Sunday, January 19, 2025

ಮೇಕೆದಾಟು ಯೋಜನೆ; ಜನಾಂದೋಲನಕ್ಕೆ ಕಾಂಗ್ರೆಸ್ ಕರೆ

ಮೇಕೆದಾಟು ಯೋಜನೆ ಆಗ್ರಹಿಸಿ ಕಾಂಗ್ರೆಸ್ ಜನಾಂದೋಲನ ಸಮಾವೇಶ ಯಾತ್ರೆ ಆರಂಭಿಸಿದೆ. ಜ.9 ರಿಂದ ಆರಂಭವಾಗೋ ಕಾಂಗ್ರೆಸ್‌ನ ಮೇಕೆದಾಟು ಹೋರಾಟಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಿಂದ ಕಮಲ, ತೆನೆಗೆ ತಿರುಗೇಟು ನೀಡಿದ್ದು, ಯೋಜನೆ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಿದ್ದ ಅಂತ ಕೈ ತೊಡೆತಟ್ಟಿ ನಿಂತಿವೆ. ಈ ಮಧ್ಯೆ ಕಾಂಗ್ರೆಸ್‌ ಹೋರಾಟವನ್ನು ಟೀಕಿಸುವ ಕಮಲ, ತೆನೆ ನಾಯಕರಿಗೆ ಸಿದ್ದು, ಡಿಕೆಶಿ ತಿರುಗೇಟು ನೀಡಿದ್ದಾರೆ.

ಮೇಕೆದಾಟು ಯೋಜನೆ ಆಗ್ರಹಿಸಿ ಕಾಂಗ್ರೆಸ್ ಜನಾಂದೋಲನ ಹೋರಾಟಕ್ಕೆ ಕರೆ ನೀಡಿದೆ. ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಸಿದ್ದು, ಡಿಕೆಶಿ ತಮ್ಮಲ್ಲಿ ಏನೂ ಒಳ ಜಗಳ ಇಲ್ಲ ಅನ್ನೋದನ್ನ ಬಹಿರಂಗವಾಗಿಯೇ ಹೇಳಿಕೊಂಡ್ರು. ಇಬ್ಬರೂ ಜಂಟಿ ಸುದ್ದಿಗೋಷ್ಟಿ ನಡೆಸಿದ ಕೈ ನಾಯಕರು ಆಡಳಿತ ಪಕ್ಷ ಬಿಜೆಪಿ, ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದ್ರು. ಮೇಕೆದಾಟು ಹೋರಾಟ ರಾಜಕೀಯ ಪ್ರೇರಿತ ಅಲ್ಲ ಅನ್ನೋದನ್ನ ಸಾರಿ ಸಾರಿ ಹೇಳಿದ ಕೈ ನಾಯಕರು. ಈ ಯೋಜನೆ ಲಾಜಿಕಲ್ ಎಂಡ್‌ವರೆಗೂ ಹೋಗಲಿದೆ ಎಂದ್ರು.

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ರಾಜಕೀಯ ಚಿತಾವಣೆಯಿಂದ ಮೇಕೆದಾಟು ಯೋಜನೆ ವಿರೋಧಿಸುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ತಮಿಳುನಾಡಿನವರನ್ನು ಎತ್ತಿ ಕಟ್ಟುತ್ತಿರುವವರೇ ಬಿಜೆಪಿ ಯವರು, ಅಣ್ಣಾಮಲೈಯನ್ನು ಬಿಜೆಪಿ ಅವ್ರು ಎತ್ತಿಕಟ್ಟುತ್ತಿದ್ದಾರೆ. ತಮಿಳುನಾಡಿಗೆ ಬಿಜೆಪಿಯವರು ಬೆಂಬಲ ನೀಡುತ್ತಿದ್ದಾರೆ. ಈ ಯೋಜನೆ ವಿಫಲವಾಗಲು ಬಿಜೆಪಿಯವ್ರೇ ನೇರ ಕಾರಣ ಅಂತ ಸಿದ್ದರಾಮಯ್ಯ ಆರೋಪಿಸಿದರು.

ಬೆಂಗಳೂರಿಗೆ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿಗೆ ಬಹಿರಂಗ ಸವಾಲು ಹಾಕಿದ್ದಾರೆ.ಕೊರೋನಾ ಹೆಸರಲ್ಲಿ ಕುಂಟು ನೆಪ ಹೇಳಿಕೊಂಡು ಪಾದಯಾತ್ರೆಗೆ ತಡೆಯೊಡ್ಡುವ ಪ್ರಯತ್ನ ನಡೆಯುತ್ತಿದೆ. ನಮ್ಮ ಮೇಲಿನ ಅಸೂಯೆ, ಹೊಟ್ಟೆ ಕಿಚ್ಚಿನಿಂದ ಈ ರೀತಿ ಮಾಡಲಾಗುತ್ತಿದೆ. ಅಸೂಯೆಗೆ ಮದ್ದಿಲ್ಲ.ನಾವು ಇರುವವರೆಗೂ ಹೋರಾಟ ತಡೆಗಟ್ಟಲು ಸಾಧ್ಯವಿಲ್ಲ. ನಾನು ಈ ಮೂಲಕ ಬಿಜೆಪಿಯವರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ನಮ್ಮ ಉದ್ದೇಶಿತ ಪಾದಯಾತ್ರೆಯನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂದಿದ್ದಾರೆ.

ಒಟ್ಟಾರೆ, ಕಾಂಗ್ರೆಸ್ ಮೇಕೆದಾಟು ಹೋರಾಟಕ್ಕೆ ಜೆಡಿಎಸ್ ಹಾಗು ಬಿಜೆಪಿಯಿಂದ ವಿರೋಧ ವ್ಯಕ್ತವಾಗ್ತಿದೆ.. ಆದ್ರೆ, ವಿರೋಧ ಪಕ್ಷಗಳ ಟೀಕೆ ಟಿಪ್ಪಣಿ ನಡುವೆ ನಾವು ಮೇಕೆದಾಟು ಯೋಜನೆ ಆಗ್ರಹಿಸಿ ಹೋರಾಟ ಮಾಡಿಯೇ ಸಿದ್ದ ಅಂತ ಕಾಂಗ್ರೆಸ್ ನಾಯಕರು ತೊಡೆತಟ್ಟಿ ನಿಂತಿದ್ದಾರೆ.

ಸುರೇಶ್ ಬಿ ಪವರ್ ಟಿವಿ ಮೈಸೂರು.

RELATED ARTICLES

Related Articles

TRENDING ARTICLES