Wednesday, January 22, 2025

ಅರ್ಚನಾ ರೆಡ್ಡಿ ಕೊಲೆ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್

ಬೆಂಗಳೂರು : ಡಿಸೆಂಬರ್ 27ರ ರಾತ್ರಿ ಹೆದ್ದಾರಿಯಲ್ಲಿ ಕೊಲೆಯಾದ ಅರ್ಚನಾ ರೆಡ್ಡಿ ಕೇಸ್ ಸ್ಪೋಟಕ ತಿರುವು ಪಡೆದುಕೊಂಡಿದೆ. ಅರ್ಚನಾ ರೆಡ್ಡಿ ಪುತ್ರಿ ಯುವಿಕಾ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಅರ್ಚನಾ ರೆಡ್ಡಿ ಹತ್ಯೆ ಕೇಸ್ ನಲ್ಲಿ ಬಂಧಿತರ ಸಂಖ್ಯೆ 7ಕ್ಕೇರಿದೆ.

ಕುಡಿದ ಮತ್ತಿನಲ್ಲಿ ತಾಯಿ ಅರ್ಚನಾಗೆ ಮೆಸೇಜ್ ಮಾಡಿದ್ದ ಮಗಳು,ಅಷ್ಟಕ್ಕೂ ಮಗಳು ಯುವಿಕಾ ಮಾಡಿದ್ದ ಮೆಸೇಜ್ ಏನೆಂದರೆ ಪಬ್ ವೊಂದರಲ್ಲಿ ತನ್ನ ಬರ್ತ್ ಡೇ ಆಚರಿಸಿಕೊಂಡಿದ್ದ ಯುವಿಕಾ , ಯುವಿಕಾ ಜೊತೆ ಬರ್ತ್ ಡೇ ಪಾರ್ಟಿಯಲ್ಲಿ ನವೀನ್ ಭಾಗಿಯಾಗಿದ್ದ. ಇಬ್ಬರು ಕುಡಿದ ಮತ್ತಿನಲ್ಲಿ ಫುಲ್ ಟೈಟ್ ಆಗಿದ್ದರಿಂದ ,ಈ ವೇಳೆ ನವೀನ್ ಜೊತೆಗಿರೋ ಫೋಟೋವನ್ನ ತಾಯಿಯ ವಾಟ್ಸಾಪ್ ಗೆ ಕಳುಹಿಸಿದ್ದಳು.

“ಇವ್ನು ನನ್ ಹುಡುಗ, ಬಿಟ್ಟು ಬಿಡು” ಎಂದು ಮೆಸೇಜ್ ಮಾಡಿದ್ದಳು, ಇದನ್ನ ನೋಡಿ ಶಾಕ್ ಗೆ ಒಳಗಾಗಿದ್ದ ಅರ್ಚನಾ ಬಳಿಕ ಮಗಳನ್ನ ಮನೆಯಿಂದ ಹೊರಹಾಕಲು ನಿರ್ಧಾರಿಸಿದಳು,ಈ ವೇಳೆ ಮನೆ ಬಳಿ ಬಂದು ತಾಯಿಯನ್ನ ಬೇಡಿದ್ದ ಯುವಿಕಾ ಅಲ್ಲಿವರೆಗೂ ಯುವಿಕಾ ಹಾಗೂ ನವೀನ್ ಸಂಬಂಧದ ಬಗ್ಗೆ ಯಾವುದೇ ಸುಳಿವು ಅರ್ಚನಾಗೇ ಇರ್ಲಿಲ್ಲ, ಬಳಿಕ ಮಗಳ ಯಾವುದೇ ಕಣ್ಣೀರಿಗೆ ಕರಗದ ತಾಯಿ ,ಇದೇ ದ್ವೇಷಕ್ಕೆ ತಾಯಿಯನ್ನ ಕೊಲೆ ಮಾಡುವ ಸಂಚನ್ನು ರೂಪಿಸಿದಳು. ಈಗ ಯುವಿಕಾಳನ್ನು ಅರೆಸ್ಟ್ ಮಾಡಲಾಗಿದ್ದು ಕೊಲೆಯಲ್ಲಿ ಅವಳ ಪಾತ್ರ ಇರುವುದು ಬಯಲಾಗಿದೆ.

RELATED ARTICLES

Related Articles

TRENDING ARTICLES