Sunday, May 19, 2024

ಗೋವಾದಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಪ್ರತಿಮೆಯ ವಿವಾದ

ಗೋವಾದಲ್ಲಿ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಹೊಸ ಪ್ರತಿಮೆ ವಿವಾದಕ್ಕೆ ಕಾರಣವಾಗಿದ್ದು, ಭಾರತದ ಆಟಗಾರನ ಬದಲಿಗೆ ಪೋರ್ಚುಗೀಸ್ ಫುಟ್ಬಾಲ್ ಆಟಗಾರನಿಗೆ ಗೌರವ ನೀಡಿರುವುದನ್ನು ಸ್ಥಳೀಯ ನಿವಾಸಿಗಳು ವಿರೋಧಿಸಿದ್ದಾರೆ.

ನಮ್ಮ ರಾಜ್ಯವನ್ನು ಆಳಿದ ದೇಶದ ತಾರೆಗೆ ಗೌರವ ನೀಡಲು ನಮ್ಮ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ ಎಂದು ಟೀಕಿಸಿದ್ದಾರೆ. ಈ ವಾರ ಕಲಾಂಗುಟೆ ಪಟ್ಟಣದಲ್ಲಿ ದಿಗ್ಗಜ ಫುಟ್ ಬಾಲ್ ತಾರೆ ಕ್ರಿಶ್ಚಿಯಾನೋ ರೊನಾಲ್ಡೊ ಪ್ರತಿಮೆಯನ್ನು ಅನಾವರಣ ಮಾಡಲಾಗಿದ್ದು, ಅದೇ ಸ್ಥಳದಲ್ಲಿ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಸ್ಥಳೀಯರು ಪ್ರತಿಭಟನೆ ನಡೆಸಿದರು.

ನಮ್ಮ ಅಧಿಕಾರಿಗಳಿಗೆ ಈ ಸ್ಥಳದಲ್ಲಿ ಭಾರತೀಯ ಫುಟ್ ಬಾಲ್ ತಾರೆ ಅಥವಾ ಭಾರತೀಯ ಕ್ರೀಡಾತಾರೆಯ ಪ್ರತಿಮೆಯನ್ನು ಸ್ಥಾಪಿಸುವ ಎಲ್ಲಾ ಅವಕಾಶವಿತ್ತು. ಆದರೆ, ನಮ್ಮ ರಾಜ್ಯವನ್ನು ಆಳಿ, 1961ರಲ್ಲಿ ಸ್ವಾತಂತ್ರ್ಯ ಕೊಟ್ಟು ಹೋದ ಪೋರ್ಚುಗಲ್ ದೇಶದ ಫುಟ್ ಬಾಲ್ ತಾರೆಯನ್ನು ಆಯ್ಕೆ ಮಾಡಿರುವುದಕ್ಕೆ ಬೇಸರವಾಗಿದೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES