Wednesday, January 22, 2025

ಡಿಕೆಶಿ ಅಲರ್ಟ್​​, ಸಿದ್ದು ಸೈಲೆಂಟ್​​

ಬೆಂಗಳೂರು: ವಿಳಂಬವಾಗುತ್ತಿರುವ ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷ ಜನವರಿ 9ರಿಂದ ಹತ್ತು ದಿನಗಳ ಕಾಲ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಪಾದಯಾತ್ರೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಬ್ಬರದ ಎದ್ದು ಕಾಣುತ್ತಿದ್ದರೆ, ಸಿದ್ದರಾಮಯ್ಯ ಮಾತ್ರ ಸೈಲೆಂಟಾಗಿದ್ದಾರೆ.

ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್​ಗೆ ಮೇಕೆದಾಟು ಪಾದಯಾತ್ರೆ ಪ್ರಮುಖ ಅಸ್ತ್ರವಾಗಿ ಸಿಕ್ಕಿದೆ. ಈಗಾಗಲೇ ಮೇಕೆದಾಟು ಯೋಜನೆಯ ಲಾಭ ಆಗುವ ಪ್ರದೇಶಗಳಲ್ಲಿ ಸಭೆಗಳನ್ನು ನಡೆಸಿ ಪಾದಯಾತ್ರೆ ಯಶಸ್ವಿಗೊಳಿಸುವ ತಯಾರಿಯಲ್ಲಿದ್ದಾರೆ. ಆದರೆ ಸಿದ್ದರಾಮಯ್ಯ ಮಾತ್ರ ಈ ವಿಚಾರವಾಗಿ ಸೈಲೆಂಟಾಗಿದ್ದಾರೆ. ಮೇಕೆದಾಟು ಪಾದಯಾತ್ರೆಯ ಬಗ್ಗೆ ಮಾತನಾಡುತ್ತಿದ್ದರೂ, ಡಿಕೆಶಿಯಷ್ಟು ಉತ್ಸಾಹ ಅವರಲ್ಲಿ ಎದ್ದು ಕಾಣುತ್ತಿಲ್ಲ. ಇವರ ಬದಲಾಗಿ ಪಾದಯಾತ್ರೆಯ ಮುಂದಾಳತ್ವವನ್ನು ಡಿಕೆಶಿಯೇ ವಹಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES