ನವದೆಹಲಿ: 5 ಎಕರೆ ಜಮೀನು ಇದ್ದವರಿಗೆ ಮೀಸಲಾತಿ (EWS) ಇಲ್ಲವೆಂದು ಕೇಂದ್ರ ಸರ್ಕಾರ ಹೇಳಿದೆ. ಮೀಸಲಾತಿಗೆ 8 ಲಕ್ಷ ರೂಪಾಯಿ ಆದಾಯದ ಮಿತಿ ಪರಿಗಣಿಸಲಾಗಿದೆ. ಈ ಕುರಿತಾಗಿ ತ್ರಿಸದಸ್ಯ ಸಮಿತಿ ಶಿಫಾರಸು ಮಾಡಿದ್ದು, ಅದನ್ನೇ ಒಪ್ಪಿಕೊಳ್ಳಲು ನಿರ್ಧಾರ ಕೈಗೊಂಡಿರುವುದಾಗಿ ಕೇಂದ್ರ ಸರ್ಕಾರದಿಂದ ಸುಪ್ರೀಂಕೋರ್ಟ್ ಗೆ ಮಾಹಿತಿ ನೀಡಲಾಗಿದೆ. ಐದು ಎಕರೆ ಜಮೀನು ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಕೃಷಿ ಭೂಮಿ ಹೊಂದಿದವರು ಆದಾಯ ಎಷ್ಟೇ ಇದ್ದರೂ ಕೂಡ ಮೀಸಲಾತಿಯಿಂದ ಹೊರಗಿಡಲಾಗುವುದು ಎಂದು ಹೇಳಲಾಗಿದೆ.
ಆರ್ಥಿಕವಾಗಿ ಹಿಂದುಳಿದವರು ಶೇಕಡ 10 ರಷ್ಟು ಮೀಸಲಾತಿ ಸೌಲಭ್ಯ ಪಡೆಯಲು ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂಪಾಯಿ ಒಳಗಿರಬೇಕು. ಆದರೆ, ಆದಾಯ ಎಷ್ಟೇ ಇದ್ದರೂ ಕೂಡ ಕೃಷಿ ಭೂಮಿ 5 ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದ್ದರೆ ಇಡಬ್ಲ್ಯುಎಸ್ ಕೋಟಾ ಅನ್ವಯಿಸುವುದಿಲ್ಲವೆಂದು ಸರ್ಕಾರ ಹೇಳಿದೆ.