Sunday, January 19, 2025

ಅನುಮಾನಸ್ಪದ ರೀತಿಯಲ್ಲಿ ಕಾಲೇಜು ಉಪನ್ಯಾಸಕನ ಶವ ಪತ್ತೆ

ವಿಜಯಪುರ : ಕಾಲೇಜು ಉಪನ್ಯಾಸಕರೊರ್ವರು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮಲಗಲದಿನ್ನಿ ಬಳಿ ನಡೆದಿದೆ.

ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜು ಉಪನ್ಯಾಸಕರಾಗಿದ್ದ ಕಾಶಿನಾಥ ಶರಬಯ್ಯ ಪುರಾಣಿಕಮಠ ಎಂಬುವ ಉಪನ್ಯಾಸಕರು ಅನುಮಾಸ್ಪದವಾಗಿ ಸಾವಿಗೀಡಾದವರು. ತಾಲೂಕಿನ ಮಲಗಲದಿನ್ನಿ ಗ್ರಾಮದ ಬಳಿ ಬೈಕ್ ಮೇಲೆ ತಾಳಿಕೋಟಿಗೆ ತೆರಳುವ ವೇಳೆ ಅಪಘಾತದ ರೀತಿಯಲ್ಲಿ ಉಪನ್ಯಾಸಕ ಕಾಶೀನಾಥ ಶರಬಯ್ಯ ಪುರಾಣಿಕಮಠ (27) ಶವ ಪತ್ತೆಯಾಗಿದೆ.

ನಾಗರಬೆಟ್ಟದ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿನಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಇವರು ನಿತ್ಯ ತಾಳಿಕೋಟಿಗೆ ಹೋಗಿ ಬರುವುದು ಮಾಡುತ್ತಿದ್ದರು. ನಿನ್ನೆ ರಾತ್ರಿ 8.20 ಕ್ಕೆ ಶಾಲೆಯಿಂದ ಊರಿನ ಕಡೆಗೆ ಬೈಕ್ ಮೇಲೆ ತೆರಳಿದ್ದಾರೆ. ಇದೊಂದು ಕೊಲೆ ಎಂದು ಮೃತ ಉಪನ್ಯಾಸಕನ ಪಾಲಕರು ಸಂಶಯ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿದ್ದಾರೆ. ಅಲ್ಲದೇ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗುತ್ತಿದೆ.

RELATED ARTICLES

Related Articles

TRENDING ARTICLES