Monday, December 23, 2024

ಮದ್ಯಪಾನವನ್ನು ನಾಶ ಮಾಡಿದ ಅಧಿಕಾರಿಗಳು

ಉಡುಪಿ : ಹೊಸ ವರ್ಷದ ಸಂಭ್ರಮದಲ್ಲಿ ಮದ್ಯ ಪ್ರಿಯರು ಮದ್ಯ ಕುಡಿಯುವ ಗುಂಗಿನಲ್ಲಿದ್ದರೆ ಉಡುಪಿ ಜಿಲ್ಲಾ ಅಬಕಾರಿ ಇಲಾಖೆಯಲ್ಲಿ ಮಾನವ ಸೇವನೆಗೆ ಆರೋಗ್ಯವಲ್ಲದ ಹಾಗೂ ಮಾರಾಟವಾಗದೇ ಉಳಿದಿರುವ ಮದ್ಯವನ್ನು ಕರ್ನಾಟಕ ರಾಜ್ಯ ಪಾನೀಯ ನಿಗಮದ ಅಧಿಕಾರಿಗಳು ಉಡುಪಿ ಡಿಪೋದ ಬಳಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ನಾಶಪಡಿಸಿದ್ದಾರೆ.

ಉಡುಪಿ ಜಿಲ್ಲಾ ಉಪ ಅಧಿಕ್ಷಕಿ ಜ್ಯೋತಿಯವರ ಸಮಕ್ಷಮದಲ್ಲಿ 746.505 ಲೀಟರ್ ವೈನ್, 1505.345ಲೀಟರ್ ಮದ್ಯ ಹಾಗೂ 2769. ಲೀಟರ್ ಬಿಯರ್​ನ್ನು ಆಳವಾದ ಹೊಂಡ ತೋಡಿ ಅದರಲ್ಲಿ ಹೂಳಲಾಗಿದೆ . ಈ ಸಂದರ್ಭದಲ್ಲಿ ಡೀಪೋ ಮ್ಯಾನೆಜರ್ ಗುರುಮೂರ್ತಿ, ಡಿಪೋ ವ್ಯವಸ್ಥಾಪಕ ಸಂತೋಷ್ ರಾವ್ ಹಾಗೂ ಮಾರಾಟ ಪ್ರತಿನಿಧಿಗಳು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES