ಗಣ್ಯ ವ್ಯಕ್ತಿಗಳ ಭದ್ರತೆಯ ಹೊಣೆ ಹೊತ್ತಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಇದೇ ಮೊದಲ ಬಾರಿಗೆ ತರಬೇತಿ ಪಡೆದ 32 ಮಹಿಳಾ ಕಮಾಂಡೊಗಳನ್ನು ಸಚಿವರು ಹಾಗೂ ರಾಜಕೀಯ ಮುಖಂಡರ ಕಾವಲಿಗೆ ನಿಯೋಜಿಸಲಿದೆ.
ಒಟ್ಟಾರೆ 32 ಮಹಿಳಾ ಕಮಾಂಡೊಗಳಿಗೆ CRPF ನಿಂದ 10 ವಾರಗಳ ಅತೀ ಕಠಿಣ ತರಬೇತಿ ನೀಡಲಾಗಿದೆ. ಶಸ್ತ್ರಾಸ್ತ್ರ ರಹಿತ ಸಮರ, ವಿಶೇಷ ಶಸ್ತ್ರಗಳ ಚಲಾವಣೆ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಗಣ್ಯರ ಪ್ರಾಣ ರಕ್ಷಣೆಗೆ ಯಾವುದೇ ಕಸರತ್ತು ನಡೆಸಲು ಮಹಿಳಾ ಕಮಾಂಡೊಗಳು ಸನ್ನದ್ಧರಾಗಿರುತ್ತಾರೆ.
ಜನವರಿಯಿಂದ ಮಹಿಳಾ ಕಮಾಂಡೊಗಳನ್ನು ಗೃಹ ಸಚಿವ ಅಮಿತ್ ಶಾ ಅವರ ಭದ್ರತಾ ಪಡೆ ಸೇರಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರ ಕಾವಲು ಪಡೆಯಲ್ಲಿ ನಿಯೋಜಿಸಲಾಗುತ್ತಿದೆ.