ಮಂಡ್ಯ : ಕಾವೇರಿ ಉಳಿವಿಗಾಗಿ ಮೇಕೆದಾಟು ಯೋಜನೆ ಅಗತ್ಯವೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರಿನ ಶಿವಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಂಸ್ಥಾಪನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಂಡ್ಯದವರ ಚೆಡ್ಡಿ ಮೆರವಣಿಗೆ ಗಮನಿಸಿದ್ದೇನೆ. ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಕಿಚ್ಚು ಕೇಳಿದ್ದೇನೆ ಮೇಕೆದಾಟು ಯೋಜನೆಗಾಗಿ ಮತ್ತೊಮ್ಮೆ ಆ ರೀತಿಯ ಹೋರಾಟದ ಕಿಚ್ಚು ನಿಮ್ಮ ಮೇಲಿದೆ ಡಿ.ಕೆ.ಶಿವಕುಮಾರ್ ಎಂದರು.
ಮೇಕೆದಾಟು ಯೋಜನೆಗೆ ಕುಮಾರಸ್ವಾಮಿ ಟೀಕೆ ಮಾಡ್ತಿದ್ದಾರೆ. ಅವರ ಟೀಕೆಯಿಂದ ಬಗ್ಗೆ ನಮಗೆ ಬೇಸರವಿಲ್ಲ, ಬೇಕಿದ್ದರೆ ಕುಮಾರಸ್ವಾಮಿ ಅವರ ಕಾರ್ಯಕರ್ತರು ಭಾಗವಹಿಸಬಹುದು. ಜೆಡಿಎಸ್‌ಗೆ, ಬಿಜೆಪಿಗೆ, ರೈತ ಸಂಘಟನೆಗೆ ಎಲ್ಲರಿಗೂ ಕಾವೇರಿ ನೀರು ಬೇಕು. ಇದು ಪಕ್ಷಾತೀತವಾಗಿ ನಡೆಯುತ್ತಿರುವ ಪಾದಯಾತ್ರೆ. ಪಾದಯಾತ್ರೆಯಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಮಾಣ ಪತ್ರ ಕೊಡ್ತೀವಿ. ಕಾಂಗ್ರೆಸ್ ಮಾತ್ರ ಹೋರಾಟದ ಮುಂದಾಳತ್ವ ತೆಗೆದುಕೊಳ್ಳುತ್ತದೆ. ಈ ದೇಶದ ಚರಿತ್ರೆಗೆ ಎಲ್ಲರೂ ಪಾಲುದಾರರಾಗಬೇಕೆಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.