Sunday, May 19, 2024

ಸೂರ್ಯ ಚಂದ್ರರಿರುವ ತನಕ ಬೆಳಗಾವಿ ನಮ್ಮದೆ..!

ಇಯರ್​ ಎಂಡ್​ ಪಾರ್ಟಿ ಮೂಡ್​ನಲ್ಲಿದ್ದ ಸಿಲಿಕಾನ್​ ಸಿಟಿ ಜನ ಈಗ ಶಾಕ್​ನಲ್ಲಿದ್ದಾರೆ. ಹೊರಗಡೆ ಹೋಗಬೇಕು ಅಂತ ಪ್ಲ್ಯಾನ್​ ಮಾಡ್ಕೊಂಡು ತಿಂಗಳಿಗೂ ಮುಂಚೆ ರಜೆ ಹಾಕ್ಕೊಂಡಿರವರು ಸಪ್ಪೆ ಮುಖ ಮಾಡ್ಕೊಂಡಿದಾರೆ. MES ನಿಷೇಧಕ್ಕೆ ಆಗ್ರಹಿಸಿ ಡಿಸೆಂಬರ್ 31ರಂದು ಇಡೀ ಕರ್ನಾಟಕ ಸ್ತಬ್ಧವಾಗಲಿದೆ.

ಸುಖಾಸುಮ್ಮನೆ ಕನ್ನಡಿಗರ ಮೇಲೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡರ ದಬ್ಬಾಳಿಕೆ, ಪುಂಡಾಟಿಕೆಗೆ ರಾಜ್ಯದ ಕನ್ನಡಿಗರ ತಾಳ್ಮೆಯ ಕಟ್ಟೆ ಒಡೆದಿದೆ. ನಾಡದ್ರೋಹಿಗಳ ವಿರುದ್ಧ ಸ್ವಾಭಿಮಾನಿ ಕನ್ನಡಿಗರು ಸಿಡಿದೆದ್ದಿದ್ದಾರೆ . ಕನ್ನಡದ ನೆಲ ,ಜಲ, ಸಂಸ್ಕೃತಿ ವಿಚಾರಕ್ಕೆ ಬಂದರೆ ಕನ್ನಡಿಗರು ಕೈ ಕಟ್ಟಿ ಕೂರಲ್ಲ ಎಂಬ ಸಂದೇಶ ಸಾರಲು ಡಿಸೆಂಬರ್ 31ರಂದು ಕರ್ನಾಟಕ ಬಂದ್​ಗೆ ಹೋರಾಟಗಾರ ವಾಟಾಳ್ ನಾಗರಾಜ್ ಅಧಿಕೃತ ಘೋಷಣೆ ಮಾಡಿದ್ದಾರೆ. ಡಿಸೆಂಬರ್​ 31ರ ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ಕರ್ನಾಟಕ ಬಂದ್ ಆಗಲಿದೆ. ಆದ್ರೆ ಈ ವರೆಗೆ ಸುಮಾರು 35 ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು , ಹಾಗೂ ಕೆಲವು ಸೇವಾ ಸಂಸ್ಥೆಗಳು ಮಾತ್ರ ಬಂದ್​ಗೆ ಗ್ರೀನ್ ಸಿಗ್ನಲ್ ನೀಡಿವೆ.

ಸಾರ್ವಜನಿಕರಿಗೆ ಗುಲಾಬಿ ಹೂ ನೀಡಿ, ಕೈ ಮುಗಿದು ಅಭಿಯಾನ

ಕರುನಾಡು ಬಂದ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್​ ಮಾಡೋದರಿಂದ ಆಗುವ ನಷ್ಟವೇ ನಮಗೆ. MES ಮಟ್ಟಹಾಕಲು ಬಂದ್​ ಒಂದೇ ಪರಿಹಾರವಲ್ಲ ಅಂತಿದ್ದಾರೆ ಕೆಲವರು. ಇನ್ನು ಟೌನ್ ಹಾಲ್ ಬಳಿ ಗುಲಾಬಿ ಹೂ ನೀಡಿ ಬಂದ್ ಗೆ ಬೆಂಬಲ ನೀಡುವಂತೆ ಕನ್ನಡಪರ ಹೋರಾಟಗಾರರ ಮನವಿ ಮಾಡಿದೆ.

