Sunday, January 19, 2025

ಸದನದಲ್ಲಿ ಚರ್ಚೆ ಮಾಡುವುದರಿಂದ ಏನು ಲಾಭ- ಬಿಜೆಪಿ ಸಚಿವರ ಆಘಾತಕಾರಿ ಪ್ರಶ್ನೆ!

ಬೆಳಗಾವಿ: ವಿಧಾನಸಭೆಯಲ್ಲಿ ಕೇವಲ ಚರ್ಚೆ ಮಾಡುವುದರಿಂದ ಏನು ಲಾಭ? ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ ಪ್ರಸಂಗ ಶುಕ್ರವಾರ ನಡೆಯಿತು. ವಿಧಾನ ಸಭೆಯಲ್ಲಿ ನಿಯಮ 69ರ ಅಡಿಯಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಆಘಾತಕಾರಿ ಅಭಿಪ್ರಾಯವನ್ನು ಸಚಿವರು ಹೊರಹಾಕಿದರು.

‘ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತನಾಡಲು ಹೆಚ್ಚಿನ ಅವಕಾಶ ನೀಡಬೇಕು’ ಎನ್ನುತ್ತಾ, ‘ಈ ವಿಚಾರ ಬಿಡಂಗಿಲ್ಲ, ಇನ್ನು ಕನಿಷ್ಠ ಎರಡು ಗಂಟೆಗಳ ಕಾಲಾವಕಾಶ ಬೇಕು’ ಎಂದ‌ ಸಿದ್ದರಾಮಯ್ಯ, ‘ನೀವು ಮಾತನಾಡಬೇಕೋ ಬೇಡವೋ ಯತ್ನಾಳ್ ಅವರೇ?’ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಯತ್ನಾಳ್, “ಇಲ್ಲಿ ಚರ್ಚೆ ಮಾಡಿ ಏನು ಮಾಡೋದಿದೆ?” ಎಂದರು. ಇದಕ್ಕೆ ಸಿದ್ದರಾಮಯ್ಯ ಉತ್ತರಿಸಿ, “ಮತ್ತೆ ಯಾಕೆ ಇಲ್ಲಿ ಬರೋದು?” ಎಂದು ಪ್ರಶ್ನಿಸಿದರು. “ಈ ವೇಳೆ ಸುಮ್ಮನೆ ಒದರೋದು, ಅದರಿಂದ ಏನೂ ಲಾಭ ಆಗಲ್ಲ,” ಎಂದು ಯತ್ನಾಳ್‌ ಹೇಳಿದ್ರು. ಅದಕ್ಕೆ ಪ್ರತಿಯಾಗಿ, “ಇದೇನು ಮಕ್ಕಳಾಟನಾ? ಯಾರೂ ಕೇಳುವವರಿಲ್ಲ, ಸದನ ಮುಂದೂಡಿ,” ಎಂದು ಸಿದ್ದರಾಮಯ್ಯ ಹೇಳಿದರು.

RELATED ARTICLES

Related Articles

TRENDING ARTICLES