Monday, December 23, 2024

ತಮಿಳುನಾಡಿಗೆ ಹೋಗದಂತೆ ತಡೆಯಲು ಭಕ್ತರ ಕೈಮುಗಿದ ವೈದ್ಯ

ಶ್ರೀರಂಗಪಟ್ಟಣ:  ತಮಿಳುನಾಡು ಪ್ರವಾಸ ಕೈಗೊಂಡಿದ್ದ 30ಜನರಿಗೆ ಕೊರೋನ ಬಂದ ಹಿನ್ನೆಲೆಯಲ್ಲಿ ಓಂ ಶಕ್ತಿ ಯಾತ್ರೆ ಮೂಂದೂಡುವಂತೆ  ವೈದ್ಯರೊಬ್ಬರು ಮನವೊಲಿಕೆ ಮಾಡಿದ ಘಟನೆ ನಡೆದಿದೆ.  ಶ್ರೀರಂಗಪಟ್ಟಣದ ಆದಿಶಕ್ತಿ ದೇವಾಲಯದ ಬಳಿ ಹಲವು ಓಂಶಕ್ತಿ ಭಕ್ತರು ಮಾಲೆ ಧರಿಸುತ್ತಿದ್ದರು. ಅವರು ಅಲ್ಲಿಂದ ತಮಿಳುನಾಡು ಪ್ರವಾಸ ಕೈಗೊಳ್ಳುವುದು ಡಾಕ್ಟರ್ ವೆಂಕಟೇಶ್​ರವರಿಗೆ ತಿಳಿಯಿತು.

ಟಿ.ಎಚ್.ಓ. ಆಗಿರುವ ಡಾಕ್ಟರ್ ವೆಂಕಟೇಶ್​ರವರು ಭಕ್ತರಿಗೆ ತಮಿಳುನಾಡಿನಲ್ಲಿ ಕೊರೋನ ಹೆಚ್ಚಿರುವುದರಿಂದ ಅಲ್ಲಿಗೆ ಹೋಗದಂತೆ ಮನವಿ ಮಾಡುವುದರ ಜೊತೆಗೆ ಅವರ ಮನವೊಲಿಕೆಗೆ ಯತ್ನಿಸಿದರು. ಶ್ರೀರಂಗಪಟ್ಟಣದ ಟಿಎಚ್​ಓ ಆಗಿರುವ ವೆಂಕಟೇಶ್ ಭಕ್ತಿಗೆ ನಮಗೂ ದೇವರ ಮೇಲೆ ಭಕ್ತಿಯಿದೆ, ಕೊರೋನ ಇಲ್ಲದಿದ್ದರೆ ನಾವು ನಿಮ್ಮನ್ನು ಹೋಗಬೇಡಿ ಎನ್ನುತ್ತಿರಲಿಲ್ಲ. ಈ  ಹಿಂದೆ ಓಂ ಶಕ್ತಿ ದೇವಾಲಯಕ್ಕೆ ಹೋಗಿ ಬಂದವರಲ್ಲಿ ಸೋಂಕು ಪತ್ತೆಯಾಗಿದೆ. ಈಗ ನೀವು ಹೋಗಿ ಬಂದರೆ ನಿಮ್ಮಿಂದ ನಿಮ್ಮ ಮಕ್ಕಳು ಹಾಗೂ ಊರಿನವರಿಗೆ ಸೋಂಕು ಹರಡಬಹುದು. ಹಾಗಾಗಿ ಓಂಶಕ್ತಿ ಯಾತ್ರೆ ಮುಂದೂಡಿ ಎಂದು ಭಕ್ತರ ಮುಂದೆ ಕೈ ಮುಗಿದು ಟಿಎಚ್​ಓ ಡಾ.ವೆಂಕಟೇಶ್ ಮನವಿ ಮಾಡಿದ್ದಾರೆ

RELATED ARTICLES

Related Articles

TRENDING ARTICLES