Wednesday, January 22, 2025

ಸಂಚಲನ ಸೃಷ್ಟಿಸಿರುವ ವಿಕ್ರಾಂತ್ ರೋಣ; ಸುದೀಪ್​ಗೆ ಮರುಜೀವ

ದಬಾಂಗ್ 3, ಕೋಟಿಗೊಬ್ಬ 3 ಸೋಲಿನಿಂದ ಕಂಗೆಟ್ಟಿರೋ ಕಿಚ್ಚ ಸುದೀಪ್, 83ಗೆ ಕೈ ಹಾಕಿ ಅಲ್ಲೂ ಕೈ ಸುಟ್ಟಿಕೊಂಡ್ರು. ಸದ್ಯ ವಿಕ್ರಾಂತ್ ರೋಣದ ಮೇಲೆ ಕಂಪ್ಲೀಟ್ ಫೋಕಸ್ ಮಾಡಿರೋ ಅಭಿನಯ ಚಕ್ರವರ್ತಿ, ಅದು ರಿಲೀಸ್​ಗೂ ಮೊದಲೇ ಹೊಚ್ಚ ಹೊಸ ಪ್ರಾಜೆಕ್ಟ್​ನ ಹಿಂಟ್ ಬಿಟ್ಟುಕೊಟ್ಟಿದ್ದಾರೆ.

ಸುದೀಪ್​ಗೆ ಒಂಥರಾ ಬ್ಯಾಡ್ ಟೈಮ್ ಶುರುವಾಗಿದೆ. ಇತ್ತೀಚೆಗೆ ಅವ್ರ ಬಹುತೇಕ ಚಿತ್ರಗಳು ಫ್ಲಾಪ್​ಲಿಸ್ಟ್ ಸೇರ್ತಿವೆ. ಟಾಲಿವುಡ್​ನ ಸೈರಾ, ಬಾಲಿವುಡ್​ನ ದಬಾಂಗ್ 3 ಜೊತೆ ಕನ್ನಡದ ಕೋಟಿಗೊಬ್ಬ 3 ಕೂಡ ನಿರೀಕ್ಷಿತ ಮಟ್ಟ ತಲುಪಲೇ ಇಲ್ಲ. ಆದ್ರೀಗ ನ್ಯೂ ಇಯರ್​​ಗೆ ಹೊಸ ಶಪಥ ಮಾಡಿರೋ ಕಿಚ್ಚ, ಬ್ಯಾಂಗ್​ ಮಾಡೋಕೆ ಮಾಸ್ಟರ್​ಪ್ಲಾನ್ ಹಾಕಿದ್ದಾರೆ.

ಕಿಚ್ಚ ಸುದೀಪ್ ಈ ವರ್ಷ ವಿಕ್ರಾಂತ್ ರೋಣನಾಗಿ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿಬರ್ತಿರೋ ಈ ಸಿನಿಮಾ ತನ್ನ ಮೇಕಿಂಗ್ ಸ್ಟೈಲ್​​ನಿಂದ್ಲೇ ಹಾಲಿವುಡ್​ ಸಿನಿಮಾ ರೇಂಜ್​​ಗೆ ಸೌಂಡ್ ಮಾಡ್ತಿದ್ದು, ಭಾರತೀಯ ಚಿತ್ರರಂಗದಲ್ಲೇ ಹೆಚ್ಚು ಸಂಚಲನ ಸೃಷ್ಟಿಸಿದೆ.

ಸ್ಯಾಂಪಲ್ಸ್​ ನೋಡಿ ಥ್ರಿಲ್ ಆಗಿರೋ ಫ್ಯಾನ್ಸ್​​ ಅಂತೂ ಬಿಗ್​​ಸ್ಕ್ರೀನ್​ನಲ್ಲಿ ವಿಕ್ರಾಂತ್​​ ರೋಣನನ್ನು ಕಣ್ತುಂಬಿಕೊಳ್ಳೋ ತವಕದಲ್ಲಿದ್ದಾರೆ. ವಿಕ್ರಾಂತ್​​ ರೋಣ ರಿಲೀಸ್​ಗೂ ಮೊದ್ಲೇ ನೆಕ್ಸ್ಟ್ ಪ್ರಾಜೆಕ್ಟ್​ನ ರಿವೀಲ್ ಮಾಡಿದ್ದಾರೆ ಅಭಿನಯ ಚಕ್ರವರ್ತಿ. ಸುದೀಪ್ ತಮಿಳಿನ ಸ್ಟಾರ್​ ಡೈರೆಕ್ಟರ್​ ವೆಂಕಟ್ ಪ್ರಭು ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನೋದು ಸದ್ಯದ ಟಾಕ್. ಅದನ್ನ ಸ್ವತಃ ಅವ್ರೇ ರಿವೀಲ್ ಕೂಡ ಮಾಡಿದ್ದಾರೆ.

