Wednesday, January 22, 2025

ಬಂದ್ ಕೈ ಬಿಡಲು ಮನವಿ : ಆರಗ ಜ್ಞಾನೇಂದ್ರ

ಹುಬ್ಬಳ್ಳಿ : ಬಂದ್ ಮಾಡೋ ಪರಿಸ್ಥಿತಿ ರಾಜ್ಯದಲ್ಲಿ ಇಲ್ಲ, ಈಗಾಗಲೇ ಎಂಇಎಸ್​ ವಿರುದ್ಧ ದಿಟ್ಟ ಕ್ರಮ ಕೈಗೊಂಡಿದ್ದಾರೆಂದು ಹುಬ್ಬಳ್ಳಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಕೊವಿಡ್​​ನಿಂದ ಬೀದಿ ಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಬಂದ್ ಮಾಡಿದರೆ ವ್ಯಾಪಾರಿಗಳು ಸಾಕಷ್ಟು ತೊಂದರೆ ಅನುಭವಿಸಲಿದ್ದಾರೆಂದು ಹೇಳಿದ್ದಾರೆ. ಆದರೆ ಕನ್ನಡಪರ ಚಳುವಳಿಗಾರರು ಬಂದ್​ ಮಾಡುವ ಬದಲು ಹತ್ತು ಭಾರಿ ಯೋಚನೆ ಮಾಡಬೇಕು. ಒಂದು ವೇಳೆ ಒತ್ತಾಯ ಮಾಡಿ ಬಂದ್​ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ, ಹಾಗೂ ಕಾನೂನು ಸಹ ಇದೆ. ಆ ಕಾನೂನು ಕೆಲಸ ಮಾಡುತ್ತದೆ, ಎಂದು ಒತ್ತಾಯ ಪೂರ್ವಕ ಬಂದ್ ಮಾಡೋರಿಗೆ ಖಡಕ್ ಎಚ್ಚರಿಕೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನೀಡಿದ್ದಾರೆ.

ಎಂಇಎಸ್ ಬ್ಯಾನ್ ಮಾಡುವ ಬಗ್ಗೆ ಸಮಾಲೋಚನೆ ನಡೆಯುತ್ತಿದೆ.ಯಾರೋ ಪುಂಡರು ಮಾಡಿದ ಕೆಲಸ ಅದು, ಅದಕ್ಕೆ ಕಾನೂನು ರೀತಿಯಲ್ಲಿ ಹೋರಾಟ ಮಾಡುವುದು ಒಳ್ಳೆದು. ಅಲ್ಲದೇ ಕನ್ನಡ ಪರ ಹೋರಾಟಗಾರರು ಬಂದರೆ ಸಿಎಂ ಬೊಮ್ಮಾಯಿ ಅವರು ಅವರ ಜೊತೆ ಮಾತನಾಡೋಕೆ ಸಿದ್ದರಿದ್ದಾರೆಂದು ಹಾಗೂ ಬಂದ್​ ಕೈ ಬಿಡುವಂತೆ ಕನ್ನಡ ಸಂಘಟನೆಗಳಲ್ಲಿ ಮನವಿಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾಡಿದ್ದಾರೆ.

RELATED ARTICLES

Related Articles

TRENDING ARTICLES