Sunday, January 19, 2025

ಹುಷಾರ್! ಕೊರೋನ 3ನೇ ಅಲೆ ಹತ್ತಿರದಲ್ಲೇ ಇದೆ!!

ನವದೆಹಲಿ: ಕೊರೋನ ಮತ್ತೆ ಇಡೀ ಜಗತ್ತನ್ನೇ ತನ್ನ ಕಬಂದಬಾಹುವಿನಲ್ಲಿ ತೆಗೆದುಕೊಳ್ಳುತ್ತಿದೆ. ಅಮೇರಿಕ, ಜರ್ಮನಿ ಮುಂತಾದ ದೇಶಗಳಲ್ಲಿ 3,4 ಅಲೆಗಳನ್ನೂ ದಾಟಿ ಕರೋನ ವಿಝ್ರಂಭಿಸುತ್ತಿದ್ದರೆ, ಭಾರತದಲ್ಲಿ 3ನೆಯ ಅಲೆ ಸಮೀಪಿಸುತ್ತಿರುವಂತಿದೆ. ಮೂರ್ನಾಲ್ಕು ತಿಂಗಳುಗಳ ಕಾಲ ಬಿಡುವು ಕೊಟ್ಟಿದ್ದ ಕೊರೋನ ಇನ್ನೇನು ಭಾರತದಿಂದ ಹೊರಟೇಹೋಯಿತು ಎನ್ನುವಷ್ಟರಲ್ಲಿ, ತಜ್ಷರು ಹೇಳಿದ್ದಂತೆ ಕೊರೋನ ಜನವರಿ, ಫೆಬ್ರವರಿಯಲ್ಲಿ ಅತ್ಯಂತ ಹೆಚ್ಚಾಗುವ ಎಲ್ಲ ಸ್ಪಷ್ಟ ಸೂಚನೆಗಳೂ ಕಾಣುತ್ತಿವೆ. ಅದಕ್ಕೆ ತಕ್ಕಂತೆ ಕೊರೋನಾದ ಡೆಲ್ಟಾ ಹಾಗೂ ರೂಪಾಂತರಿ ಓಮಿಕ್ರಾನ್ ಎರಡೂ ಸಹ ಇದೀಗ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಇದೀಗ ಭಾರತದಲ್ಲಿ 27,553 ಕೊರೋನ ಪ್ರಕರಣಗಳು ದಾಖಲಾಗಿದ್ದರೆ, ಕೆಲವೇ ದಿನಗಳ ಹಿಂದೆ ಬೆರಳೆಣಿಕೆಯಷ್ಟಿದ್ದ ಒಮೈಕ್ರಾನ್ ಪ್ರಕರಣಗಳು ಇಂದು 1525ಕ್ಕೆ ಏರಿಕೆಯಾಗಿವೆ. 284 ಜನರು ಕೊರೋನದಿಂದ ಮೃತಪಟ್ಟಿದ್ದಾರೆ. ದೇಶದಲ್ಲಿ ಶೇಕಡ 21ರಷ್ಟು ಕೊರೋನ ಹೆಚ್ಚಳವಾಗಿದೆ ಎಂದು ತಜ್ಷರು ಹೇಳಿದ್ದಾರೆ. ಭಾರತದ 23ರಾಜ್ಯಗಳಲ್ಲಿ ಕೊರೋನ ರೂಪಾಂತರಿ ಓಮೈಕ್ರಾನ್ ಕಾಲಿಟ್ಟಾಗಿದೆ. ದೆಹಲಿ ವರ್ಷಾಂತ್ಯದ ದಿನ ಒಮ್ಮೆಲೆ ಶೇಕಡ 50ರಷ್ಟು ಕೊರೋನ ಹೆಚ್ಚಳವನ್ನು ಕಂಡಿತು.

 

RELATED ARTICLES

Related Articles

TRENDING ARTICLES