ಯೆಸ್.. ಕಿಚ್ಚನ ಮುಂದಿನ ಸಿನಿಮಾಗೆ ಕಾಲಿವುಡ್​ನ ಹೆಸರಾಂತ ನಿರ್ದೇಶಕ ವೆಂಕಟ್ ಪ್ರಭು ಆಕ್ಷನ್ ಕಟ್ ಹೇಳಲಿದ್ದಾರೆ. ವೆಂಕಟ್ ಪ್ರಭು ಚಿತ್ರದಲ್ಲಿ ನಟಿಸಲು ಕಿಚ್ಚ ಕೂಡ ಒಪ್ಪಿಕೊಂಡಿದ್ದಾರೆ. ಈ ವಿಚಾರವನ್ನು ಇತ್ತೀಚೆಗಿನ ಸಂದರ್ಶನವೊಂದ್ರಲ್ಲಿ ಸ್ವತಃ ನಟ ಸುದೀಪ್ ಅವ್ರೇ ತಿಳಿಸಿದ್ದಾರೆ.

ವೆಂಕಟ್ ಪ್ರಭು ಈಗಾಗ್ಲೇ ತಮಿಳು ಚಿತ್ರರಂಗದಲ್ಲಿ ಹಲವು ಸ್ಟಾರ್ ನಟರ ಸಿನಿಮಾಗಳನ್ನು ಡೈರೆಕ್ಟ್​ ಮಾಡಿದ್ದಾರೆ. ಮಂಕಾತ, ಮಾನಾಡು ಸೇರಿದಂತೆ ಸಾಕಷ್ಟು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ಕೊಟ್ಟ ಖ್ಯಾತಿ ವೆಂಕಟ್ ಪ್ರಭು ಅವ್ರದ್ದು. ಅಂತಹ ಖ್ಯಾತ ನಿರ್ದೇಶಕ ಇದೀಗ ಸುದೀಪ್ ಅವ್ರ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ.

ಕೆಲ ದಿನಗಳ ಹಿಂದೆ ನಿರ್ದೇಶಕ ವೆಂಕಟ್ ಪ್ರಭು ಕಿಚ್ಚ ಸುದೀಪ್ ಮನೆಗೆ ಭೆಟಿ ನೀಡಿ, ಅವ್ರ ಆತಿಥ್ಯ ಸ್ವೀಕರಿಸಿದ್ರು. ಆ ಸಮಯದಲ್ಲೇ ಕಿಚ್ಚನ ಮುಂದಿನ ಚಿತ್ರವನ್ನು ತಾವು ಡೈರೆಕ್ಟ್​ ಮಾಡೋ ಕುರಿತು ಮಾತುಕತೆಯನ್ನಾಡಿದ್ರು. ಆದ್ರೆ ಆ ವಿಚಾರ ಈಗ ಸುದ್ದಿಯಾಗಿದೆ. ಅಂದಹಾಗೆ ಈಗಾಗ್ಲೇ ಪರಭಾಷೆಯ ಹಲವಾರು ಸ್ಟಾರ್ ಡೈರೆಕ್ಟರ್​ಗಳ ಸಿನಿಮಾಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿರೋ ಸ್ಯಾಂಡಲ್​ವುಡ್​ ಬಾದ್​ಷಾ, ವೆಂಕಟ್​ ಪ್ರಭು ಜೊತೆ ಸಿನಿಮಾ ಮಾಡಲು ಸಜ್ಜಾಗಿದ್ದು ಈ ವಿಷ್ಯ ಎಲ್ಲರ ಹುಬ್ಬೇರಿಸಿದೆ.

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಮೂಡಿಬರ್ತಿರೋ ವಿಕ್ರಾಂತ್ ರೋಣ ಸಿನಿಮಾ ಫೆಬ್ರವರಿ 24ರಂದು ವರ್ಲ್ಡ್​ವೈಡ್​ ರಿಲೀಸ್ ಆಗಲಿದೆ. ವಿಕ್ರಾಂತ್ ರೋಣ ರಿಲೀಸ್ ಬೆನ್ನಲ್ಲೇ ನ್ಯೂ ಪ್ರಾಜೆಕ್ಟ್ ಸೆಟ್ಟೇರಲಿದೆ ಅನ್ನೋದು ಲೇಟೆಸ್ಟ್ ನ್ಯೂಸ್.

ಚಂದನ.ಎಸ್, ಎಂಟರ್​ಟೈನ್​ಮೆಂಟ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES