Wednesday, October 30, 2024

ಸೋನಿಯಾ ಗಾಂಧಿ ಮೇಲೆ ಬಿತ್ತು ಧ್ವಜ..!

ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮೇಲೆ ಧ್ವಜ ಬಿದ್ದ ವಿಚಿತ್ರ ಘಟನೆ ನಡೆದಿದೆ. ಪಕ್ಷದ ಅಧಿನಾಯಕಿ ಆಗಿರುವ ಸೋನಿಯಾ ಅವರು ದಾರವನ್ನು ಎಳೆದ ತಕ್ಷಣ ಧ್ವಜ ಅವರ ಮೇಲೆಯೇ ಬಿದ್ದಿತು. ಪಕ್ಷದ 137ನೇ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆ ಪಕ್ಷದ ಕಚೇರಿಗೆ ಸೋನಿಯಾ ಗಾಂಧಿ ಆಗಮಿಸಿದ್ದರು. ಈ ವೇಳೆ ಪಕ್ಷದ ಅಧ್ಯಕ್ಷೆ ಧ್ವಜವನ್ನು ಎಳೆಯುವಾಗ ಅಲ್ಲಿ ಒಬ್ಬ ಕಾರ್ಯಕರ್ತನೂ ಇದ್ದು, ಸೋನಿಯಾ ಗಾಂಧಿಯವರಿಗೆ ಸಹಾಯ ಮಾಡಲು ಯತ್ನಿಸಿದ. ಆದರೆ ಧ್ವಜವು ಅವರ ಮೇಲೆ ಬಿದ್ದಿತು. ಈ ಘಟನೆಯಿಂದ ಅಲ್ಲಿದ್ದ ಎಲ್ಲ ಕಾಂಗ್ರೆಸ್ಸಿಗರು ಬೆಚ್ಚಿಬಿದ್ದಿದ್ದಾರೆ. ಇದಾದ ನಂತರ ಮಹಿಳಾ ಕಾರ್ಯಕರ್ತೆ ಓಡಿ ಬಂದು ಧ್ವಜಾರೋಹಣಕ್ಕೆ ಸಹಾಯ ಮಾಡಲು ಪ್ರಯತ್ನಿಸಿದರು. ಆದರೆ ಅದು ಸಹ ವ್ಯರ್ಥವಾಯಿತು.

ಅಂತಿಮವಾಗಿ ಸೋನಿಯಾ ಗಾಂಧಿ ತಮ್ಮ ಕೈಯಿಂದಲೇ ಪಕ್ಷದ ಧ್ವಜವನ್ನು ಹಾರಿಸಿದರು. ಈ ಸಂಪೂರ್ಣ ಘಟನೆಯ ಸಮಯದಲ್ಲಿ ಹಿರಿಯ ನಾಯಕಿ ಸೋನಿಯಾ ಎಲ್ಲಿಯೂ ವಿಚಲಿತರಾಗಿ ಕಾಣಿಸಲಿಲ್ಲ. ಅವರ ಪ್ರತಿಕ್ರಿಯೆ ತುಂಬಾನೇ ಶಾಂತವಾಗಿತ್ತು. ಬಳಿಕ ಮಾತನಾಡಿದ ಸೋನಿಯಾ ಗಾಂಧಿ ಅವರು, ಭಾರತದ ಶ್ರೀಮಂತ ಪರಂಪರೆಯನ್ನು ಅಳಿಸಲು ಅಸಹ್ಯಕರ ಪ್ರಯತ್ನಗಳು ನಡೆಯುತ್ತಿವೆ.

ನಮ್ಮ ಪರಂಪರೆಯ ಗಂಗಾ-ಯಮುನಾ ಸಂಸ್ಕೃತಿಯನ್ನು ಅಳಿಸಲು ಪ್ರಯತ್ನಿಸಲಾಗುತ್ತಿದೆ. ದೇಶದ ಸಾಮಾನ್ಯ ನಾಗರಿಕರಿಗೂ ಅಭದ್ರತೆ ಕಾಡುತ್ತಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಬದಿಗೊತ್ತಲಾಗುತ್ತಿದೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ಮೌನವಾಗಿರಲು ಸಾಧ್ಯವಿಲ್ಲ ಮತ್ತು ದೇಶದ ಶ್ರೀಮಂತ ಪರಂಪರೆಯನ್ನು ನಾಶ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದರು.

RELATED ARTICLES

Related Articles

TRENDING ARTICLES