ವಿಜಯ್ ಸಿನಿದುನಿಯಾದ ಗತ್ತು ಗಮ್ಮತ್ತಿಗೆ ಪರಭಾಷಿಗರೂ ಸಹ ಫಿದಾ ಆಗಿದ್ದಾರೆ. ಸಲಗ ಮಾಡಿದ ಸೌಂಡ್ಗೆ ಬಾಕ್ಸ್ ಆಫೀಸ್ ಬ್ಯಾಂಗ್ ಆಗೋದ್ರ ಜೊತೆ ಸೌತ್ ಇಂಡಸ್ಟ್ರಿ ಶೇಕ್ ಆಗಿದೆ. ಇದೇ ಕಾರಣಕ್ಕೆ ನಮ್ಮ ಅಪ್ಪಟ ಕನ್ನಡ ಪ್ರತಿಭೆಗೆ ರತ್ನಗಂಬಳಿ ಹಾಸಿ ವೆಲ್ಕಮ್ ಹೇಳಿದೆ ಟಾಲಿವುಡ್.
ಇದು 2022ರ ಬಿಗ್ಗೆಸ್ಟ್ ಸ್ವೀಟ್ ನ್ಯೂಸ್. ಹೊಸ ವರ್ಷದಲ್ಲಿ ಪ್ರತಿಯೊಬ್ಬ ಕನ್ನಡಿಗ ಹೆಮ್ಮೆ ಪಡೋ ವಿಚಾರ. ನಮ್ಮ ಕನ್ನಡದ ಪ್ರತಿಭೆಗಳಿಗೆ ಡಿಮ್ಯಾಂಡ್ ಹೆಚ್ತಿರೋದು ನಿಜಕ್ಕೂ ಉತ್ತಮ ಬೆಳವಣಿಗೆ. ಅದರಲ್ಲೂ ಸಿನಿಮಾನ ಹಗಲಿರುಳು ಪ್ರೀತಿಸುವ ಹಾಗೂ ಆರಾಧಿಸೋ ಅಂತಹ ಸಿನಿಮೋತ್ಸಾಹಿಯ ಶ್ರಮಕ್ಕೆ ತಕ್ಕ ಪ್ರತಿಫಲವಿದು. ದುನಿಯಾ ವಿಜಯ್ ಅಂದಾಕ್ಷಣ ಒರಟ, ಕಾಂಟ್ರವರ್ಸಿ ಕಿಂಗ್ ಅಂತಲೇ ಎಲ್ರೂ ಅರ್ಥೈಸಿಕೊಂಡಿದ್ದಾರೆ. ಆದ್ರೆ ಪರಿಸ್ಥಿತಿಯ ಕೈಗೊಂಬೆಯಾಗಿ ಆ ರೀತಿಯಾಗಿ ಅವ್ರು ಬಿಂಬಿತರಾದರೇ ಹೊರತು, ನಿಜ ಜೀವನದಲ್ಲಿ ಅದೆಲ್ಲಕ್ಕಿಂತ ಡಿಫರೆಂಟ್ ಈ ವಿಜಯ್. ಸರಳ ಜೀವನ ಬಯಸೋ, ಸಹೃದಯಿ ವ್ಯಕ್ತಿತ್ವ ಇವ್ರದ್ದು.
ಶಾಲಾ ದಿನಗಳಿಂದಲೇ ಸಿನಿಮಾ ಮೇಲೆ ಒಲವು ತೋರಿದ್ದ ವಿಜಯ್ರಿಗೆ ದುನಿಯಾದಿಂದ ಅವ್ರ ಕನಸಿನ ಸಿನಿದುನಿಯಾ ತೆರೆದುಕೊಳ್ತು. ನಾಯಕನಟನಾಗಲು ಖದರ್ ಇದ್ರೆ ಸಾಕು ಕಲರ್ ಅಲ್ಲ. ಧಮ್ ಜೊತೆ ರಿಧಮ್ ಇರಬೇಕು ಅನ್ನೋದನ್ನ ತಮ್ಮ ಮಾಸ್ ಅಂಡ್ ಕ್ಲಾಸ್ ವೆಂಚರ್ಗಳಿಂದ ಮನದಟ್ಟು ಮಾಡಿದ್ರು. ಸಹನಟನಾಗಿದ್ದ ವಿಜಯ್, ನಟನಾಗಿ, ನಾಯಕನಟನಾಗಿ, ಬರಹಗಾರರಾಗಿ, ನಿರ್ಮಾಪಕರಾಗಿ ಬೆಳೆದು ನಿಂತರು.
6 ಕೋಟಿ ಕನ್ನಡಿಗರ ಪ್ರೀತಿ, ಆಶೀರ್ವಾದದಿಂದ ನಿರ್ದೇಶನಕ್ಕೂ ಕೈ ಹಾಕಿ ಸೈ ಅನಿಸಿಕೊಂಡ್ರು. ಹೌದು.. ಸಲಗ ಚಿತ್ರದಲ್ಲಿ ಅವ್ರ ನಟನೆ ಹಾಗೂ ನಿರ್ದೇಶನಾ ಕಂಡು ಎಲ್ರೂ ಫಿದಾ ಆದ್ರು. ಬಾಕ್ಸ್ ಆಫೀಸ್ನಲ್ಲಿ ಸುಮಾರು 30 ಕೋಟಿಗೂ ಅಧಿಕ ಮೊತ್ತ ಕಲೆ ಹಾಕಿದ ಸಲಗ, ಸ್ಯಾಂಡಲ್ವುಡ್ನ ಸೆನ್ಸೇಷನಲ್ ಸಿನಿಮಾ ಆಗಿ ಪರಿಣಮಿಸಿತು. ಅಪ್ಪು ಅಗಲಿಕೆಯಿಂದ ಅದ್ರ ಸಕ್ಸಸ್ ಸೆಲೆಬ್ರೇಷನ್ಗೆ ಬ್ರೇಕ್ ಬಿದ್ರೂ, ಹೌಸ್ಫುಲ್ ಪ್ರದರ್ಶನದೊಂದಿಗೆ ಪರಭಾಷಿಗರ ಕಣ್ಣು ನಮ್ಮ ವಿಜಯ್ರ ವಿಜಯದ ಮೇಲೆ ಬೀಳುವಂತಾಯ್ತು.
