Monday, December 23, 2024

ಬೊಮ್ಮಾಯಿಯವರೇ ನಮ್ಮ ಸಿಎಂ : ನಳಿನ್ ಕುಮಾರ್ ಕಟೀಲ್

ಬೆಂಗಳೂರು : 2023ರ ಚುನಾವಣೆಯವರೆಗೆ ಬೊಮ್ಮಾಯಿಯವರೇ ಸಿಎಂ. ಸಿಎಂ ಬದಲಾವಣೆ ಎಂಬುದು ಕೇವಲ ಕಪೋಕಲ್ಪಿತ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಅರಾಜಕತೆ ಹುಟ್ಟುಹಾಕಲು ಹೀಗೆ ಮಾಡುತ್ತಿದ್ದಾರೆ. ಕಾಂಗ್ರೆಸ್​ನವರೇ ಇಂತಹ ಸುದ್ದಿಯನ್ನು ಹುಟ್ಟಿಸಿರಬಹುದು. ಮುಂದಿನ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವವಿರುತ್ತದೆ.

ಸಿಎಂ ಬೊಮ್ಮಾಯಿಗೆ ಅನಾರೋಗ್ಯ ಇಲ್ಲ, ಕಾಲು ನೋವಿದೆ. ಅದಕ್ಕೆ ಸಿಎಂ ಬೊಮ್ಮಾಯಿಯವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗಾಗಿ ಅವರು ವಿದೇಶಕ್ಕೂ ಹೋಗುವುದಿಲ್ಲ ಅಂತ ಕಟೀಲ್ ತಿಳಿಸಿದ್ದಾರೆ. ಸಚಿವ ಸಂಪುಟ ಪುನಾರಚನೆ ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಒಂದು ವೇಳೆ ಪುನಾರಚನೆಯಾದರೆ ನಮ್ಮ ಜತೆ ಚರ್ಚಿಸುತ್ತಾರೆ. ಚರ್ಚೆಯಾದ ಮರುದಿನವೇ ನಾನು ಮಾಹಿತಿ ನೀಡುತ್ತೇನೆ ಅಂತ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES