Tuesday, January 28, 2025

ಖಡಕ್ ಆಫೀಸರ್ ನೆರಳಲ್ಲೇ 5 ಕೋಟಿ ಗುಳುಂ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿ ಆನೆಗುಂದಿ ಗ್ರಾಮದ ರಾಜ್ಯ ಕರಕುಶಲ ಅಭಿವೃದ್ಧಿ ಮಂಡಳಿಯಲ್ಲಿ ಮಹಾ ಭ್ರಷ್ಟಾಚಾರ ನಡೆದಿರುವುದಾಗಿ ಆರೋಪ ಮಾಡಲಾಗಿದೆ. ಪಾರಂಪರಿಕ ಗ್ರಾಮ ಪಟ್ಟಿಯಲ್ಲಿನ ಆನೆಗುಂದಿ ಅಭಿವೃದ್ಧಿಗೆ ಬಳಕೆ ಆಗಬೇಕಿದ್ದ 5 ಕೋಟಿ ರೂಪಾಯಿಗಳ ಅನುದಾನವನ್ನು ಗುಳುಂ ಸ್ವಾಹ ಮಾಡಲಾಗಿದೆ.

ವಿಲೇಜ್ ಕ್ರಾಫ್ಟ್ ಟೂರಿಸಂ ಯೋಜನೆಯಡಿಯ  ಈ ಅನುದಾನವನ್ನು ದುರ್ಬಳಕೆ ಮಾಡಲಾಗಿದೆ.  ಈ ಅನುದಾನವನ್ನು ಕೇಂದ್ರ ಸರ್ಕಾರ ರಾಜ್ಯ ಕರಕುಶಲ ಅಭಿವೃದ್ಧಿ ಮಂಡಳಿ ಮೂಲಕ ನೀಡಿದೆ. ಖಡಕ್ ಐಪಿಎಸ್ ಅಧಿಕಾರಿ ಎಂಬ ಖ್ಯಾತಿಯ ಡಿ ರೂಪಾ ಎಂಡಿ ಆಗಿರುವ ರಾಜ್ಯ ಕರಕುಶಲ ಅಭಿವೃದ್ಧಿ ಮಂಡಳಿಯಲ್ಲೇ ಈ ಮಹಾಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ.

RELATED ARTICLES

Related Articles

TRENDING ARTICLES