Thursday, May 2, 2024

ಜನರಿಗೆ ಬಿಜೆಪಿ ಸರ್ಕಾರದ ಮೇಲೆ ವಿಶ್ವಾಸ ಇಲ್ಲ : ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್​

ಹಾವೇರಿ : ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ದೇಶಕ್ಕೆ ಸಂದೇಶ ಕೊಟ್ಟಿದೆ ಎಂದು ಹಾವೇರಿ ನಗರದ ಪತ್ರಿಕಾಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್​ ಹೇಳಿಕೆ ನೀಡಿದ್ದಾರೆ.

ಜನರು ಬಿಜೆಪಿ ಸರಕಾರದ ಮೇಲಿನ ವಿಶ್ವಾಸವನ್ನ ಕಳೆದುಕೊಂಡಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಹನ್ನೊಂದು ಸ್ಥಾನಗಳಲ್ಲಿ ಗೆಲುವು ಸಿಕ್ಕಿದೆ. ಹಾನಗಲ್ ಉಪಚುನಾವಣೆಯಲ್ಲಿ ಈಡೀ ಕಾಂಗ್ರೆಸ್​ಗೆ ಜನರು ಆಶೀರ್ವಾದ ಮಾಡಿದ್ದಾರೆ. ನಡೆದ ಮೂರು ಚುನಾವಣೆಗಳಿಂದ ಜನರು ಬದಲಾವಣೆಯನ್ನು ಬಯಸಿದ್ದಾರೆ,ಎಂಬುದು ಸ್ವಷ್ಟವಾಗಿ ತಿಲಿದು ಬಂದಿದೆ.

2023ರಲ್ಲಿ ರಾಜ್ಯದ ಜನರು 150ಕ್ಕೂ ಅಧಿಕ ಕಾಂಗ್ರೆಸ್ ಶಾಸಕರನ್ನ ಗೆಲ್ಲಿಸಲಿದ್ದಾರೆ.ಮುಂದೆ ಕಾಂಗ್ರೆಸ್ ಪಕ್ಷದ ಸರಕಾರ ಅಧಿಕಾರಕ್ಕೆ ಬರಲಿದೆ.ಗುತ್ತಿಗೆದಾರರು ಬಿಜೆಪಿ ಸರಕಾರದ ಪರ್ಸೆಂಟೇಜ್ ವಿರುದ್ಧ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆದರೂ, ಪ್ರಧಾನಿ ಕಚೇರಿಯಿಂದ ಯಾವುದೇ ಉತ್ತರ ಬರಲಿಲ್ಲ. ಅಲ್ಲದೇ, ಸಚಿವ ಭೈರತಿ ಬಸವರಾಜ ವಿರುದ್ಧದ ಭೂಹಗರಣ ಆರೋಪದ ವಿರುದ್ದವೂ ಬಿಜೆಪಿ ಸರಕಾರ ಮಾತನಾಡ್ಲಿಲ್ಲ.ಸಚಿವರ ರಾಜೀನಾಮೆ ಪಡೆಯಬೇಕು ಅಂತಾ ಒತ್ತಾಯ ಮಾಡಿದರೂ ಯಾವುದು ಕೂಡ ನೇರವೇರಿಲ್ಲ.

ಈ ವರ್ಷ ಬಿಜೆಪಿ ಸರಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡುತ್ತೇವೆ, ಜೊತೆಗೆ ಜನರನ್ನ ಜಾಗೃತಿ ಮಾಡೋ ಕೆಲಸ ಮಾಡುತ್ತೇವೆ.ಜನವರಿ 9ರಿಂದ19ರವರೆಗೆ ಮೇಕೆದಾಟು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ.ರಾಜ್ಯದ ಅನೇಕ ಕಡೆಗಳಿಂದ ಪಾದಯಾತ್ರೆಯಲ್ಲಿ ಜನರು ಭಾಗವಹಿಸಲಿದ್ದಾರೆ.ಕಾಂಗ್ರೆಸ್ ಪಕ್ಷದಲ್ಲಿ ಅಲ್ಲಂ ವೀರಭದ್ರಪ್ಪ ನೇತೃತ್ವದ ಕಮಿಟಿ ಇದೆ.ಪಕ್ಷಕ್ಕೆ ಬರೋರು ಅಲ್ಲಿ ಅರ್ಜಿ ಹಾಕಿದ್ಮೇಲೆ ಅವರು ಪರಿಶೀಲಿಸಿದ ನಂತರ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ.ನೀವು ಊಹೆ ಮಾಡಿಕೊಳ್ಳಲು ಆಗದವರು ಸಹ ಪಕ್ಷಕ್ಕೆ ಬರುವ ವಿಚಾರದಲ್ಲಿದ್ದಾರೆ.ಬಿಜೆಪಿ ಮತ್ತು ಜೆಡಿಎಸ್ ನಿಂದ ಹಲವರು ಪಕ್ಷಕ್ಕೆ ಬರಲಿದ್ದಾರೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಪ್ರತಿಕ್ರಿಯಿಸಿದ್ದಾರೆ.

RELATED ARTICLES

Related Articles

TRENDING ARTICLES