Monday, December 23, 2024

ತೇಜಸ್ವಿ ಸೂರ್ಯ ವಿವಾದಾತ್ಮಕ ಹೇಳಿಕೆ

ಉಡುಪಿ: ಉಡುಪಿಯಲ್ಲಿ ನಡೆದ ಪರ್ಯಾಯ ಅದಮಾರು ಮಠದ ವಿಶ್ವರೂಪಂ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ಧಾರೆ. ಇದು ಬಿಜೆಪಿಯ ಅಜೆಂಡಾದಲ್ಲಿರುವ ಹೇಳಿಕೆಯೊ ಅಥವ ತೇಜಸ್ವಿ ಸೂರ್ಯ ವೈಯುಕ್ತಿಕ ಹೇಳಿಕೆಯೋ ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಿಲ್ಲ.

ತೇಜಸ್ವಿ ನೀಡಿರುವ ಈ ಹೇಳಿಕೆಯಲ್ಲಿ ಈಗಾಗಲೇ ಮತಾಂತರವಾಗಿರುವ ಮುಸಲ್ಮಾನ ಮತ್ತು ಕ್ರೈಸ್ತರನ್ನು ಮತ್ತೆ ಮರಳಿ ಹಿಂದೂ ಧರ್ಮಕ್ಕೆ ಬಲವಂತವಾಗಿಯಾದರೂ ಕರೆತರಬೇಕು.  ಮುಸ್ಲಿಮರನ್ನ ಕ್ರೈಸ್ತರನ್ನು ಘರ್ ವಾಪಸಿ ಮಾಡದೆ ಬೇರೆ ದಾರಿಯಿಲ್ಲ. ಮತಾಂತರವಾಗಿ ಪಾಕಿಸ್ತಾನಕ್ಕೆ ಹೋದವರನ್ನು ಹಿಂದೂ ಧರ್ಮಕ್ಕೆ ಕರೆತರಬೇಕು. ಚೀನಾ ಜಪಾನಿಗೆ ಮತಾಂತರಗೊಂಡವರನ್ನು ಭಾರತಕ್ಕೆ ತರಬೇಕು. ಟಿಪ್ಪು ಜಯಂತಿಯಂದೇ ನಾವು ಹಿಂದೂ ಧರ್ಮಕ್ಕೆ ಮರುಮತಾಂತರ ಮಾಡಬೇಕು. ಟಿಪ್ಪುವಿನ ಖಡ್ಗದ ಕಾರಣಕ್ಕೆ ಬಹಳ ಮತಾಂತರಗಳು ಆಗಿದೆ. ಆದ್ದರಿಂದ ಈಗ ಬೇರೆ ಧರ್ಮಕ್ಕೆ ಹೋದವರ ಘರ್ ವಾಪಸಿ ಅತ್ಯಂತ ಮುಖ್ಯವಾಗಿದೆ. ಅಸಾಧ್ಯ ಎಂಬುದು ಯಾವುದೂ ಇಲ್ಲ.

ನಮ್ಮ ಮನೆ ಪಕ್ಕದಲ್ಲಿರುವವರನ್ನು,  ಗ್ರಾಮ ಊರುಗಳಲ್ಲಿರುವವರನ್ನು ಘರ್ ವಾಪಸೀ ಮಾಡಬೇಕು. ನಾವು ದೊಡ್ಡದಾಗಿ ಕನಸನ್ನು ಕಾಣಬೇಕು. ಈ ದೇಶದಲ್ಲಿ ರಾಮಮಂದಿರವನ್ನು ಸ್ಥಾಪನೆ ಮಾಡಿದ್ದೇವೆ. ಕಾಶ್ಮೀರದ 470 ಕಾಯ್ದೆಯನ್ನು ತೆಗೆದುಹಾಕಿದ್ದೇವೆ. ಪಾಕಿಸ್ತಾನದ ಮುಸಲ್ಮಾನರನ್ನು ಹಿಂದೂಗಳಾಗಿ ಪರಿವರ್ತನೆ ಮಾಡಬೇಕು.  ಘರ್ ವಾಪಸೀ ಆದ್ಯ ಕರ್ತವ್ಯದ ರೀತಿಯಲ್ಲಿ ನಾವು ಮಾಡಬೇಕಾಗಿದೆ. ಅಖಂಡ ಭಾರತದ ಕಲ್ಪನೆಯಲ್ಲಿ ಪಾಕಿಸ್ತಾನವು ಇದೆ. ಮಠ ದೇವಸ್ಥಾನ ಇದರ ಮುಂದಾಳತ್ವ ವಹಿಸಬೇಕು ಎಂದು ಉಡುಪಿಯಲ್ಲಿ ಸಂಸದ  ತೇಜಸ್ವಿ ಸೂರ್ಯ ಅತ್ಯಂತ ವಿವಾದಾತ್ಮಕವಾಗಿರುವ ಹೇಳಿಕೆ ಯನ್ನು ನೀಡಿದ್ದಾರೆ.

RELATED ARTICLES

Related Articles

TRENDING ARTICLES