ನ್ಯೂಯಾರ್ಕ್: ಅಮೇರಿಕಾದಲ್ಲಿ ಮತ್ತೆ ಕೊರೋನ ಸುನಾಮಿ ಬೀಸಿ ಅಮೇರಿಕ ತತ್ತರಿಸಿ ಹೋಗಿದೆ. ಅಲ್ಲಿನ ನ್ಯೂಯಾರ್ಕ್ ನಗರವೊಂದರಲ್ಲೇ 2021ರ ಕೊನೆಯ ದಿನವಾದ ಡಿಸೆಂಬರ್ 31ರಂದು 85 ಸಾವಿರ ಜನರಿಗೆ ಕೊರೋನ ಸೊಂಕು ತಗುಲಿರುವ ಬಗ್ಗೆ ವರದಿಯಾಗಿದೆ. ಕೊವಿಡ್ ಆರಂಭವಾದಾಗಿನಿಂದ ಇದುವರೆಗಿನ ಅತಿಹೆಚ್ಚು ಪ್ರಕರಣ ಶನಿವಾರ ಪತ್ತೆಯಾಗಿರುವುದಾಗಿ ಇಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
ಒಟ್ಟು 85 476 ಜನರಿಗೆ ಕೊರೋನ ಸೋಂಕು ತಗುಲಿರುವುದಾಗಿ ಅಧಿಕಾರಿಗಳು ಧೃಡಪಡಿಸಿದ್ದಾರೆ. 88 ಜನರು ಮೃತಪಟ್ಟಿದ್ದಾರೆ. ಇಡೀ ಅಮೇರಿಕದಾದ್ಯಂತ ಗುರುವಾರ ಒಂದೇ ದಿನ 5 ಲಕ್ಷಕ್ಕೂ ಅಧಿಕ ಜನರಿಗೆ ಕೊರೋನ ಸೋಂಕು ತಗುಲಿದ್ದು 1181 ಜನ ಮೃತಪಟ್ಟಿದ್ದಾರೆ. ಹಾಗಾಗಿ ನ್ಯೂಯಾರ್ಕ್ ಒಂದರಲ್ಲೇ ಒಂದೇ ದಿನ 95 ಸಾವಿರಕ್ಕೂ ಅಧಿಕ ಕೊವಿಡ್ ಲಸಿಕೆಯನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ಧಾರೆ.