Wednesday, January 22, 2025

‘ಬುಲ್ಲಿಬಾಯ್ ಆ್ಯಪ್’ ಸೂತ್ರಧಾರಿಯ ಬಂಧನ

ಮುಂಬೈ: ಬುಲ್ಲಿಬಾಯ್ ಎಂಬ ಅಶ್ಲೀಲ ಆ್ಯಪ್​ನ ಕ್ರೈಂಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇಂದು ಬೆಂಗಳೂರು ಮೂಲದ ವಿಶಾಲ್​ಕುಮಾರ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬೆಂಗಳೂರಿನ ವಿಶಾಲ್​ಕುಮಾರ್​ನನ್ನು ನಿನ್ನೆ ವಶಕ್ಕೆ ಪಡೆದಿದ್ದ ಮುಂಬೈ ಪೊಲೀಸರು ಇಂದು ಅವನನ್ನು ಬಂಧಿಸಿದ್ದಾರೆ.

ಬುಲ್ಲಿಬಾಯ್ ಎಂಬ ಆ್ಯಪ್​ನಲ್ಲಿ ಪ್ರಭಾವಿ ಮುಸ್ಲಿಂ ಮಹಿಳೆಯರ ಭಾವಚಿತ್ರ ಹಾಕಿ ಇವರನ್ನು ಹರಾಜಿಗಿಡಲಾಗಿದೆ, ಕೊಳ್ಳಬಹುದು ಎಂಬರ್ಥದಲ್ಲಿ ಹಾಕಲಾಗಿತ್ತು. ಇದರ ವಿರುದ್ಧ ಎಲ್ಲೆಡೆ ವ್ಯಾಪಕ ಆಕ್ರೋಷ ವ್ಯಕ್ತವಾಗಿತ್ತು. ಈ ಸಂಬಂಧ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರನ್ನೂ ಸಹ ಸಲ್ಲಿಸಿದ್ದರು. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ಉತ್ತರಾಖಂಡದ ಮಹಿಳೆಯಾಗಿದ್ದು, ಇಬ್ಬರಿಗೂ ಸಂಬಂಧವಿದೆ ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಪ್ರಕರಣವನ್ನು ಮುಂಬೈನ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸಿದ್ದಾರೆ. ಬುಲ್ಲಿಬಾಯ್ ಆ್ಯಪನ್ನು ನಿರ್ಭಂಧಿಸಲಾಗಿದೆ, ಇದನ್ನು ಗಿಟ್​ಹಬ್ ವೇದಿಕೆ ಧೃಡಪಡಿಸಿದೆ.

RELATED ARTICLES

Related Articles

TRENDING ARTICLES