Wednesday, January 22, 2025

ವಿದ್ಯುತ್ ಬಿಲ್ ಕುರಿತು ತಾರತಮ್ಯ ಮಾಡುತ್ತಿರುವ ಚೆಸ್ಕಾಂ

ಮೈಸೂರು: ಸಾರ್ವಜನಿಕರು ವಿದ್ಯುತ್ ಬಿಲ್ ಕಟ್ಟದಿದ್ರೆ ಸಂಪರ್ಕ ಕಟ್ಟಾಗೊದು ಗ್ಯಾರಂಟಿ. ಸಣ್ಣಪುಟ್ಟ ಅಂಗಡಿಯವ್ರು, ಮನೆಯವ್ರು ವಿದ್ಯುತ್ ಬಿಲ್ ಕಟ್ಟೊದನ್ನ ತಡ ಮಾಡಿದ್ರೆ ಕ್ಷಣ ಮಾತ್ರದಲ್ಲಿ ಸಂಪರ್ಕ ಕಡಿತ ಮಾಡ್ತಾರೆ. ಆದರೆ ಇಲ್ಲಿ ಮಾತ್ರ ವಿದ್ಯುತ್ ಬಿಲ್ ಕೋಟಿಗಿಂತಲೂ ಬಾಕಿ ಇದ್ರೂ ಸಂಪರ್ಕ ಕಟ್ಟಾಗೋದೆ ಇಲ್ಲ. ಇಂಥ ಒಂದು ತಾರತಮ್ಯ ಮೈಸೂರಿನ ನಂಜನಗೂಡಿನ ಕಾವೇರಿ ನೀರಾವರಿ ನಿಗಮ ನಿಯಮಿತ ಕಚೇರಿಯ ಕುರಿತು ವಿದ್ಯುತ್ ಇಲಾಖೆ ಮಾಡುತ್ತಿದೆ.

ನಂಜನಗೂಡು ವಿಭಾಗದ ಕಾವೇರಿ ನೀರಾವರಿ ನಿಗಮ ನಿಯಮಿತ ಸುಮಾರು ಎರಡು ವರ್ಷಗಳಿಂದ ವಿದ್ಯುತ್ ಬಿಲ್ ಪಾವತಿಸಿಯೇ ಇಲ್ಲ. 19 ಕೋಟಿಗೂ ಅಧಿಕ ಮೊತ್ತದ ಬಿಲ್ ಬಾಕಿ ಉಳಿಸಿಕೊಂಡಿದೆ ನಂಜನಗೂಡಿನ ಕಾವೇರಿ ನೀರಾವರಿ ನಿಗಮ ನಿಯಮಿತ ಕಚೇರಿ.  ಕಳೆದ ಸೆಪ್ಟೆಂಬರ್​ನಿಂದಲೂ ಚೆಸ್ಕಾಂ ನೀರಾವರಿ ಇಲಾಖೆ ಅಧಿಕಾರಿಗಳಿಗೆ ನಿರಂತರವಾಗಿ ನೋಟೀಸ್ ಕಳಿಸುತ್ತಲೇ ಇದ್ದಾರೆ.

ಆದ್ರೆ ಚೆಸ್ಕಾಂ ನೋಟಿಸ್‌ಗೆ ನಂಜನಗೂಡು ನೀರಾವರಿ ನಿಗಮ ತಲೆಯೆ ಕೆಡಿಸಿಕೊಳ್ಳಲು ಹೋಗುತ್ತಿಲ್ಲ.  ಉತ್ತರಿಸುವ ಗೋಜಿಗೂ ಹೋಗುತ್ತಿಲ್ಲ. ಹಾಗಾಗಿ ಇದೀಗ ಡಿಸೆಂಬರ್ ಮಾಹೆಯವರೆಗೆ ಬಿಲ್ ಮೊತ್ತ 19,34,36,716/- ರೂ. ಆಗಿದೆ. ಈಗ ಕಡೆಯ ಮಾರ್ಗವಾಗಿ ವಿದ್ಯುತ್ ಕಡಿತಗೊಳಿಸುವುದಾಗಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES