Wednesday, January 22, 2025

ಚುನಾವಣೆ ಫಲಿತಾಂಶ ಹಂಗಾಮ

ರಾಜ್ಯ : 19 ಜಿಲ್ಲೆಗಳಲ್ಲಿ ನಡೆದ 58 ನಗರ ಸ್ಧಳೀಯ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಹಾಗೆನೇ ವಿವಿಧ ನಗರ ಸಂಸ್ಧೆಗಳ 9 ವಾರ್ಡಗಳ ಉಪಚುನಾವಣೆ ಹಾಗು 57 ಗ್ರಾಮ ಪಂಚಾಯಿಗಳ ಚುನಾವಣೆಯ ಫಲಿತಾಂಶ ಕೂಡ ಇಂದು ಹೊರ ಬೀಳಲಿದೆ.

ಆಯಾ ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭಗೊಂಡಿದ್ದು, ಅತೀ ಹೆಚ್ಚಿನ ಫಲಿತಾಂಶ ಹೊರಬೀಳುವ ನಿರೀಕ್ಷೆಯಲ್ಲಿ ಪಕ್ಷದ ಅಭ್ಯರ್ಥಿಗಳು ಕಾಯುತ್ತ ಇದ್ದಾರೆ. ಹಾಗೂ ಎಂಎಲ್ ಸಿ ಚುನಾವಣೆಯಲ್ಲಿದ್ದ ತಲೆಬಿಸಿ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಇಂದು ಮತ್ತೆ ಅಗ್ನಿಪರೀಕ್ಷೆಯು ಎದುರಾಗಿದೆ. ನಗರ ಸಂಸ್ಧೆಗಳಾದ ಬಿಜೆಪಿಯ ಶಕ್ತಿ ಪರೀಕ್ಷೆಯು 5 ನಗರಸಭೆ,19 ಪುರಸಭೆ,ಮತ್ತು 34 ಪಟ್ಟಣ ಪಂಚಾಯಿತಿಗಳು ಒಟ್ಟು ಸೇರಿ 58 ನಗರ ಸಂಸ್ಧೆಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಶೇ. 75ರಷ್ಟು ಮತದಾನವಾಗಿತ್ತು.

ಗ್ರಾಮ ಪಂಚಾಯಿತಿ ಕ್ಷೇತ್ರಗಳಲ್ಲಿ ಶೇ 70ಕ್ಕಿಂತ ಹೆಚ್ಚು ಮತದಾನವಾಗಿದ್ದು ವರದಿಯಾಗಿದೆ. ಚುನಾವಣೆಯಾಗಿರುವ 58 ನಗರ ಸಂಸ್ಧೆಗಳಲ್ಲಿ ಬೆಳಗಾವಿಯಲ್ಲಿ ಅತಿ ಹೆಚ್ಚು. ನಾಲ್ಕು ಪುರಸಭೆ ಮತ್ತು 11 ಪಟ್ಟಣ ಪಂಚಾಯಿತಿ ಸೇರಿ ಒಟ್ಟು 15 ನಗರ ಸಂಸ್ಧೆಗಳಿಗೆ ಚುನಾವಣೆ ಆಗಿದೆ. ಬೆಳಗಾವಿಯಲ್ಲಿ ಎರಡು ಪರಿಚತ್ ಸ್ಧಾನಗಳ ಚುನಾವಣೆಯಲ್ಲಿ ಸೋಲನುಭವಿಸಿದ್ದ ಬಿಜೆಪಿ ಈ ನಗರಸಂಸ್ಧೆ ಚುನಾವಣೆಯು ಪ್ರತಿಷ್ಠೆಯ ಪಣವಾಗಿದೆ.

RELATED ARTICLES

Related Articles

TRENDING ARTICLES