Wednesday, January 22, 2025

ನ ಖಾವುಂಗಾ ನ ಖಾನೆ ದೂಂಗ ಅನ್ನೋದೆಲ್ಲ ಶುದ್ಧ ಸುಳ್ಳು-ಸಿದ್ದು

ಬೆಂಗಳೂರು: ಹೌದು, ಸಿದ್ದರಾಮಯ್ಯ ಬಿಜೆಪಿ ಮೇಲೆ ಗರಂ ಆಗಿ ಅವರ ಹೈಕಮಾಂಡ್ ದೊರೆ ಹೇಳಿದ್ದನ್ನೇ ಲೇವಡಿ ಮಾಡಿದ್ದಾರೆ. ಹಿಂದೊಮ್ಮೆ ಪ್ರಧಾನಿ ಮೋದಿ ನ ಖಾವುಂಗಾ, ನ ಖಾನೆ ದೂಂಗ ಎಂದು ಹೇಳಿದ್ದರು. ಅದನ್ನೇ ಈಗ ಸಿದ್ದರಾಮಯ್ಯ ಈಗ ಲೇವಡಿ ಮಾಡಿದ್ದಾರೆ.

ಬಿಜೆಪಿ ಅಂದ್ರೆನೆ ಸುಳ್ಳು, ಅಲ್ಲಿನ ಲೀಡರ್ಸ್​ ಎಲ್ಲಾ ಸುಳ್ಳು, ನ ಖಾವುಂಗಾ, ನ ಖಾನೆ ದೂಂಗ ಅನ್ನೋದಂತೂ ಶುದ್ಧ ಸುಳ್ಳು! 40% ಕಮೀಷನ್ ಬಗ್ಗೆ ಗುತ್ತಿಗೆದಾರರು ಮೋದಿಗೆ ಪತ್ರ ಬರೆದಿದ್ದರು. ಆದರೆ ಅಧಿವೇಶನದಲ್ಲಿ ಅದನ್ನು ಚರ್ಚೆಗೆ ತೆಗೆದುಕೊಂಡಿಲ್ಲ. ಇನ್ನೊಂದು ವಾರ ಅಧಿವೇಶನ ಮುಂದುವರೆಸಿ ಅಂದ್ರೆ ಮುಂದುವರೆಸಲಿಲ್ಲ. ಬಿಟ್ ಕಾಯಿನ್, ರೈತರ ಕೃಷಿ ಕಾಯಿದೆ, 40% ಕಮೀಷನ್ ಇವೆಲ್ಲದರ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕಿತ್ತು. ಆದರೆ ಚರ್ಚೆಯಾಗಲೇಯಿಲ್ಲ ಎಂದು ಸಿದ್ದು ಬಿಜೆಪಿ ಸರ್ಕಾರದ ವಿರುದ್ಧ ಅಸಮಧಾನ ಹೊರಹಾಕಿದರು.

RELATED ARTICLES

Related Articles

TRENDING ARTICLES