Friday, November 22, 2024

ಪಾದಯಾತ್ರೆಯಲ್ಲ, ಇದು ಮತಯಾತ್ರೆ: HDK ತಿರುಗೇಟು

ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ನಡೆಯುವ ಪಾದಯಾತ್ರೆಯಲ್ಲಿ ಬೇಕಿದ್ರೆ ಕುಮಾರಸ್ವಾಮಿ ಅವರು ಭಾಗವಹಿಸಲಿ ಎಂಬ ಡಿಕೆಶಿ ಹೇಳಿಕೆಗೆ ಹೆಚ್​​ಡಿಕೆ ತಿರುಗೇಟು ನೀಡಿದ್ದಾರೆ. ಭಾಗವಹಿಸಿ ಏನು ಮಾಡಬೇಕು? ಏನಾದರೂ ಪ್ರಯೋಜನ ಇದೆಯಾ? ಭಾಗವಹಿಸಿದ್ರೆ ಮೇಕೆದಾಟು ಜಾರಿ ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ, ನಾವು ಮಾಡಿದ ಪಾದಯಾತ್ರೆಗೂ, ಈ ಪಾದಯಾತ್ರೆಗೂ ವ್ಯತ್ಯಾಸವಿದೆ. ಸರ್ಕಾರದ ವಿರುದ್ದ ಮಾಡಿದ ಪಾದಯಾತ್ರೆಗಳಲ್ಲಿ ಗೋಲಿಬಾರ್​​​​ನಿಂದಾಗಿ ಹಲವು ರೈತರು ಸಾವನ್ನಪ್ಪಿದಾರೆ. ಕಾಂಗ್ರೆಸ್ ನವರು ರಾಜಕೀಯಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆಯ ಅವಶ್ಯಕತೆ ಇಲ್ಲ. ಟೆಕ್ನಿಕಲಿ ಒಂದು ಸಮಸ್ಯೆ ಇದೆ. ಕೆಲಸ ಮಾಡಲು ಯಾರ ಅನುಮತಿಯೂ ಬೇಕಾಗಿಲ್ಲ. ಮುಂದಿನ ಮೀಟಿಂಗ್​​​ನಲ್ಲಿ ಕ್ಲಿಯರೆನ್ಸ್ ಸಿಗುತ್ತೆ ಅಂತಾ ಸಿಎಂ ಹೇಳಿದ್ದಾರೆ. ಈಗ ಪಾದಯಾತ್ರೆ ಮಾಡಿದ್ರೆ ಅನುಮತಿ ಸಿಗುತ್ತಾ? ಎಂದು ಹೆಚ್​ಡಿಕೆ ತಿರುಗೇಟು ನೀಡಿದರು.

RELATED ARTICLES

Related Articles

TRENDING ARTICLES