Wednesday, January 22, 2025

ಸಂಸದ ಜಾಧವ್​ ವಿರುದ್ಧ ಪ್ರಿಯಾಂಕ್​​​​ ವಾಗ್ದಾಳಿ

ಕಲಬುರ್ಗಿ: ಸಂಸದ ಉಮೇಶ್ ಜಾಧವ್ ಅವರು ಪಿಡಿಓರನ್ನು ಹೆದರಿಸಿ ಬಿಲ್ ಮಾಡಿಸಿಕೊಂಡಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರ ಸಂಘ 40% ಸರ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನಮ್ಮ ಕಲಬುರಗಿ ಜಿಲ್ಲೆಯಲ್ಲಿ ವಸೂಲಿ 40% ಅನ್ನೂ ದಾಟಿ ಹೋಗಿದೆ.

ಗ್ರಾಪಂ ಸದಸ್ಯರು ಉದ್ಯೋಗ ಖಾತ್ರಿಯಲ್ಲಿ ಆಗದ ಕೆಲಸಕ್ಕೆ ಸಂಸದರ ಮುಖಾಂತರ ಬಿಲ್ ಮಾಡಿಸಿಕೊಂಡಿದ್ದಾರೆ. ಬಿಲ್ ಹಾಕಿಸಿಕೊಳ್ಳುವುದಕ್ಕಾಗಿ ಚಿತ್ತಾಪುರ ತಾಲೂಕಿನ ಬಿಳಗೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಬೆದರಿಕೆ ಹಾಕಿರುವ ವೀಡಿಯೋ ಇದೆ. ಆದರೆ ಅದು ನನ್ನ ಕ್ಷೇತ್ರದ್ದು ಎನ್ನುವ ಕಾರಣಕ್ಕೆ ವೀಡಿಯೋವನ್ನು ಬಿಡುಗಡೆ ಮಾಡುತ್ತಿಲ್ಲ ಎಂದರು.

RELATED ARTICLES

Related Articles

TRENDING ARTICLES