Saturday, January 18, 2025

ಮಿಮ್ಸ್​ನ 9 ವಿದ್ಯಾರ್ಥಿನಿಯರಿಗೆ ಕೊರೋನಾ ಪಾಸಿಟಿವ್

ಮಂಡ್ಯ : ಮಿಮ್ಸ್ ವೈದ್ಯಕೀಯ ಕಾಲೇಜಿನ 9 ವಿದ್ಯಾರ್ಥಿನಿಯರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿದೆ. ಮಂಡ್ಯ ಮಿಮ್ಸ್​ನಲ್ಲಿ ಟ್ರೈನಿಗಳಾಗಿ ಕೆಲಸ ಮಾಡುತ್ತಿದ್ದ 9 ವಿದ್ಯಾರ್ಥಿನಿಯರಲ್ಲಿ 8 ವಿದ್ಯಾರ್ಥಿನಿಯರು ಕೇರಳ ಮೂಲದವರಾಗಿದ್ದಾರೆ. ಡಿಸೆಂಬರ್ 8ರಂದು ಕೇರಳಕ್ಕೆ ತೆರಳಿ ಡಿಸೆಂಬರ್ 14 ರಂದು ಕಾಲೇಜಿಗೆ ವಾಪಸ್ಸಾಗಿದ್ದರು.

ಡಿಸೆಂಬರ್ 24 ರಂದು ಕಾಲೇಜಿನ ವಿದ್ಯಾರ್ಥಿನಿಯರಿಗೆ ಸಾಮೂಹಿಕ ಕೊರೋನಾ ಟೆಸ್ಟ್ ಮಾಡಲಾಗಿತ್ತು. ಇದರಲ್ಲಿ 9 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಕೊರೋನಾ ಸೋಂಕಿತರನ್ನು ಮಹಿಳಾ ಹಾಸ್ಟೆಲ್​ನ 4ನೇ ಮಹಡಿಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದು,ಇದೀಗ ಕಾಲೇಜಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು‌ ಸೇರಿದಂತೆ ಸಿಬ್ಬಂದಿ ಹಾಗೂ ಉಪನ್ಯಾಸಕರನ್ನು ಸಾಮೂಹಿಕವಾಗಿ ಕೋವಿಡ್ ಪರೀಕ್ಷೆ ಮಾಡಿಸಲು ನಿರ್ಧರಿಸಲಾಗಿದೆ.

RELATED ARTICLES

Related Articles

TRENDING ARTICLES