Monday, December 23, 2024

ವರ್ಷದ ಕೊನೆ ಚಿತ್ರ ಅರ್ಜುನ್​ಗೌಡ ಹೇಗಿದೆ ಗೊತ್ತ..

ಸ್ಯಾಂಪಲ್ಸ್​ನಿಂದ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಡೈನಾಮಿಕ್ ಪ್ರಿನ್ಸ್ ಅರ್ಜುನ್ ಗೌಡ ಚಿತ್ರ, ವರ್ಷದ ಕಡೆಯ ಸಿನಿಮಾ ಆಗಿ ತೆರೆಗಪ್ಪಳಿಸಿದೆ. ರಾಮು ಕನಸಿಗೆ ಮಾಲಾಶ್ರೀ ನೀರೆರೆದು, ಸಿಲ್ವರ್ ಸ್ಕ್ರೀನ್​ಗೆ ತಂದಿರೋ ಈ ಚಿತ್ರ ಹೇಗಿದೆ..? ಚಿತ್ರದ ಪ್ಲಸ್ ಏನು, ಮೈನಸ್ ಏನು ಅನ್ನೋದ್ರ ಡಿಟೈಲ್ಡ್ ರಿವ್ಯೂ ರಿಪೋರ್ಟ್​ ಇಲ್ಲಿದೆ.

2021ರ ವರ್ಷದ ಕೊನೆಯಲ್ಲೂ ಕನ್ನಡ ಸಿನಿಪ್ರಿಯರಿಗೆ ಭರ್ಜರಿ ಮನೋರಂಜನೆ ಸಿಕ್ಕಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಅರ್ಜುನ್ ಗೌಡ ಸಿನಿಮಾ ಶುಕ್ರವಾರ ರಾಜ್ಯಾದ್ಯಂತ ತೆರೆಕಂಡಿದೆ. ಕೋಟಿ ನಿರ್ಮಾಪಕ ರಾಮು ಅವ್ರ ಕಟ್ಟ ಕಡೆಯ ಕನಸಿನ ಸಿನಿಮಾ ತೆರೆ ಕಾಣೋ ಮೂಲಕ ನನಸಾಗಿದೆ. ಸಿನಿಮಾ ಬಿಡುಗಡೆಯ ದಿನವೇ ಪ್ರೇಕ್ಷಕರಿಂದ ಬಿಗ್ ವೆಲ್ಕಮ್ ಸಿಕ್ಕಿದೆ.

ಗಾಂಧಿ ಹತ್ಯೆ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹತ್ಯೆಯ ಉಲ್ಲೇಖದಿಂದ್ಲೇ ಸಿನಿಮಾ ಆರಂಭವಾಗುತ್ತೆ. ಪತ್ರಕರ್ತೆ ಗೌರಿ ಲಂಕೇಶ್, ವಿಚಾರವಾದಿ ನರೇಂದ್ರ ದಾಬೋಳ್ಕರ್ ಹತ್ಯೆಯ ಬಗ್ಗೆಯೂ ಹೇಳಲಾಗಿದೆ. ವ್ಯಕ್ತಿಯನ್ನು ಕೊಲ್ಲೋ ಮೂಲಕ ವಿಚಾರವನ್ನು ಕೊಲ್ಲೋ ಈ ಘಟನೆಗಳೇ ಈ ಸಿನಿಮಾ ಮಾಡಲು ಪ್ರೇರಣೆಯಂತೆ. ಇದು ಸಿನಿಮಾ ಬಗ್ಗೆ ಹೆಚ್ಚು ಕುತೂಹಲ ಮೂಡಿಸುತ್ತೆ.

ಹೀರೋ ಇಂಟ್ರಡಕ್ಷನ್ ದೃಶ್ಯದಲ್ಲೇ ನಾಯಕ ಅರ್ಜುನ್ ಗೌಡ ಮಹಿಳೆಯೊಬ್ಬರ ಮುಂದೆ ಗನ್ ಹಿಡಿದು ನಿಂತಿರ್ತಾನೆ. ಆ ಮಹಿಳೆ ಆತನ ತಾಯಿಯೇ ಆಗಿರ್ತಾರೆ. ಅರ್ಜುನ್ ಗೌಡ ತನ್ನ ತಾಯಿಯನ್ನೇ ಯಾಕೆ ಕೊಲ್ಲಲು ಪ್ರಯತ್ನಿಸ್ತಾನೆ..? ಅಂತಹ ಸಂದರ್ಭ ಯಾಕೆ ಸೃಷ್ಟಿಯಾಯಿತು, ನಿಜಕ್ಕೂ ಆತನೇ ತನ್ನ ತಾಯಿಯ ಮೇಲೆ ಗುಂಡು ಹಾರಿಸಿದ್ನಾ..? ಹೀಗೆ ಹತ್ತು ಹಲವು ಪ್ರಶ್ನೆಗಳು  ಸಿನಿಮಾ ನೋಡುಗರನ್ನು ಕಾಡುತ್ತೆ. ಆದ್ರೆ ಅದಕ್ಕೆಲ್ಲಾ ಉತ್ತರ ಸಿಗೋದು ಸಿನಿಮಾ ಕ್ಲೈಮ್ಯಾಕ್ಸ್​ನಲ್ಲಿ.

ನಾಯಕ ಅರ್ಜುನ್ ಗೌಡನ ಪಾತ್ರದಲ್ಲಿ ಪ್ರಜ್ವಲ್ ದೇವರಾಜ್ ಉತ್ತಮವಾಗಿ ನಟಿಸಿದ್ದಾರೆ. ಡೈನಾಮಿಕ್ ಪ್ರಿನ್ಸ್ ಅನ್ನೋ ಹೆಸರಿಗೆ ತಕ್ಕಂತೆ ಆಕ್ಟಿಂಗ್, ಆಕ್ಷನ್ ಎರಡರಲ್ಲೂ ಜಬರ್ದಸ್ತ್ ಪರ್ಫಾರ್ಮೆನ್ಸ್ ನೀಡಿದ್ದಾರೆ. ಇನ್ನೂ ನಾಯಕಿ ಜಾನು ಪಾತ್ರದಲ್ಲಿ ಪ್ರಿಯಾಂಕಾ ಕೂಡ ಮನೋಜ್ಞ ಅಭಿನಯದಿಂದ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಸ್ಪರ್ಶ ಚಿತ್ರದ ಖ್ಯಾತಿಯ ನಟಿ ರೇಖಾ ನಾಯಕನ ತಾಯಿಯ ರೋಲ್​ನಲ್ಲಿ ಗತ್ತು, ಗಮ್ಮತ್ತು ತೋರಿದ್ದಾರೆ. ಸಾಧುಕೋಕಿಲ  ತಮ್ಮ ಹಾಸ್ಯದ ಮೂಲಕ ನೋಡುಗರಿಗೆ ಕಚಗುಳಿ ಇಡ್ತಾರೆ. ರಾಹುಲ್ ದೇವ್ ವಿಲನಿಸಂ ಚಿತ್ರದ ಮತ್ತೊಂದು ಹೈಲೈಟ್. ಉಳಿದಂತೆ ಎಲ್ಲಾ ಕಲಾವಿದರು ತಮ್ಮ ತಮ್ಮ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಅರ್ಜುನ್ ಗೌಡ ಪ್ಲಸ್ ಪಾಯಿಂಟ್ಸ್  ಪ್ರಜ್ವಲ್ ದೇವರಾಜ್ ನಟನೆ, ಸಾಧು ಕೋಕಿಲಾ ಕಾಮಿಡಿ ಟ್ರ್ಯಾಕ್, ಧರ್ಮವಿಶ್ ಸಂಗೀತ, ಸ್ಟಂಟ್ಸ್ ಹಾಗೂ ಲೊಕೇಷನ್ಸ್

