Thursday, December 19, 2024

ಡಿಕೆಶಿ ಬಾಸ್-ಸಿದ್ದು ಸಿಎಂ; ಇದು ಅಭಿಮಾನಿಗಳ ವರಸೆ

ಚಾಮರಾಜನಗರ : ಬಾಸ್ ಬಾಸ್ ಸಿದ್ದು ಬಾಸ್, ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಡಿಕೆಶಿ ಮುಂದೆ ಘೋಷಣೆ ಕೂಗಿದ ಘಟನೆ ಚಾಮರಾಜನಗರಕ್ಕೆ ಭೇಟಿ ನೀಡಿದಾಗ ನಡೆಯಿತು. ಮೇಕೆದಾಟು ಪಾದಯಾತ್ರೆ ಪೂರ್ವಭಾವಿ ಸಭೆಗೆ  ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗಮಿಸಿ ವೇಳೆ ದೇವಾಲಯ ಹೊರಗೆ ಮತ್ತು ಒಳಗೆ ಸಿದ್ದರಾಮಯ್ಯ  ಅಭಿಮಾನಿಗಳು  ಹಾಗೂ ಕಿಕ್ಕಿರಿದು ಜಮಾಯಿಸಿದ ಕಾರ್ಯಕರ್ತರು ಈ ರೀತಿಯ ಘೋಷಣೆ ಕೂಗಿದ್ದಾರೆ.

ಚಾಮರಾಜನಗರದ ಚಾಮರಾಜೇಶ್ವರನ ದರ್ಶನ ಪಡೆದ ಸಿದ್ದು, ಡಿಕೆಶಿ ನಂತರ ದೇವಾಲಯ ಪ್ರದಕ್ಷಿಣೆ ಮಾಡುವಾಗಲೂ ಸಿದ್ದು ಅಭಿಮಾನಿಗಳು ನೃತ್ಯ ಮಾಡಿ ಸಿದ್ದರಾಮಯ್ಯಗೆ ಜೈಕಾರ ಹಾಕಿದ್ದಾರೆ. ದೇವಾಲಯ ಪ್ರಾಂಗಣದಲ್ಲೇ ಬಾಸ್ ಬಾಸ್ ಸಿದ್ದು ಬಾಸ್, ಮುಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಜೈ, ಹುಲಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಆಗಬೇಕೆಂದೇ ಪೂಜೆ ಸಲ್ಲಿಸಬೇಕೆಂದು ಅಭಿಮಾನಿಗಳು ಒತ್ತಾಯ ಸಲ್ಲಿಸಿದ ಘಟನೆಯೂ ನಡೆಯಿತು.

ಸಿದ್ದರಾಮಯ್ಯ ಹಾಗೂ ಡಿಕೆಶಿ ಒಂದೇ ಕಾರಿನಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು.  ಹೊರಡುವ ವೇಳೆ ಭಾರೀ ಸಂಖ್ಯೆಯಲ್ಲಿ  ಸೇರಿದ್ದ ಅಭಿಮಾನಿಗಳತ್ತ ಸಿದ್ದು ಕೈ ಬೀಸಿದರು. ದೇವಾಸ್ಥಾನ ಭೇಟಿ ಬಳಿಕ ಪ್ರವಾಸಿ ಮಂದಿರದಲ್ಲಿ ಉಭಯ ನಾಯಕರು  ಬೈಕ್ ರ್ಯಾಲಿಗೆ ಚಾಲನೆ ಕೊಟ್ಟರು.

RELATED ARTICLES

Related Articles

TRENDING ARTICLES