ಪಕ್ಕದ ಟಾಲಿವುಡ್ನ ಲಿವಿಂಗ್ ಲೆಜೆಂಡ್ ನಂದಮೂರಿ ಬಾಲಕೃಷ್ಣರ 107ನೇ ಚಿತ್ರ ಮೈತ್ರಿ ಮೂವಿ ಮೇಕರ್ಸ್ ಅನ್ನೋ ಪ್ರತಿಷ್ಠಿತ ಬ್ಯಾನರ್ನಲ್ಲಿ ತಯಾರಾಗ್ತಿದೆ. ಇತ್ತೀಚೆಗೆ ಕ್ರ್ಯಾಕ್ ಚಿತ್ರದ ಸಾರಥಿ ಗೋಪಿಚಂದ್ ಮಾಲಿನೇನಿ ಌಕ್ಷನ್ ಕಟ್ನಲ್ಲಿ ಆ ಸಿನಿಮಾ ಸೆಟ್ಟೇರಿತ್ತು. ಆ ಚಿತ್ರಕ್ಕೀಗ ನಮ್ಮ ದುನಿಯಾ ವಿಜಯ್ ಹೊಸದಾಗಿ ಸೇರ್ಪಡೆ ಆಗಿದ್ದಾರೆ. ಅದನ್ನ ಸ್ವತಃ ಡೈರೆಕ್ಟರ್ ಹಾಗೂ ಪ್ರೊಡಕ್ಷನ್ ಬ್ಯಾನರ್ ಅಧಿಕೃತವಾಗಿ ಘೋಷಿಸಿದೆ.
ಅಲ್ಲಿಗೆ ದುನಿಯಾ ವಿಜಯ್ ನಟಸಿಂಹ ಬಾಲಯ್ಯನ ಎದುರು ಖಡಕ್ ಖಳನಾಯಕನಾಗಿ ಅಬ್ಬರಿಸೋದು ಖಾತರಿ ಆಯ್ತು. ಪುಷ್ಪದಲ್ಲಿ ಡಾಲಿ ಧನಂಜಯ ಜಾಲಿ ರೆಡ್ಡಿಯಾಗಿ ಆರ್ಭಟಿಸಿದ್ರು. ಇದೀಗ ವಿಜಯ್ ಬಾಲಯ್ಯ ಜೊತೆ ಕಾಣಸಿಗಲಿದ್ದಾರೆ ಅನ್ನೋದೇ ಇಂಟರೆಸ್ಟಿಂಗ್ ಅನಿಸಿದೆ. ಬಹಳ ದೊಡ್ಡ ಮೊತ್ತದ ರೆಮ್ಯುನರೇಷನ್ ನೀಡಿ, ಆರು ತಿಂಗಳ ಡೇಟ್ಸ್ ಪಡೆದಿರೋ NBK107 ಟೀಂ, ಹೀರೋ ಬಾಲಯ್ಯನಷ್ಟೇ ಪವರ್ಫುಲ್ ರೋಲ್ನ ನೀಡ್ತಿರೋದು ಇಂಪ್ರೆಸ್ಸೀವ್. ಸಾಮಾನ್ಯವಾಗಿ ಕನ್ನಡ ಸಿನಿಮಾಗಳು ಇತ್ತೀಚೆಗೆ ಬೇರೆ ಭಾಷೆಗೂ ಡಬ್ ಆಗಿ ಬಹುಭಾಷಾ ಚಿತ್ರಗಳಾಗಿ ತೆರೆಗಪ್ಪಳಿಸುತ್ತಿವೆ. ಆದ್ರೆ ಸಲಗ ನಮ್ಮ ಸ್ಯಾಂಡಲ್ವುಡ್ನಲ್ಲೇ ಸೌಂಡ್ ಮಾಡಿ, ಪರಭಾಷಿಗರ ಗಮನ ಸೆಳೆದಿದ್ದು ಮಾತ್ರ ಖುಷಿಯ ವಿಚಾರ.
ಇದೇ ತಿಂಗಳಾಂತ್ಯಕ್ಕೆ ಹೈದ್ರಾಬಾದ್ಗೆ ಹಾರಲಿರೋ ದುನಿಯಾ ವಿಜಯ್ ಸಿನಿದುನಿಯಾದ ಅಸಲಿ ಗೈರತ್ತು ಪ್ಯಾನ್ ಇಂಡಿಯಾಗೆ ಪರಿಚಯ ಆಗೋ ಸಮಯ ಬಂದಿದೆ. ತಂದೆ- ತಾಯಿ ಕಳೆದುಕೊಂಡು ನೋವಲ್ಲಿರೋ ವಿಜಯ್ರಿಗೆ ಬಹುಶಃ ಈ ಟಾಲಿವುಡ್ ಆಫರ್ ಅವ್ರ ಮನಸ್ಸನ್ನ ಕೊಂಚ ಹಗುರಾಗಿಸಿರೋದ್ರಲ್ಲಿ ಡೌಟೇ ಇಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