ಅರ್ಜುನ್ ಗೌಡ  ಮೈನಸ್ ಪಾಯಿಂಟ್ಸ್: ಹೀರೋ  ಮಾಸ್ ಎಂಟ್ರಿ, ತಾಯಿ ಸೆಂಟಿಮೆಂಟ್, ಪ್ರೀತಿ, ಲವ್ ಫೇಲ್ಯೂರ್​, ಕಾಮಿಡಿ, ಬ್ಯೂಟಿಫುಲ್ ಸಾಂಗ್ಸ್​ ಎಲ್ಲವೂ ಇದ್ರೂ ಸಿನಿಮಾ ಒಟ್ಟಾರೆಯಾಗಿ ಸಿನಿಪ್ರಿಯರ ಮನ ಗೆಲ್ಲೋದ್ರಲ್ಲಿ ಸೋತಿದೆ. ಕಾರಣ ಕಮರ್ಷಿಯಲ್ ಚಿತ್ರಕ್ಕೆ ಬೇಕಿರೋದು ನಾಲ್ಕು ಫೈಟು, ನಾಲ್ಕು ಸಾಂಗ್ಸ್ ಅಷ್ಟೇ ಅಲ್ಲ, ಗಟ್ಟಿಯಾದ ಕಥೆ. ಈ ಚಿತ್ರಕ್ಕೆ ಕಥೆಯ ಕೊರತೆಯಿಂದಾಗಿ ನೋಡುಗರಿಗೆ ಅಷ್ಟಾಗಿ ರುಚಿಸಲ್ಲ. ನಿರ್ದೇಶಕ ಕಥೆ ಮೇಲೆ ಮತ್ತಷ್ಟು ವರ್ಕ್​ ಮಾಡಿ, ಸ್ಕ್ರೀನ್ ಪ್ಲೇ ನೀಟಾಗಿ ಮಾಡಿಕೊಳ್ಳಬಹುದಿತ್ತು.

ಅರ್ಜುನ್ ಗೌಡ ಚಿತ್ರಕ್ಕೆ ಪವರ್ ಟಿವಿ ರೇಟಿಂಗ್ : 2.5/5

ಅರ್ಜುನ್ ಗೌಡ ಫೈನಲ್ ಸ್ಟೇಟ್​ಮೆಂಟ್: ಪ್ರಜ್ವಲ್ ದೇವರಾಜ್ ಸಖತ್ ಬ್ಯೂಟಿಫುಲ್ ಆಗಿ ಕಾಣಸಿಗಲಿದ್ದಾರೆ. ಸ್ಟಂಟ್ಸ್ ಜೊತೆ ಒಂದೆರಡು ಸಾಂಗ್ಸ್ ಕಿಕ್ ಕೊಡಲಿವೆ. ಉಳಿದಂತೆ ಸಿನಿಮಾನ ತುಂಬಾ ಕಷ್ಟ ಪಟ್ಟು ನೋಡಬೇಕಾಗುತ್ತೆ. ರೀ ರೆಕಾರ್ಡಿಂಗ್ ಇಲ್ಲದ ಒಂದಷ್ಟು ದೃಶ್ಯಗಳು ಬೋರ್ ಹೊಡೆಸುತ್ತೆ. ಸದಾ ಕಮರ್ಷಿಯಲ್ ಅಂಶಗಳ ಮೇಲೆ ಫೋಕಸ್ ಮಾಡೋ ರಾಮು ಅವ್ರು ಈ ಬಾರಿಯೂ ಕಥೆ ವಿಚಾರದಲ್ಲಿ ಎಡವಿದ್ದಾರೆ. ಲಕ್ಕಿ ಶಂಕರ್ ಡೈರೆಕ್ಷನ್ ಪ್ಯಾಟ್ರನ್ ಬದಲಾಗಬೇಕು. ರಾಮು ಅಗಲಿಕೆಯ ನಂತ್ರ ಅವ್ರ ನಿರ್ಮಾಣದ ಕೊನೆಯ ಸಿನಿಮಾ ಹಾಗೂ ಮಾಲಾಶ್ರೀ ಮುಂದುವರೆಸ್ತಿರೋ ಬ್ಯಾನರ್​ನ ಮೊದಲ ಚಿತ್ರ ಅನ್ನೋ ಕಾರಣಕ್ಕೆ ತಾಳ್ಮೆಯಿಂದ ಒಮ್ಮೆ ನೋಡಬಹುದು.

ಕೀರ್ತಿ ಪಾಟೀಲ್, ಫಿಲ್ಮ್​​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES