Sunday, May 12, 2024

ಕಿಸಾನ್ ಸಮ್ಮಾನ್ ನಿಧಿಯ 10 ನೇ ಕಂತು ಬಿಡುಗಡೆ ಕಾರ್ಯಕ್ರಮ : ಕೇಂದ್ರ ಕೃಷಿ ಸಚಿವೆ ಶೋಭ ಕರಂದ್ಲಾಜೆ ಭಾಗಿ

ನವದೆಹಲಿ : ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ, ಶೋಭಾ ಕರಂದ್ಲಾಜೆಯವರು ಇಂದು ಪಿ.ಎಂ. ಕಿಸಾನ್ ಸಮ್ಮಾನ ನಿಧಿಯ 10ನೇ ಕಂತಿನ ಅನುದಾನ ಬಿಡುಗಡೆಯ ಕಾರ್ಯಕ್ರಮದಲ್ಲಿ ತಮ್ಮ ಕಚೇರಿ, ದೆಹಲಿಯ ಕೃಷಿ ಭವನದಿಂದ ಪಾಲ್ಗೊಂಡರು.

ದೇಶದ ಬೆನ್ನೆಲುಬಾದ ರೈತರಿಗೆ ಕಿಸಾನ್ ಸಮ್ಮಾನ್ ನಿಧಿಯ 10ನೇ ಕಂತಿನ ₹2000.00 ಗಳನ್ನು ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು DBTಯ ಮೂಲಕ, ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್, ಕೃಷಿ ರಾಜ್ಯ ಸಚಿವರಾದ ಕೈಲಾಶ್ ಚೌಧರಿ ಹಾಗು ಕೃಷಿ ಮಂತ್ರಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಉಳಿದಂತೆ ದೇಶದ ವಿವಿಧ ರಾಜ್ಯದ ಮುಖ್ಯಮಂತ್ರಿಗಳು, ಕೃಷಿ ಸಚಿವರು ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದೇಶದ 10.47 ಕೋಟಿಗೂ ಹೆಚ್ಚಿನ ರೈತರ ಖಾತೆಗಳಿಗೆ ಒಟ್ಟು ₹20,900 ಕೋಟಿಗೂ ಅಧಿಕ ಮೊತ್ತವನ್ನು ಸನ್ಮಾನ್ಯ ಪ್ರಧಾನ ಮಂತ್ರಿಗಳು ವರ್ಗಾಯಿಸಿದ್ದಾರೆ. 2022ನೇ ವರ್ಷದ ಪ್ರಥಮ ದಿನದಂದೇ ದೇಶದ ರೈತರಿಗೆ ಸಮ್ಮಾನ ನಿಧಿಯ ಕೊಡುಗೆಯನ್ನು ಪ್ರಧಾನಿಯವರು ನೀಡಿರುವುದು ಖುಷಿಯ ವಿಚಾರ ಅಂತಾ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂತೋಷ್ ಹೊಸಹಳ್ಳಿ, ಪವರ್​ ಟಿವಿ 

RELATED ARTICLES

Related Articles

TRENDING ARTICLES