Sunday, December 22, 2024

ಬರಲಿರುವ ದಿನಗಳಲ್ಲಿ ನಮ್ಮನ್ನಾಳಲಿದೆ ಕೃತಕ ಬುದ್ದಿಮತ್ತೆ

ಜಗತ್ತಿನ ಅತಿದೊಡ್ಡ ಶ್ರೀಮಂತ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಬಗ್ಗೆ ಗೊತ್ತಿರಬೇಕಲ್ಲವ? ಈಗಾಗಲೇ ದೂರಕ್ರಮಿಸುವ ವಿದ್ಯುತ್ ಚಾಲಿತ ಯಶಸ್ವಿ ವಾಹನಗಳನ್ನು ತಯಾರಿಸಿರುವ ಎಲಾನ್ ಮಸ್ಕ್ ಕಂಪನಿ ಇದೀಗ ಇನ್ನೂ  ಹಲವು ವಿಕ್ರಮಗಳನ್ನು ಮಾಡಲು ಹೊರಟಿದೆ. ಇದಗೀ ಸ್ಪೇಸ್ ಎಕ್ಸ್ ಭಾರತದಲ್ಲಿ ತನ್ನ ಇಂಟರ್​ನೆಟ್ ಸೇವೆಯನ್ನು ಕೊಡಲು ತಯಾರಾಗುತ್ತಿದೆ. ಅದಕ್ಕಾಗಿ ಇಗಾಗಲೇ ಭೂಮಿಯ ಸುತ್ತ ನಭೋಮಂಡಲದಲ್ಲಿ ಸಾಲು ಸಾಲು ಉಪಗ್ರಹಗಳನ್ನು ಆಕಾಶದಲ್ಲಿ ತೇಲಿಬಿಟ್ಟಿದೆ. ಇದರ ಮೂಲಕ ಭೂಮಿಯ ಯಾವುದೇ ಮೂಲದಲ್ಲಿದ್ದರೂ ಅವರ ಡಿಶ್ ಆ್ಯಂಟೆನಾಗೆ ಇಂಟರ್​ನೆಟ್ ಸಂಪರ್ಕ ನೀಡಲಾಗುತ್ತದೆ. ಹೀಗಾಗಿ ಈಗ ನೀವು ಕಗ್ಗಾಡಲ್ಲೇ ಇರಿ, ಮರುಭೂಮಿಯಲ್ಲೇ ಇರಿ, ಐಸ್​ಲ್ಯಾಂಡ್​ನಲ್ಲೇ ಇರಿ, ಸ್ಪೇಸ್ ಎಕ್ಸ್ ಇಂಟರ್​ನೆಟ್ ಬಳಸಿ ಜಗತ್ತನ್ನೇ ಜಾಲಾಡಬಹುದು. ಇದರಿಂದ ಕುಗ್ರಾಮದಲ್ಲಿರುವ ವ್ಯಾಪಾರಿಯೂ ಸಹ ತನ್ನ ಮೊಬೈಲ್ ಮೂಲಕವೇ ಆನ್​ಲೈನ್ ವ್ಯಾಪಾರವನ್ನು ಮಾಡಬಹುದು, ದೈತ್ಯ ಕಂಪನಿಗಳಿಗೆ ತನ್ನ ಪ್ರತಿಭೆಯ ಮೂಲಕ ಸವಾಲೆಸೆಯಬಹುದು!

ಬರಿ ಇದಿಷ್ಟೇ ಅಲ್ಲ, ನೀವು ಇದೀಗ ರುಚಿರುಚಿ ತಿನಿಸಿಗಾಗಿ ಹೋಟೆಲ್ಲಿಗೆ ಹೋಗುವುದು ಬೇಕಿಲ್ಲ. ಅಥವ ಈಗಾಗಲೇ ಝೊಮೊಟೊ ಮತ್ತಿತರ ಫುಡ್ ಡೆಲಿವರಿ ಕಂಪನಿಗಳಿಗೆ ಆಹಾರ ಕಳುಹಿಸಿಕೊಡುವಂತೆ ದುಂಬಾಲು ಬೀಳಬೇಕಿಲ್ಲ. ಡೆಲಿವರಿ ಬಾಯ್ ಟ್ರಾಫಿಕ್​ಅನ್ನು ಭೇದಿಸಿಕೊಂಡು ಯಾವಾಗ ಆಹಾರ ತೆಗೆದುಕೊಂಡು ಬರುತ್ತಾನೆ ಎಂದು ಕಾಯುತ್ತ ಕೂರಬೇಕಿಲ್ಲ. ಈಗಾಗಲೇ ತಂತ್ರಜ್ಷಾನ ಡ್ರೋನ್ ಡೆಲಿವರಿಯೆಂಬ ಕನಸನ್ನು ಸಾಕ್ಷಾತ್ಕಾರಗೊಳಿಸುತ್ತಿದೆ. ಈ ಕನಸು ಇದೇ ವರ್ಷ ನನಸಾಗುವ ಎಲ್ಲ ಸಾಧ್ಯತೆಗಳೂ ಇವೆ.

ದೈತ್ಯ ಫುಡ್ ಡೆಲಿವರಿ ಕಂಪೆನಿ ಸ್ವಿಗ್ಗಿ ಇಂತಹದೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಈಗಾಗಲೇ ಪ್ರಾಯೋಗಿಕವಾಗಿ ಹಲವು ಮನೆಗಳಿಗೆ ಡ್ರೋನ್ ಮೂಲಕ ಆಹಾರ ತಲುಪಿಸಿದೆ. ಸಂಚಾರ ದಟ್ಟಣೆ ಇರುವ ನಗರದಲ್ಲೇ 5 ಕಿಲೋಮಿಟರ್ ದೂರವನ್ನು ಕೇವಲ 5 ನಿಮಿಷಗಳಲ್ಲಿ ಕ್ರಮಿಸಿ ಆಹಾರ ವಿತರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇದಕ್ಕಾಗಿ ಸ್ವಿಗ್ಗಿ ಕೇಂದ್ರ ಸರ್ಕಾರದ ಬಾಗಿಲನ್ನು ಬಡೆದಿದೆ. ಒಂದೊಮ್ಮೆ ಕೇಂದ್ರ ಸರ್ಕಾರ ಸ್ವಿಗ್ಗಿಯ ಈ ಕನಸಿಗೆ ಒಪ್ಪಿಗೆ ನೀಡಿದರೆ ಇನ್ನು ಕೆಲವೇ ದಿನಗಳಲ್ಲಿ ಸ್ವಿಗ್ಗಿ ನಮ್ಮ ನಿಮ್ಮ ಮನೆಗಳ ಬಾಗಿಲಿಗೆ ದ್ರೋಣ್ ಮೂಲಕ ಆಹಾರ ಒದಗಿಸಲಿದೆ. ಬರೀ ಉಟಕ್ಕಷ್ಟೇ ಈ ಪ್ರಯತ್ನ ನಿಂತಿಲ್ಲ, ಔಷಧಿ ವಿತರಣೆ, ಆನ್​ಲೈನ್ ಶಾಪಿಂಗ್ ಹೀಗೆ ಪ್ರತಿಯೊಂದು ಡ್ರೋನ್ ಮೂಲಕ ನಿಮ್ಮ ಮನೆಬಾಗಿಲಿಗೆ ಸೇವೆ ದೊರೆಯಲಿದೆ. ಇವೆಲ್ಲ ನಿಜವಾಗದರೆ ಆಗ ಆಕಾಶದಲ್ಲಿ ಡ್ರೋನ್​ಗಳ ಟ್ರಾಫಿಕ್ ಜಾಮ್ ಉಂಟಾಗುವ ದಿನಗಳು, ಡ್ರೋನ್​ಗಳ ಢಿಕ್ಕಿಯಾಗಿ ಅವು ನೆಲಕ್ಕಪ್ಪಳಿಸುವ ದಿನಗಳು ದೂರವಿಲ್ಲ!

ಈಗಾಗಲೇ ತಂತ್ರಜ್ಷಾನ ನಮ್ಮ ಮೇಲೆ ಆಲ್​ಮೋಸ್ಟ್ ಸವಾರಿ ಮಾಡುತ್ತಿದೆ. ಅದು ಈಗ ಮತ್ತಷ್ಟು ಹೆಚ್ಚುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿವೆ. ದೂರ ಕ್ರಮಿಸುವ ಕರೆಂಟ್ ಬೈಕ್​ಗಳಿಂದ ಹಿಡಿದು, 5ಜಿ ತಂತ್ರಜ್ಷಾನ,  ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಇರುವ ರೋಬೋಟ್​ಗಳು ನಮ್ಮ ಬದುಕನ್ನೇ ಬದಲಿಸುವ, ನಮ್ಮ ಮೇಲೆ ಪೂರ್ಣ ಹತೋಟಿ ಸಾಧಿಸುವ ದಿನಗಳೂ ಬರಬಹುದು.  ಕೆಲವೊಂದು ಸೈನ್ಸ್ ಫಿಕ್ಷನ್ ಸಿನಿಮಾಗಳಲ್ಲಿ ನಾವೇ ನಿರ್ಮಿಸಿದ ಸ್ವಯಂ ಹತೋಟಿ ಹೊಂದಿದ ರೋಬೋಟ್​ಗಳು ಮನುಷ್ಯರನ್ನೇ ಅಡಿಯಾಳಾಗಿಸಿಕೊಳ್ಳುವುದನ್ನು ನೋಡಿದ್ದೇವೆ. ಈಗ ಬರುತ್ತಿರುವ ಅತ್ಯಾಧುನಿಕ ತಂತ್ರಜ್ಷಾನ ಹಾಗೂ ರೋಬೋಟ್​ಗಳನ್ನು  ನೋಡಿದರೆ ಈ ಕೃತಕ ಬುದ್ದಿಮತ್ತೆಯ ರೋಬೊಗಳು ನಮ್ಮ ಮೇಲೆ ಸವಾರಿ ಮಾಡುವ ದಿನಗಳು ಅತಿ ಹತ್ತಿರದಲ್ಲೇ ಇರಬಹುದು.

ಓಂಪ್ರಕಾಶ್ ನಾಯಕ್, ಪವರ್ ಟಿವಿ

RELATED ARTICLES

Related Articles

TRENDING ARTICLES