ಮೆ ಅತಿವೃಷ್ಟಿಯಿಂದಾಗಿ ಮಾನವ ತನ್ನ ಮೂಲ ನೆಲೆಯನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ. ಮತ್ತೆ ಕೆಲವೊಮ್ಮೆ ಕೆಲ ಪ್ರದೇಶಗಳಲ್ಲಿ ಸರಿಯಾದ ಸಮಯಕ್ಕೆ ವರುಣ ತನ್ನ ದರ್ಶನವನ್ನ ತೋರಿಸದೆ ಹಲವು ಸಮಸ್ಯೆಗಳಿಗೆ ಕೂಡ ನೇರವಾಗಿ ಕಾರಣನಾಗುತ್ತಾನೆ. ಹಾಗಾಗಿ ಮಳೆಯನ್ನ ಬದುಕು ಸಾವಿನ ಮಿತ್ರ ಅಂತ ಕೆಲ ಪಾಶ್ಚಿಮಾತ್ಯ ನಾಗರೀಕತೆಗಳು ಹೇಳುತ್ತವೆ. ಆದ್ರೆ ಇದೇ ಮಳೆ ಕೆಲವೊಮ್ಮೆ ಮಾನವನ ಅಚ್ಚರಿಗೆ ಹಾಗು ಕುತೂಹಲಕ್ಕೆ ಕೂಡ ಕಾರಣವಾಗುತ್ತದೆ.

ಇದಕ್ಕೊಂದು ಉತ್ತಮ ಉದಾಹರಣೆ ಅಂದರೆ ಅದು ಅಮೆರಿಕದ ಟೆಕ್ಸಾಸ್​ ನಗರ, ಈ ಟೆಕ್ಸಾಸ್​ ನಗರ ನೋಡೋದಕ್ಕೆ ಎಷ್ಟು ಸುಂದರವಾಗಿದ್ಯೋ, ಅಷ್ಟೇ ಅಚ್ಚರಿಗಳನ್ನ ತನ್ನ ಒಡಲೊಳಗೆ ಇಟ್ಟುಕೊಂಡಿದೆ, ಈ ನಗರ 80-90ರ ದಶಕದಲ್ಲಿ UFO ವಿಚಾರದಲ್ಲಿ ಸಾಕಷ್ಟು ಸುದ್ದಿಯನ್ನ ಮಾಡಿತ್ತು, ಇತ್ತೀಚೆಗಿನ ದಿನಗಳಲ್ಲಿ ಟೆಕ್ಸಾಸ್​ ತನ್ನ ರಾಜಕೀಯದ ವಿಚಾರದಲ್ಲಿ ಹಾಗು ಬೇಸ್​ಬಾಲ್​ ಆಟದ ವಿಚಾರಕ್ಕೆ ಸುದ್ದಿ ಮಾಡ್ತಾ ಇತ್ತು. ಹೀಗೆ ಕ್ರೀಡೆ ಹಾಗು ಇಲ್ಲಿನ ರಾಜಕೀಯದ ವಿಚಾರಕ್ಕೆ ಸದ್ದು ಮಾಡ್ತಾ ಇದ್ದ ಟೆಕ್ಸಾಸ್​ ನಗರ, ಕಳೆದ ಕೆಲ ವರ್ಷಗಳಿಂದ ಅತಿವೃಷ್ಟಿ ಹಾಗು ಬಿರುಗಾಳಿ ಸಹಿತ ಮಳೆಗೆ ಸಾಕಷ್ಟು ಸುದ್ಧಿ ಮಾಡ್ತಾ ಇದೆ. ಇದೀಗ ಕಳೆದ ಕೆಲ ವಾರದಿಂದಲೂ ಕೂಡ ಇದೇ ಅತಿ ವೃಷ್ಟಿಗೆ ಸುದ್ಧಿಯಾಗಿರುವ ಟೆಕ್ಸಾಸ್​ ನಗರ ಈಗ ಅತಿವೃಷ್ಟಿಯ ಜೊತೆಗೆ ಅಲ್ಲಿನ ಜನರ ಅಚ್ಚರಿಗೆ ಅಲ್ಲಿ ನಡೆಸ ವಿಚಿತ್ರ ಘಟನೆಯೊಂದು ಸಾಕ್ಷಿಯಾಗಿದೆ.

ಡಿಸೆಂಬರ್​ನಲ್ಲಿ ಅಮೆರಿಕದ ಕೆಲ ಭಾಗಗಳಲ್ಲಿ ತೀವ್ರ ಪ್ರಮಾಣದ ಸುಂಟರಗಾಳಿ ಹಾಗು ಮಳೆಯಿಂದ ಅಲ್ಲಿನ ಜನ ಸಮಸ್ಯೆಗೆ ಸಿಲುಕಿಕೊಂಡಿದ್ರು, ಇದ್ರಿಂದ ನೂರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ರೆ, ಐನೂರಕ್ಕೂ ಹೆಚ್ಚು ಮನೆಗಳು ನಿರ್ನಾಮವಾಗಿದ್ದವು, ಹೀಗಾಗಿ ಅಲ್ಲಿನ ಜನ ಅಕ್ಷರಶಃ ಹೈರಾಣಾಗಿದ್ರು, ಇನ್ನು ಕೂಡ ಕೆಲವೆಡೆ ಬಿರುಗಾಳಿ ಸಹಿತ ಮಳೆ ಆಗ್ತಾ ಇದ್ದು, ಇದು ಟೆಕ್ಸಾಸ್​ನಲ್ಲೂ ಮುಂದುವರೆದಿದೆ, ಮೊದಲೇ ಮಳೆಯಿಂದ ಕಂಗಾಲಾಗಿದ್ದ ಜನ ಈಗ ಮೀನಿನ ಮಳೆಯಿಂದ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ ಕೆಲವರು ಈ ಮೀನಿನ ಮಳೆಯ ಫೋಟೋವನ್ನ ಸಾಮಾಜಿಕ ಜಲಾತಾಣದಲ್ಲಿ ಷೇರ್​ ಮಾಡ್ತಾ ಇದ್ದಾರೆ.

ಈ ವಿಚಾರ ತಿಳಿತಾ ಇದ್ದ ಹಾಗೆ ಕೆಲಕಾಲ ಜನರು ಆತಂಕಕ್ಕೆ ಒಳಗಾಗಿದರು, ಕೆಲವರಂತೂ ಪ್ರಳಯವೇ ನಡೆಯುವ ಮುನ್ಸೂಚನೆ ಅಂತ ಹೇಳೋದಕ್ಕೆ ಶುರು ಮಾಡಿ ಭಯಗೊಂಡರು, ಬಳಿಕ ಸ್ಥಳಕ್ಕೆ ಆಗಮಿಸಿದ ಸಂಶೋಧಕರು ಈ ಮೀನು ಬಿರುಗಾಳಿಯಿಂದ ಬಂದಿದೆ ಅನ್ನೋ ಹೇಳಿಕೆಯನ್ನ ನೀಡುತ್ತಿದ್ದಾರೆ. ಇದಕ್ಕೆ ವೈಜ್ಞಾನಿಕ ಸಾಕ್ಷಿಯನ್ನ ನೀಡಿರುವ ವಿಜ್ಞಾನಿಗಳು ಸಾಗರದಿಂದ ಬಿರುಗಾಳಿ ಹಾಗು ಮಾರುತ ಉಂಟಾಗುವಾಗ ಅಲ್ಲಿನ ವೇಗದ ಗಾಳಿ ಕೆಲವೊಮ್ಮ ಜಲಚರಗಳನ್ನ ಹೊತ್ತೊಯ್ಯುತ್ತದೆ, ಭೂಪ್ರದೇಶಕ್ಕೆ ಈ ಮಾರುತ ಬರುತ್ತಿದ್ದ ಹಾಗೆ ಅದರ ವೇಗ ಕಡಿಮೆಯಾಗಿ ಮಳೆಯಾಗುವಾಗ, ಈ ಮೀನುಗಳು ಭೂಮಿಯ ಮೇಲೆ ಬೀಳುತ್ತದೆ ಅನ್ನೋ ಮಾಹಿತಿಯನ್ನ ನೀಡಿದ್ದಾರೆ.

ಈ ಹಿಂದೆ ಸಿಂಗಾಪುರ, ಮೆಕ್ಸಿಕೋ ಸೇರಿದ ಹಾಗೆ ಹಲವು ಕಡೆಗಳಲ್ಲಿ ಮಳೆಯಾಗಿದ್ದಾಗ, ವಿಜ್ಞಾನಿಗಳು ಬೇರೆಯದ್ದೇ ವಿವರಣೆಯನ್ನ ನೀಡಿದ್ದರು ಅವರ ಪ್ರಕಾರ ಸಮುದ್ರದ ನೀರು ಆವಿಯಾದಗ ಅಲ್ಲಿ ಮೀನಿನ ಮೊಟ್ಟೆಯು ಆ ನೀರಿನೊಡನೆ ಸೇರಿಕೊಳ್ಳುತ್ತದೆ. ಇದು ಆಕಾಶದಲ್ಲಿನ ವಾತಾವರಣದಲ್ಲಿ ಹಲವು ಪ್ರಕ್ರಿಯೆಗಳ ಬಳಿಕ ಮೀನಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ ಹಾಗಾಗಿ ಕೆಲವು ಕಡೆಗಳಲ್ಲಿ ಮೀನಿನ ಮಳೆಯಾಗುತ್ತದೆ ಅನ್ನೋದನ್ನ ವಿಜ್ಞಾನಿಗಳು ಹೇಳುತ್ತಾರೆ, ಆದ್ರೆ ಇದನ್ನ ನಂಬೋದಕ್ಕೆ ಸಿದ್ಧರಿಲ್ಲದ ಸಾಕಷ್ಟು ಜನ ಚಿತ್ರ-ವಿಚಿತ್ರ ಕತೆಗಳನ್ನ ಕೇಳಿ ಭಯ ಬೀಳ್ತಾ ಇದ್ದಾರೆ.

ಒಟ್ಟಾರೆಯಾಗಿ ಈ ಘಟನೆ ಟೆಕ್ಸಾಸ್​ ಸೇರಿದ ಹಾಗೆ ಜಗತ್ತಿನ ನಾನಾ ರಾಷ್ಟ್ರಗಳಲ್ಲಿ ಹಲವು ಚರ್ಚೆಗೆ ಕಾರಣವಾಗಿದ್ದು, ಈ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸೋದಕ್ಕೆ ವಿಜ್ಞಾನಿಗಳು ಮುಂದಾಗಿದ್ದಾರೆ, ಈ ಬಗ್ಗೆ ಹಲವು ದಶಕಗಳಿಂದ ಬೇರೆ ಬೇರೆ ರೀತಿಯಾಗಿ ನಿಧಾನಗತಿಯಲ್ಲಿ ಅಧ್ಯಯನ ನಡಿತಾ ಇದ್ದು, ಇದೀಗ ಮತ್ತೆ ಮೀನಿನ ಮಳೆಯಾಗಿರೋದ್ರಿಂದ ವಿಜ್ಞಾನಿಗಳ ಸಂಶೋಧನೆಗೆ ಮತ್ತಷ್ಟು ವೇಗ ಸಿಗೋದರಲ್ಲಿ ಅನುಮಾನವಿಲ್ಲ.

ಲಿಖಿತ್​ ರೈ, ಪವರ್​ ಟಿವಿ

RELATED ARTICLES

Related Articles

TRENDING ARTICLES