Saturday, September 21, 2024

ಕಾಲೇಜಿಗೂ ಹಬ್ಬಿದ ಕೋಮುದ್ವೇಷ

ಚಿಕ್ಕಮಗಳೂರು: ಇಷ್ಟು ದಿನ ಕೋಮುವಾದವನ್ನು ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಕೆಲವು ಪಕ್ಷಗಳು ಬಳಸುತ್ತಿದ್ದವು.  ಆದರೆ ಇದೀಗ ಈ ಕೋಮುದ್ವೇಷ ಶಾಲೆಗೂ ಪ್ರವೇಶಿಸಿದ ದುರಂತದ ಸುದ್ದಿ ಚಿಕ್ಕಮಗಳೂರಿನಿಂದ ವರದಿಯಾಗಿದೆ. ಕೋಮುಸಾಮರಸ್ಯದಿಂದ ಒಂದಾಗಿರಬೇಕಿದ್ದ ನಿಷ್ಕಲ್ಮಷ ಮನಸ್ಸಿನ ಮಕ್ಕಳು ಇಂದು ದೊಡ್ಡವರ ಕೋಮುದ್ವೇಷವನ್ನು ತಮ್ಮ ಒಡಲಲ್ಲೂ ತುಂಬಿಕೊಂಡು, ಅದನ್ನು ಶಾಲೆಯ ಅಂಗಳಕ್ಕೂ ತಂದಿರುವುದು ನಮ್ಮ ಸಮಾಜದ ದುರಂತವೇ ಸರಿ.

ಚಿಕ್ಕಮಗಳೂರು ಜಿಲ್ಲೆಯ ಮುಸ್ಲಿಂ ವಿದ್ಯಾರ್ಥಿಗಳು ಸ್ಕಾರ್ಫ್ ಧರಿಸಿ ಕಾಲೇಜಿಗೆ ಬರುವುದನ್ನು ವಿರೋಧಿಸಿ ಕೊಪ್ಪ ತಾಲೂಕಿನ ಬಾಳಗಡಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬಂದ ಘಟನೆ ಇಂದು ಕಾಲೇಜಿನಲ್ಲಿ ನಡೆದಿದೆ.

ಮೂರು ವರ್ಷಗಳ ಹಿಂದೆಯೂ ಸ್ಕಾರ್ಫ್ ವಿವಾದವಾಗಿತ್ತು ಆಗ ಪೋಷಕರು ಪ್ರಾಂಶುಪಾಲರು ವಿವಾದವನ್ನು ತಿಳಿಗೊಳಿಸಿದ್ದರು. ಇದೀಗ ಮತ್ತೆ ಇದೇ ವಿವಾದ ಹುಟ್ಟಿಕೊಂಡಿದೆ ಮುಸ್ಲಿಂ ವಿದ್ಯಾರ್ಥಿಗಳು ಕಾಲೇಜಿಗೆ ಸ್ಕಾರ್ಫ್ ಧರಿಸಿ ಬರುವುದನ್ನು ಖಂಡಿಸಿ ಹಲವು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಬಂದಿದ್ದಾರೆ…

ಸಚಿನ್ ಶೆಟ್ಟಿ, ಪವರ್ ಟಿವಿ, ಚಿಕ್ಕಮಗಳೂರು…

RELATED ARTICLES

Related Articles

TRENDING ARTICLES