Monday, December 23, 2024

ಈ ವರ್ಷ ಕೊರೋನಾ ಅಂತ್ಯ : WHO

ರಾಜ್ಯ : ನಾವು ಅಸಮಾನತೆಯನ್ನು ಕೊನೆಗೊಳಿಸಿದರೆ ಕೊರೋನಾ ವೈರಸ್ ಸಾಂಕ್ರಾಮಿಕವು 2022ರಲ್ಲಿ ಕೊನೆಗೊಳ್ಳುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಪುನರುಚ್ಚರಿಸಿದ್ದಾರೆ.

ಸಾಂಕ್ರಾಮಿಕ ರೋಗದ ಮೂರನೇ ವರ್ಷಕ್ಕೆ ಜಗತ್ತು ಪ್ರವೇಶಿಸಿದೆ. ಯಾವುದೇ ದೇಶವು ಸಾಂಕ್ರಾಮಿಕ ರೋಗದಿಂದ ಹೊರಬಂದಿಲ್ಲವಾದರೂ ಕೋವಿಡ್ ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ನಮ್ಮಲ್ಲಿ ಅನೇಕ ಹೊಸ ಸಾಧನಗಳಿವೆ.

ಹೀಗೆ ಅಸಮಾನತೆಯು ಮುಂದುವರಿದರೆ, ಈ ವೈರಸ್‌ನ ಹೆಚ್ಚಿನ ಅಪಾಯಗಳು ನಾವು ತಡೆಯಲು ಅಥವಾ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ನಾವು ಅಸಮಾನತೆಯನ್ನು ಕೊನೆಗೊಳಿಸಿದರೆ, ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಬಹುದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES