Monday, December 23, 2024

ಪ್ರೊ ಕಬಡ್ಡಿ ಲೀಗ್; ಬೆಂಗಳೂರು ಬುಲ್ಸ್-ಟೈಟನ್ ಸಮಬಲ

ಬೆಂಗಳೂರು: ಬೆಂಗಳೂರು ಬುಲ್ಸ್ ಕಬಡ್ಡಿಯಲ್ಲಿ ಜಿದ್ದಾಜಿದ್ದಿನ ಹೋರಾಟ ಪ್ರದರ್ಶಿಸಿ ತೆಲುಗು ಟೈಟನ್ಸ್ ತಂಡದ ಜೊತೆ ಡ್ರಾ ಮಾಡಿಕೊಂಡಿದೆ. ಚಂದ್ರನ್ ರಂಜಿತ್ ಮತ್ತು ಪವನ್ ಶೆರಾವತ್​ರವರ ಅಮೋಘ ಆಟದ ನೆರವಿನಿಂದ ಬೆಂಗಳೂರು ಬುಲ್ಸ್ ತಂಡವು 34-34ರ ಅಂಕಗಳೊಂದಿಗೆ ಆಟವನ್ನು ಟೈ ಮಾಡಿಕೊಳ್ಳುವಲ್ಲಿ ಸಫಲವಾಯಿತು. ಅಂಕಿತ್ ಬೆನಿವಾಲ್ ಮತ್ತು ಆದರ್ಶ್​ ತೆಲುಗು ಟೈಟನ್ಸ್ ಪರವಾಗಿ ಅತ್ಯುತ್ತಮ ಹೋರಾಟ ಪ್ರದರ್ಶಿಸಿ ತಂಡ ಕುಸಿಯದಂತೆ ನೋಡಿಕೊಂಡರು.

ನಗರದ ವೈಟ್​ಫೀಲ್ಡ್​ನಲ್ಲಿರುವ ಹೋಟೆಲ್ ಶೆರಟಾನ್ ಗ್ರ್ಯಾಂಡ್​ನಲ್ಲಿ ಶನಿವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್​ನ ಮೊದಲಾರ್ಧದಲ್ಲಿ ಟೈಟನ್ 12-14ರಿಂದ ಹಿನ್ನಡೆ ಅನುಭವಿಸಿತ್ತು. ಆದರೆ ದ್ವಿತಿಯಾರ್ಧದಲ್ಲಿ ಬುಲ್ಸ್​ಗೆ ಟಕ್ಕರ್ ನೀಡಿದ ಟೈಟನ್ 27-25ರಿಂದ ಮುನ್ನಡೆ ಗಳಿಸಿತು. ತಿರುಗೇಟು ನೀಡಿದ ಬುಲ್ಸ್ ತಂಡ ಪುನಃ 30-28ರಿಂದ ಮುನ್ನಡೆ ಸಾಧಿಸಿತು. ಆದರೆ ಕೊನೆಯಲ್ಲಿ ಎರಡೂ ತಂಡಗಳು 34-34ರ ಅಂಕಗಳೊಂದಿಗೆ ಸಮಬಲ ಸಾಧಿಸಿದವು.

RELATED ARTICLES

Related Articles

TRENDING ARTICLES