Sunday, November 10, 2024

ಲವ್ ಯು ರಚ್ಚು 5ಕ್ಕೆ3

ಕಾಂಟ್ರವರ್ಸಿಗಳಿಂದಲೇ ಹೆಚ್ಚು ಸದ್ದು ಮಾಡಿದ ಚಿತ್ರ ಲವ್ ಯೂ ರಚ್ಚು. ಅಜಯ್ ರಾವ್- ಡಿಂಪಲ್ ಕ್ವೀನ್ ಜೋಡಿ ಬಿಗ್ ಸ್ಕ್ರೀನ್​ನಲ್ಲಿ ಮಾಡಿತಾ ಮೋಡಿ ಅನ್ನೋದ್ರ ಜೊತೆ ಚಿತ್ರಕ್ಕೆ ಪ್ರೇಕ್ಷಕ ಪ್ರಭು ಕೊಟ್ಟ ಮಾರ್ಕ್ಸ್ ಎಷ್ಟು ಅನ್ನೋದಕ್ಕೆ ಈ ರಿವ್ಯೂ ರಿಪೋರ್ಟ್​ ನೋಡಿ.

ಅಜಯ್ ರಾವ್ ಹಾಗೂ ರಚಿತಾ ರಾಮ್ ಅಭಿನಯಿಸಿರುವ ಈ ಸಿನಿಮಾ ಅತಿಯಾಗಿ ಪ್ರೀತಿಸೋ ಗಂಡ, ಹೆಂಡತಿಯ ಕಥೆ. ನಾಯಕಿಯ ಹೆಸರೇ ಚಿತ್ರದ ಟೈಟಲ್. ಹೀಗಾಗಿ ಇಡೀ ಚಿತ್ರ ‘ರಚ್ಚು’ ಎನ್ನುವ ನಾಯಕಿಯ ಪಾತ್ರದ ಸುತ್ತಲೇ ಸುತ್ತುತ್ತದೆ. ಇಡೀ ಚಿತ್ರ ಎರಡು ದಿನದಲ್ಲಿ ನಡೆಯುವ ಕಥೆಯಾಗಿದೆ. ಎರಡು ದಿನಗಳಲ್ಲಿ ಏನಾಗುತ್ತೆ ಎನ್ನುವುದನ್ನು ಸಿನಿಮಾದಲ್ಲಿ  ತೋರಿಸಿದ್ದಾರೆ. ಚಿತ್ರದ ನಾಯಕಿ ರಚಿತಾ ಅಲಿಯಾಸ್ ರಚ್ಚು ಹುಟ್ಟು ಹಬ್ಬದ ಸೀನ್ ನಿಂದ ಶುರು ಆಗುತ್ತೆ. ನಟ ಅಜಯ್ ದುಬಾರಿ ಗಿಫ್ಟ್ ಖರೀದಿಸಿ ರಚ್ಚುಗಾಗಿ ತೆಗೆದುಕೊಂಡು ಹೋಗ್ತಾನೆ. ಇಲ್ಲಿಂದ ರಚ್ಚು ಮತ್ತು ಅಜಯ್ ಕಥೆ ಶುರು.

ಚಿತ್ರದ ಶುರುವಿನಲ್ಲಿ ಕುತೂಹಲ, ರೋಚಕತೆಯಿಂದ ಪ್ರೇಕ್ಷಕರನ್ನು ಕಟ್ಟಿ ಹಾಕುವಲ್ಲಿ ನಿರ್ದೇಶಕ ಶಂಕರ್ ಯಶಸ್ವಿ ಆಗಿದ್ದಾರೆ. ಚಿತ್ರದಲ್ಲಿ ನಾಯಕನ ಪಾತ್ರ ಇಲ್ಲ ಅಂದರೆ ನಾಯಕಿ ಇಲ್ಲ. ಒಂದೇ ನಾಣ್ಯದ, ಎರಡು ಮುಖಗಳಿದ್ದಂತೆ ಈ ಎರಡು ಪಾತ್ರಗಳು. ಪತ್ನಿ “ರಚ್ಚು’ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಅಜಯ್‌, ಆಕೆಗಾಗಿ ಎಂತಹ ತ್ಯಾಗಕ್ಕೂ ಶತ ಸಿದ್ಧ. ರಚ್ಚುಗಾಗಿ ಮಾಡಬಾರದ ಸಾಹಸಗಳನ್ನು ಮಾಡ್ತಾ ಹೋಗ್ತಾನೆ ಅಜಯ್. ಅಷ್ಟಕ್ಕೂ ಪತ್ನಿ ರಚ್ಚುಗಾಗಿ, ಪತಿ ಅಜಯ್‌ ತೆಗೆದುಕೊಂಡಿರುವ ರಿಸ್ಕ್ ಎಂಥದ್ದು ಅನ್ನೋದೇ “ಲವ್‌ ಯು ರಚ್ಚು’.

ಇದು ಕಾಲೇಜ್​ ಎಳೆ ವಯಸ್ಸಿನ ಲವ್​ಸ್ಟೋರಿ ಸಿನಿಮಾ ಅಂತೂ ಅಲ್ಲ. ಒಂದು ಸುಂದರ ಸಂಸಾರದಲ್ಲಿ ಏನಿರಬೇಕು, ಏನಿರಬಾರದು ಅನ್ನೋ ವಿಷಯ ವಿವರಿಸುವ ಕಥೆ. ಹೀಗಾಗಿ ಫ್ಯಾಮಿಲಿ ಪ್ರೇಕ್ಷಕರಿಗೆ ಈ ಸಿನಿಮಾ ಹೆಚ್ಚು ಕನೆಕ್ಟ್​ ಆಗುತ್ತೆ. ಸಿನಿಮಾ ಮೂಲಕ ಸಂಬಂಧಗಳ ಮೌಲ್ಯ ತಿಳಿಸಿಕೊಡುವ  ಪ್ರಯತ್ನ ಚಿತ್ರತಂಡ ಮಾಡಿದೆ.

ಎರಡು ದಿನ, ಎರಡು ಕೊಲೆ..  ಸೂಪರ್ ಮರ್ಡರ್ ಮಿಸ್ಟರಿ ಕಥೆ ಹೊಂದಿರುವ ಲವ್ ಯೂ ರಚ್ಚುಗೆ ರೊಮ್ಯಾಂಟಿಕ್ ಟಚ್ ಕೂಡ ಕೊಟ್ಟಿದ್ದಾರೆ ನಿರ್ದೇಶಕರು.ಅಜಯ್ ರಾವ್ ಮಾಸ್ ಆ್ಯಕ್ಷನ್ , ರಚಿತಾ ರಾಮ್ ಬೋಲ್ಡ್ ಸೀನ್ಸ್ , ಶಂಕರ್ ರಾಜ್‌ ನಿರ್ದೇಶನ, ಗುರುದೇಶ್‌ ಪಾಂಡೆ ನಿರ್ಮಾಣ, ಬಿ ಸುರೇಶ್, ಅಚ್ಚುತ್‌ ಕುಮಾರ್, ಅರುಣ್ ಗೌಡ, ರಘು ಶಿವಮೊಗ್ಗ ತಮ್ಮ ತಮ್ಮ ಪಾತ್ರಗಳನ್ನ ಸೊಗಸಾಗಿ ನಿರ್ವಹಿಸಿದ್ದಾರೆ. ಸತಿ ಪತಿಯಾಗಿ ಅಜಯ್- ರಚಿತಾ ಸೆಂಟರ್ ಆಫ್ ಅಟ್ರ್ಯಾಕ್ಷನ್.

ಲವ್ ಯೂ ರಚ್ಚು ಪ್ಲಸ್ ಪಾಯಿಂಟ್ಸ್

  1. ಶಂಕರ್ ರಾಜ್ ನಿರ್ದೇಶನ
  2. ಅಜಯ್ ರಾವ್- ರಚಿತಾ ನಟನೆ
  3. ಸಂಬಂಧಗಳ ಮೌಲ್ಯ
  4. ಕದ್ರಿ ಮಣಿಕಾಂತ್ ಸಂಗೀತ

ಲವ್ ಯೂ ರಚ್ಚು ಮೈನಸ್ ಪಾಯಿಂಟ್ಸ್

ಸಿನಿಮಾದಲ್ಲಿ ರೋಚಕ ಟ್ವಿಸ್ಟ್ ಇರುವ ಕಾರಣಕ್ಕೆ, ಅದೇ ನಿರೀಕ್ಷೆಯಲ್ಲಿ ಸಿನಿಮಾ ನೋಡಲು ಮುಂದಾದ್ರೆ, ಆ ನಿರೀಕ್ಷೆಗಳು ಹುಸಿಯಾಗಲಿವೆ. ಫಸ್ಟ್ ಆಫ್ ಬಹಳ ಡ್ರ್ಯಾಗ್ ಮಾಡಿರೋ ಕಾರಣ ನೋಡುಗರಿಗೆ ಕೊಂಚ ಬೋರಿಂಗ್ ಅನ್ನಿಸುತ್ತೆ. ಇನ್ನೂ ಸೆಕೆಂಡ್ ಆಫ್ ಕ್ಲೈಮ್ಯಾಕ್ಸ್‌ನಲ್ಲಿ ಟ್ವಿಸ್ಟ್‌ ಇದೆ. ಆದರೆ ಅಲ್ಲಿ ತನಕ ಪ್ರೇಕ್ಷಕರು ಎಂಗೇಜ್ ಆಗಿರಬೇಕಲ್ಲವೇ..?

ಲವ್ ಯೂ ರಚ್ಚು ಚಿತ್ರಕ್ಕೆ ಪವರ್ ಟಿವಿ ರೇಟಿಂಗ್: 3/5

ಲವ್ ಯೂ ರಚ್ಚು  ಫೈನಲ್ ಸ್ಟೇಟ್​ಮೆಂಟ್

ಸಿನಿಮಾದಲ್ಲಿ ಏನಿದೆ..? ಸಿನಿಮಾ ಯಾಕೆ ನೋಡಬೇಕು ಅಂದ್ರೆ, ಸಿನಿಮಾದಲ್ಲಿ ಕರ್ಮದ ಕಥೆ ಹೇಳಿದ್ದಾರೆ. ನೀವು ಮಾಡಿದ ಕರ್ಮಗಳು ನಿಮ್ಮನ್ನ ಬಿಡುವುದಿಲ್ಲ. ಯಾವುದಾದರೊಂದು ರೂಪದಲ್ಲಿ ಬಂದು ನಿಮಗೆ ಸುತ್ತಿಕೊಳ್ಳುತ್ತವೆ. ಸಿಂಪಲ್ ಆಗಿ ಹೇಳಬೇಕಂದ್ರೆ ಕರ್ಮ ವಿಲ್ ಹಿಟ್ ಯೂ ಬ್ಯಾಕ್ ಅನ್ನೋ ಸಂದೇಶವಿದೆ. ಚಿತ್ರದ ಕೊನೆಯಲ್ಲಿ ಈ ಅಂಶವನ್ನು ಎಲ್ಲರೂ ಒಪ್ಪಿಕೊಳ್ಳುವ ಹಾಗೆ ಕ್ಲೈಮ್ಯಾಕ್ಸ್ ಮೂಡಿ ಬಂದಿದೆ. ಇನ್ನು ತೆರೆಯ ಮೇಲೆ ರಚಿತಾ ರಾಮ್‌ ಮತ್ತು ಅಜಯ್‌ ರಾವ್ ಜೋಡಿ ಮೋಡಿ ಮಾಡಿದೆ. ಪಾತ್ರಕ್ಕೆ ತಕ್ಕಂತೆ ಇಬ್ಬರು ಉತ್ತಮ ಅಭಿನಯ ತೋರಿದ್ದಾರೆ.

ಒಟ್ಟಾರೆ ಸಿನಿಮಾ ನೋಡುವಾಗ ಒಂದಷ್ಟು ಬೇರೆ, ಬೇರೆ ಚಿತ್ರಗಳು ನೆನಪಿಗೆ ಬರುತ್ತೆ. ಕೆಲವು ಸನ್ನಿವೇಷಗಳು, ಈ ಮೊದಲು ಯಾವುದೋ  ಸಿನಿಮಾದಲ್ಲಿ  ನೋಡಿದ್ದೀವಿ ಅನ್ನಿಸೋಕೆ ಶುರುವಾಗುತ್ತೆ. ಹಳೇ ಟೇಪ್‌ ರೆಕಾರ್ಡರ್​ನ ತಿರುವಿ ಹಾಕಿದ್ದಾರೇನೋ ಅನ್ನೋ ಫೀಲ್. ಈಗಾಗಲೇ ಈ ರೀತಿಯ ಹಲವು ಕಥೆಗಳು ಬಂದಿವೆ. ಆದರೆ ಕ್ಲೈಮ್ಯಾಕ್ಸ್​ನಲ್ಲಿ ಊಹಿಸದ ಟ್ವಿಸ್ಟ್‌ ಇರೋದು ಕೊಂಚ ಸರ್ಪ್ರೈಸಿಂಗ್‌ ಎನ್ನಿಸುತ್ತೆ. ಕೊನೆ ಕ್ಷಣದ ಟ್ವಿಸ್ಟ್ ಊಹಿಸಲು ಸಾಧ್ಯವಿಲ್ಲ.ಆ ರೋಚಕ ಟ್ವಿಸ್ಟ್ ತಿಳಿಬೇಕು ಅಂದ್ರೆ ಲವ್ ಯೂ ರಚ್ಚು ಸಿನಿಮಾ ನೋಡಿ ನಿಮಗೆ ಗೊತ್ತಾಗುತ್ತೆ.

ಕೀರ್ತಿ ಪಾಟೀಲ್ , ಫಿಲ್ಮ್​ ಬ್ಯೂರೋ, ಪವರ್ ಟಿವಿ 

RELATED ARTICLES

Related Articles

TRENDING ARTICLES