ಕರುನಾಡು ಬಂದ್​ಗೆ ಯಾರ ಬೆಂಬಲ

1- ಓಲಾ, ಊಬರ್ ಟ್ಯಾಕ್ಸಿ ಡ್ರೈವರ್ ಅಂಡ್ ಓನರ್ಸ್ ಅಸೋಸಿಯೇಷನ್​​ನಿಂದ ಸಂಪೂರ್ಣ ಬೆಂಬಲ
2- ಬೆಂಗಳೂರು ಆದರ್ಶ ಆಟೋ ಯೂನಿಯನ್​ನಿಂದ ಬಂದ್​​​ಗೆ ಸಂಪೂರ್ಣ ಬೆಂಬಲ
3- ಕರ್ನಾಟಕ ರಾಜ್ಯಾದ್ಯಂತ ಬೀದಿ ಬದಿ ವ್ಯಾಪಾರ ಸಂಪೂರ್ಣ ಬಂದ್
4- ದಾಸನಪುರ ಎಂಪಿಎಂಸಿ ತರಕಾರಿ ಮಾರುಕಟ್ಟೆ ಸಂಪೂರ್ಣ ಬಂದ್
5- ಏರ್​​​ರ್ಪೋರ್ಟ್​ ಟ್ಯಾಕ್ಸಿ ಸಂಪೂರ್ಣ ಬಂದ್
6- ಕರ್ನಾಟಕ ಶಾಲೆ ಭೌತಿಕ ತರಗತಿ ತೆರೆಯದೇ ಇರಲು ನಿರ್ಧಾರ

ಯಾರೆಲ್ಲ ಬಂದ್​​​ಗೆ ಬೆಂಬಲ ಕೊಡ್ತಿಲ್ಲ :

1- ಕರ್ನಾಟಕ ರಕ್ಷಣಾ ವೇದಿಕೆಯಿಂದ ಬಂದ್​​ಗೆ ಬೆಂಬಲವಿಲ್ಲ
2- ಪೀಸ್ ಆಟೋ ಅಸೋಸಿಯೇಷನ್ ನಿಂದ ಬಂದ್​​ಗೆ ಬೆಂಬಲವಿಲ್ಲ
3- ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ಬೆಂಬಲವಿಲ್ಲ

ನೈತಿಕವಾಗಿ ಬೆಂಬಲ :

1- ಕರ್ನಾಟಕ ಟ್ರಾವೆಲ್ಸ್ ಮಾಲೀಕರಿಂದ ನೈತಿಕ ಬೆಂಬಲ
2- ಲೇಬರ್ಸ್ ವರ್ಕರ್ಸ್ ಯೂನಿಯನ್​ನಿಂದ ನೈತಿಕ ಬೆಂಬಲ
3- ಬಾರ್ ಅಂಡ್ ರೆಸ್ಟೋರೆಂಟ್ ಪಬ್ ಮಾಲೀಕರಿಂದ ನೈತಿಕ ಬೆಂಬಲ
4- ಖಾಸಗಿ ಮತ್ತು ಅನುದಾನ ರಹಿತ ಶಾಲೆಗಳಿಂದ ನೈತಿಕ ಬೆಂಬಲ

ಹೀಗಾಗಿ ಬಹುತೇಕ ಸಾರ್ವಜನಿಕ ವಲಯಗಳು ನೈತಿಕ ಬೆಂಬಲ ನೀಡುತ್ತಿರುವ ಹಿನ್ನೆಲೆ ಟೌನ್ ಹಾಲ್ ಬಳಿ ಬಂದ ಸಾರಾ ಗೋವಿಂದ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ .

ಒಟ್ಟಾರೆ ಸರ್ಕಾರ ಡಿ. 30 ರ ಒಳಗೆ MES ಸಂಘಟನೆ ನಿಷೇಧ ಮಾಡದಿದ್ದರೆ ವರ್ಷಾಂತ್ಯಕ್ಕೆ ಕರುನಾಡು ಸಂಪುರ್ಣ ಸ್ತಬ್ಧವಾಗೋದು ಪಕ್ಕಾ. ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮವಾಗಿ ಡಿ.31ಕ್ಕೆ ನಿಗಧಿಗೊಳಿಸಿಕೊಂಡಿದ್ದ ತುರ್ತು ಕೆಲಸಗಳನ್ನು ಮುಂದೂಡುವುದು ಇಲ್ಲವೇ ಮೊದಲೇ ಮುಗಿಸಿಕೊಳ್ಳುವುದು ಒಳಿತು.

RELATED ARTICLES

Related Articles

TRENDING ARTICLES