Saturday, January 11, 2025

ಸಿಎಂ ಎದುರು ವೇದಿಕೆ ಮೇಲೆಯೇ ಕೈ ಕೈ ಮಿಲಾಯಿಸಿದ ರಾಜಕೀಯ ನಾಯಕರು

ರಾಮನಗರ: ರಾಮನಗರದ ಸಿಎಂ ಕಾರ್ಯಕ್ರಮದಲ್ಲಿ ಅಶ್ವಥ್ ನಾರಾಯಣ್ ಭಾಷಣಕ್ಕೆ ಸಂಸದ ಡಿ.ಕೆ.ಸುರೇಶ್ ಹಾಗೂ ಎಂಎಲ್​ಸಿ ಎಸ್‌. ರವಿ ಗರಂ ಆದರು. ಅಶ್ವಥ್ ನಾರಾಯಣ್ ಮಾತಾನಾಡುತ್ತಿದ್ದ ವೇಳೆ ತೋಳೇರಿಸಿ ಮೈಕ್ ಬಳಿಗೆ ಬಂದ ಎಂಎಲ್​ಸಿ ರವಿ ಮೈಕ್​ ಕಿತ್ತೆಸೆದು ಅಶ್ವಥ್ ನಾರಾಯಣ್​ ವಿರುದ್ಧ ವಾಗ್ವಾದ ನಡೆಸಿದರು.

ಅಭಿವೃದ್ಧಿ ಯಾರು ಮಾಡಿಲ್ಲ, ನಮ್ಮ ಬಿಜೆಪಿ ಪಕ್ಷ ಮಾತ್ರ ಮಾಡಿರುವುದು ಎಂದು ಭಾಷಣ ಮಾಡ್ತಿದ್ದ ಅಶ್ವಥ್ ನಾರಾಯಣ್‌ಗೆ “ಏನ್ ಅಭಿವೃದ್ಧಿ ಮಾಡಿದ್ದೀಯಾ?” ಎಂದು  ಡಿ.ಕೆ.ಸುರೇಶ್ ಪ್ರಶ್ನೆ ಮಾಡಿದರು. ಡಿ ಕೆ ಸುರೇಶ್​ ಜೊತೆ ಎಂಎಲ್‌ಸಿ ಎಸ್‌ ರವಿ ಸಹ ಸಾಥ್​ ನೀಡಿದರು. ವೇದಿಕೆ ಮೇಲೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಗಲಾಟೆಯನ್ನ ಸಿಎಂ  ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

RELATED ARTICLES

Related Articles

TRENDING ARTICLES