ಹಾವೇರಿ: ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ಮುಖ್ಯೋಪಾಧ್ಯಾಯಿನಿ, ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಭಾರತದ ಮೊಟ್ಟ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಬಣಕಾರ ಮಾಜಿ ಸಚಿವರು, ಮಾಜಿ ವಿಧಾನಸಭಾ ಅಧ್ಯಕ್ಷ ಪ್ರತಿಷ್ಠಾನ ಸೊಸಿಯಲ್ ಟ್ರಸ್ಟ್ ಚಿಕ್ಕೊಣತಿ, ಹಾಗೂ ಯು.ಬಿ ಬಣಕಾರ ಅಭಿಮಾನಿ ಬಳಗ ಹಿರೇಕೆರೂರು ಇವರ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಧಣಿವರಿಯದ ಸಂಶೋಧಕಿ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು ಬಿ ಬಣಕಾರ ದೇಶದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡಿದ ವೀರ ಮಹಿಳೆ ಸಾವಿತ್ರಿಬಾಯಿ ಫುಲೆ,ಆಧುನಿಕ ಶಿಕ್ಷಣದ ತಾಯಿಯಾಗಿ ಮಹಿಳಾ ಶಿಕ್ಷಣ ಮತ್ತು ಹಕ್ಕುಗಳಿಗಾಗಿ ಹೋರಾಡಿದರು. ಅವರ ಸೇವೆ ಈ ದೇಶಕ್ಕೆ ಸ್ಮರಣೀಯ ಎಂದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕ ಮಹಿಳೆಯರಾದ ದ್ರಾಕ್ಷಾಯಣಿ, ಜಯಶ್ರೀ ಇ ಕೆ, ರತ್ನಾ ಬಣಕಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ತಹಶೀಲ್ದಾರ ಉಮಾ ಕೆ, ಬಿಇಓ ಶಶಿಧರ ಎನ್, ಜಗದೀಶ್ ಬಳಿಗಾರ, ಮಾರುತೆಪ್ಪ ಕೆ ಹೆಚ್ ಸೇರಿದಂತೆ ಅನೇಕರು ಇದ್ದರು.