Wednesday, January 22, 2025

ಬಿಜೆಪಿ ವಿರುದ್ದ ಗುಡುಗಿದ ಸಿದ್ದರಾಮಯ್ಯ

ಮಂಡ್ಯ : ಮೇಕೆದಾಟು ತಮಿಳುನಾಡಿಗೆ ವಿರೋಧವಲ್ಲ. ರಾಜಕೀಯಕ್ಕಾಗಿ ತಮಿಳುನಾಡಿನವರ ಕ್ಯಾತೆ ತೆಗೆದಿದ್ದಾರೆಂದು ಕಾಂಗ್ರೆಸ್ ಸಂಸ್ಥಾಪನ ದಿನಾಚರಣೆಯಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.

ಇದು ಕುಡಿಯುವ ನೀರಿನ ಯೋಜನೆ. ನಮ್ಮ ಹಕ್ಕನ್ನ ನಾವು ಪಡೆದುಕೊಳ್ಳಲಿಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ. ನಮ್ಮ ನೀರು, ನಮ್ಮ ಹಕ್ಕು, ನಮ್ಮ ಹಕ್ಕಿಗಾಗಿ ನಿಮ್ಮೆಲ್ಲರ ಪಾಲ್ಗೊಳ್ಳುವಿಕೆ ಅಗತ್ಯ ಇದೆ. ಬಿಜೆಪಿಯವರು ಮೇಕೆದಾಟು ಯೋಜನೆ ಜಾರಿಗೆ ತರದೇ ಇರೋದಕ್ಕೆ ನಾವು ಹೋರಾಟ ಮಾಡೋಣ ಎಂದು ಹೇಳಿದರು.

ಬಿಜೆಪಿಯವರು ಡಬಲ್ ಇಂಜಿನ್ ಸರ್ಕಾರ ಅಂತಾರೆ. ಕರ್ನಾಟಕವನ್ನ ಸ್ವರ್ಗ ಮಾಡ್ತೀನಿ ಅಂತಾರೆ ಎಂದು ಕಾಂಗ್ರೆಸ್ ಸಂಸ್ಥಾಪನ ದಿನಾಚರಣೆಯಲ್ಲಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

RELATED ARTICLES

Related Articles

TRENDING ARTICLES