Wednesday, January 22, 2025

ಜೆಡಿಎಸ್ ಪರ ಕೆಲಸ ಮಾಡಿಲ್ಲ : ಶಾಸಕ ಎಸ್ ಆರ್ ಶ್ರೀನಿವಾಸ್

ತುಮಕೂರು : ಮೇಲುಕೋಟೆ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು, ಅರಸಿಕೆರೆ ಶಾಸಕ ಶಿವಲಿಂಗೌಡರು ಪಕ್ಷ ತೊರೆಯುವ ಮಾತು ಕೇಳಿಬಂದಿದ್ದು ೨೦೨೩ರ ನಂತರ ಯಾವ ಬೆಳವಣಿಗೆ ಬೇಕಾದರೂ ನಡೆಯಬಹುದು ಎಂದು ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

ನಾನೂ ಸೇರಿದಂತೆ ಕೆಲವಷ್ಟು ಜನ ಯಾವ ನಿರ್ಧಾರ ಬೇಕಾದರೂ ತೆಗೆದುಕೊಳ್ಳಬಹುದು ಎಂದು ಹೇಳುವ ಮೂಲಕ ಸಾಮೂಹಿಕವಾಗಿ ಪಕ್ಷ ತೊರೆಯುವ ಮುನ್ಸೂಚನೆ ಕೊಟ್ಟಿದ್ದಾರೆ. ಇದೇ ಪಕ್ಷದಲ್ಲಿ ಇರುತ್ತೇನೆ ಎಂದು ಯಾರೂ ಕೂಡ ಬಾಂಡ್ ಪೇಪರಲ್ಲಿ ಬರೆದುಕೊಟ್ಟಿಲ್ಲ, ಸ್ವಾಭಿಮಾನಕ್ಕೆ ಧಕ್ಕೆ ತಂದುಕೊಂಡು ಅಭಿನಯಿಸುವ ಅಗತ್ಯ ಇಲ್ಲ ಎಂದು ಪಕ್ಷದ ವಿರುದ್ದದ ಅಸಮಾಧಾನ ಮುಂದುವರೆಸಿದ್ದಾರೆ.

ಅಲ್ಲದೇ ತುಮಕೂರಿನನಲ್ಲಿ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಹೀನಾಯ ಸೋಲುಕಂಡಿದ್ದು ಎಂದು ಸ್ವಪಕ್ಷವನ್ನು ವ್ಯಂಗ್ಯವಾಡಿದ್ದಾರೆ. ಆದರೆ ಪಕ್ಷ ಸೋತಿದ್ದರಿಂದ ನನಗೆ ಬೇಜಾರು ಅಥವಾ ಸಂತೋಷ ಯಾವುದೂ ಇಲ್ಲ ಎಂದ ಅಭಿಪ್ರಾಯ ಪಟ್ಟಿದ್ದಾರೆ. ನಾನು ಜೆಡಿಎಸ್ ಪರ ಕೆಲಸ ಮಾಡಿಲ್ಲ. ಹಾಗಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಕಾಂಗ್ರೆಸ್ ಗೆ ಮತಹಾಕಿರಬಹುದು ಇದರಿಂದ ಕಾಂಗ್ರೆಸ್ ಅಭ್ಯರ್ಥಿಗೆ ರಾಜೇಂದ್ರ ರಾಜಣ್ಣ ಗೆಲುವು ಸಾಧಿಸಿದ್ದಾರೆ ಎಂದರು.

ಹೇಮಂತ್ ಕುಮಾರ್. ಜೆ.ಎಸ್ ಪವರ್ ಟಿವಿ ತುಮಕೂರು

RELATED ARTICLES

Related Articles

TRENDING ARTICLES