Monday, December 23, 2024

ಲಾಕ್​ಡೌನ್ ಸುಳಿವು ಕೊಟ್ಟ ಸಿಎಂ ಬೊಮ್ಮಾಯಿ

ರಾಜ್ಯ : ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ರೆಡಿಯಾಗಿದೆ. ಈ ಮಧ್ಯೆ ನಾಳೆ ನೈಟ್‌ ಕರ್ಫ್ಯೂ ವಿಸ್ತರಣೆ ಬಗ್ಗೆ ನಿರ್ಧಾರವಾಗಲಿದೆ.. ಜನರ ಸಹಕಾರ ನೀಡಿದ್ರೆ ಮಾತ್ರ ಲಾಕ್‌ಡೌನ್‌ ಇಲ್ಲ. ಒಂದು ವೇಳೆ ಜನರು ಯಾಮಾರಿದ್ರೆ, ಲಾಕ್‌ಡೌನ್‌ ಫಿಕ್ಸ್‌ ಎಂದು ಎಚ್ಚರಿಕೆ ನೀಡಿದೆ ಸರ್ಕಾರ.

ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಕೊರೋನಾ ಪಿಡುಗಿನ ಆತಂಕ ಮತ್ತೆ ಕಾಣಿಸಿಕೊಂಡಿದೆ. ಬೆಂಗಳೂರನ್ನು ರೆಡ್​ಜೋನ್ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ರಾಜ್ಯದಲ್ಲಿ ಕೊರೋನಾ 3ನೇ ಅಲೆಯ ಭೀತಿ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಲಾಕ್​ಡೌನ್ ಸೇರಿದಂತೆ ಕಠಿಣ ಕ್ರಮಗಳನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಜನರು ಸರ್ಕಾರದ ಮಾರ್ಗಸೂಚಿ ಪಾಲಿಸಿದರೆ ಉತ್ತಮ. ಒಂದು ವೇಳೆ ಜನರು ಸಹಕಾರ ನೀಡದಿದ್ದರೆ ಲಾಕ್‌ಡೌನ್‌ ಅನಿವಾರ್ಯ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ 3ನೇ ಅಲೆ ಕಾಣಿಸಿಕೊಳ್ಳುವ ವಾತಾವರಣ ನಿರ್ಮಾಣವಾಗಿದೆ. ಕೊರೋನಾ ಸೋಂಕಿನ ನಿಯಂತ್ರಣ ಸಂಬಂಧ ಮತ್ತೊಮ್ಮೆ ಸಭೆ ಕರೆಯಲಾಗಿದೆ. ಜನವರಿ 7ರೊಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಕೇಂದ್ರ ಸರ್ಕಾರವು ಬೆಂಗಳೂರನ್ನು ರೆಡ್​ ಝೋನ್ ಎಂದು ಘೋಷಿಸಿರುವುದರಿಂದ ಕಠಿಣ ನಿಯಮಗಳ ಜಾರಿ ಅನಿವಾರ್ಯವಾಗಬಹುದು. ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ ತಜ್ಞರು ನೀಡುವ ಸಲಹೆಗಳನ್ನು ಯಥಾವತ್ತಾಗಿ ಜಾರಿ ಮಾಡುತ್ತೇವೆ. ಸಾಮಾಜಿಕ ಅಂತರ ಪಾಲನೆಯೂ ಸೇರಿದಂತೆ ಕೊರೋನಾ ಸೋಂಕು ನಿಯಂತ್ರಣಕ್ಕೆ ಜನರು ಮುನ್ನೆಚ್ಚರಿಕೆ ವಹಿಸುವುದು ಅನಿವಾರ್ಯ. ನಿರ್ಲಕ್ಷ್ಯ ವಹಿಸಿದರೆ ಲಾಕ್‌ಡೌನ್ ಮಾಡಬೇಕಾಗುತ್ತದೆ ಎಂದು ಪರೋಕ್ಷವಾಗಿ ಕಠಿಣ ನಿರ್ಧಾರದ ಸುಳಿವು ನೀಡಿದ ಸಚಿವ ಆರ್‌.ಅಶೋಕ್‌ ಅವರು.

ಸಭೆಯ ಬಳಿಕ ತಜ್ಞರ ಸಮಿತಿ ಶಿಫಾರಸುಗಳ ಅನ್ವಯ ಕಠಿಣ ಕ್ರಮದ ಆದೇಶವನ್ನು ಸರ್ಕಾರ ಮಾಡಲಿದೆ. ಕಳೆದ ಬಾರಿಯ ಕಹಿ ಅನುಭವದ ಹಿನ್ನೆಲೆಯಲ್ಲಿ ಜನರ ಜೀವ ಮತ್ತು ಜೀವನ ರಕ್ಷಣೆಗಾಗಿ ಕೊರೋನಾ ನಿಯಂತ್ರಣ ಸರ್ಕಾರದ ಆದ್ಯತೆಯಾಗಲಿದೆ. ನೈಟ್ ಕರ್ಪ್ಯೂ ಅವದಿ ವಿಸ್ತರಣೆ, ವೀಕ್ ಎಂಡ್ ಕರ್ಪ್ಯೂ, ಸಭೆ ಸಮಾರಂಭಕ್ಕೆ ಕಡಿವಾಣದಂತಹ ಕ್ರಮ ತೆಗೆದುಕೊಳ್ಳುಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇನ್ನು, ಮಹಾರಾಷ್ಟ್ರದಲ್ಲಿ ಕೊರೋನಾ ಹೆಚ್ಚಳವಾಗಿದ್ದು, ಗಡಿ ಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಒಟ್ಟಿನಲ್ಲಿ ರಾಜ್ಯ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡುವ ಸಲುವಾಗಿ ಮಹತ್ವದ ಸಭೆ ನಡೆಸಲಿದೆ. ಸಭೆ ಬಳಿಕ ಬೆಂಗಳೂರಿಗೆ ಹೊಸ ಮಾರ್ಗಸೂಚಿ ಬರಲಿದ್ದು, ಆ ಟಫ್ ರೂಲ್ಸ್ ಹೇಗಿರಲಿದೆ ಅನ್ನೋದನ್ನ ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES