Friday, October 18, 2024

ಮೋದಿ ಕ್ಷಮೆ ಕೇಳೊದು ಬೇಡ : ರಾಕೇಶ್ ಟಿಕಾಯತ್

ಪ್ರಧಾನಿ ನರೇಂದ್ರ ಮೋದಿಯವರು ರೈತರಲ್ಲಿ ಕ್ಷಮೆ ಕೇಳುವುದರಿಂದ ವಿದೇಶದಲ್ಲಿ ಅವರ ಪ್ರತಿಷ್ಠೆಗೆ ಧಕ್ಕೆ ಉಂಟಾಗುತ್ತದೆ. ಇದನ್ನು ನಾವು ಬಯಸುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಹೇಳಿದರು.

ಈ ಕುರಿತು ಟ್ವೀಟ್ ಮಾಡಿದ ಅವರು, ಪ್ರಧಾನಿ ಮೋದಿ ಕ್ಷಮೆ ಕೇಳುವುದು ನಮಗೆ ಇಷ್ಟವಿಲ್ಲ. ಜೊತೆಗೆ ವಿದೇಶದಲ್ಲಿ ಅವರ ಖ್ಯಾತಿಯನ್ನು ಕೆಡಿಸಲು ನಾವು ಬಯಸುವುದಿಲ್ಲ. ಪುನಃ ರೈತರ ಒಪ್ಪಿಗೆ ಇಲ್ಲದೆ ಕೃಷಿಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಕೈಗೊಂಡರೆ ಆ ಕಾನೂನನ್ನು ತರಲಾಗುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.

ಈ ಹೇಳಿಕೆಯು ರೈತರನ್ನು ಮೋಸಗೊಳಿಸುವ ಉದ್ದೇಶವನ್ನು ಹೊಂದಿದೆ ಜೊತೆಗೆ ಪ್ರಧಾನಿ ಅವರನ್ನು ಅವಮಾನಿಸುತ್ತದೆ. ಒಂದು ವೇಳೆ ಕೃಷಿ ಕಾನೂನುಗಳನ್ನು ಕೇಂದ್ರವು ಪುನಃ ಪರಿಚಯಿಸಿದರೆ ಆಂದೋಲನವನ್ನು ಪುನಾರಂಭಿಸುವುದಾಗಿ ಎಚ್ಚರಿಕೆ ನೀಡಿದರು.

RELATED ARTICLES

Related Articles

TRENDING ARTICLES