Sunday, December 22, 2024

ಮಾಂಸಕ್ಕಾಗಿ ಪಾದಯಾತ್ರೆ : ಸಚಿವ ಆರ್ ಅಶೋಕ್

ರಾಜ್ಯ : ಪಾದಯಾತ್ರೆ ವಿರೋಧ ಮಾಡಿ ಕುಮಾರಸ್ವಾಮಿ ಅವರೇ ನಮಗೆ ಟೋಪಿ ಹಾಕಲಿ‌ ಅಂತ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ‌ಮಾತನಾಡಿದ ಅವರು ಪಾದಯಾತ್ರೆ ಘೋಷಣೆಯಾದ ಬಳಿಕ ಐಟಿ, ಇಡಿ, ಬೇನಾಮಿ ಆಸ್ತಿ ವಿಚಾರದಲ್ಲಿ ದೆಹಲಿ ಮಟ್ಟದಲ್ಲಿ ಏನೇನು ಆಗುತ್ತಿದೆ‌ ಎಲ್ಲಾ ಗೊತ್ತಿದೆ.

ಯಾರ್ ​ಯಾರು ದೆಹಲಿಗೆ ಹೋಗಿ ಏನು ಮಾಡುತ್ತಿದ್ದಾರೆ ಎಲ್ಲಾ ಗೊತ್ತಿದೆ. ಮಳೆ ಆದರೇನು ಚಳಿ ಆದರೇನು ಅವಾಗ ಒಬ್ಬರನ್ನ ಫೇಸ್ ಮಾಡಬೇಕಿತ್ತು ಈಗ ಇಬ್ಬಿಬ್ಬರನ್ನ ಫೇಸ್ ಮಾಡಬೇಕಿದೆ ಮಾಡೋಣ.ಪಾದಯಾತ್ರೆ ಹೆಸರಲ್ಲಿ ಮಕ್ಮಾಲ್ ಟೋಪಿ ಹಾಕ್ತಾರೆ ಅಂತ ಎಚ್ ಡಿ ಕೆ ಹೇಳಿದ್ದಾರೆ.

ಅವರೇ ಟೋಪಿ ಹಾಕಲಿ. ನಾನು ಡೈಲಿ ಪಾದಯಾತ್ರೆಗೆ ಪ್ರಾಕ್ಟೀಸ್ ಮಾಡ್ತಿದಿನಿ‌.ಹೊಸ ಶೂ ತೆಗೆದುಕೊಂಡಿದ್ದೇನೆ ಎಂದು ತಮ್ಮ ಶೂ ಕಡೆ ನೋಡಿಕೊಂಡು ವ್ಯಂಗ್ಯವಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್ ಅಶೋಕ್ ,ಕಾಂಗ್ರೆಸ್ ಸರ್ಕಾರ ಇದ್ದಾಗ ಮೇಕೆದಾಟು ಬಗ್ಗೆ ಚಕಾರ ಎತ್ತಿಲ್ಲ. ಕಳೆದ ಆರು ವರ್ಷಗಳಿಂದ ಕಡಲೆಕಾಯಿ ತಿಂತಿದ್ದರು. ಇವಾಗ ಮೇಕೆ ಮಾಂಸಕ್ಕಾಗಿ ಪಾದಯಾತ್ರೆ ಮಾಡ್ತಿದ್ದಾರೆ.ಇದು ಒಂದು ಚುನಾವಣಾ ದೊಂಬರದಾಟ ಅಷ್ಟೇ ಅಂತ ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಅಶೋಕ್ ಅವರು ತಿರುಗೇಟು ನೀಡಿದ್ದಾರೆ

RELATED ARTICLES

Related Articles

TRENDING ARTICLES