Wednesday, January 22, 2025

ಮತ್ತೆ ಹಂಬಲ್​​ ಪೊಲಿಟಿಶಿಯನ್ ಟ್ರೈಲರ್​​​ ಔಟ್​​​

ಬೆಂಗಳೂರು : ನಟ, ನಿರೂಪಕ ದಾನಿಶ್ ಸೇಠ್ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಬಗೆಯ ಕಾಮಿಡಿ ಚಿತ್ರಗಳಿಂದ ಗುರುತಿಸಿಕೊಂಡಿದ್ದಾರೆ. ಅವರ ಈ ಹಿಂದಿನ ಚಿತ್ರ ‘ಫ್ರೆಂಚ್ ಬಿರಿಯಾನಿ’ ಎಲ್ಲರ ಗಮನ ಸೆಳೆದಿತ್ತು.

ಇದೀಗ ದಾನಿಶ್ ನಟನೆಯ ವೆಬ್ ಸೀರೀಸ್ ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಹಿಂದೆ ರೇಡಿಯೋದಲ್ಲಿ ಧ್ವನಿ ರೂಪದಲ್ಲಿ ಮೂಡಿಬಂದಿದ್ದ ಅವರ ‘ನೋಗರಾಜ್’ ಪಾತ್ರದ ಆಧಾರದಲ್ಲಿ ಸಿನಿಮಾ ತೆರೆಗೆ ಬಂದು ಮೆಚ್ಚುಗೆ ಗಳಿಸಿತ್ತು. ಇದೀಗ ವೆಬ್ ಸೀರೀಸ್ ರೂಪದಲ್ಲಿ ಮಜವಾದ ಕತೆಯೊಂದಿಗೆ ‘ಹಂಬಲ್ ಪೊಲಿಟಿಶಿಯನ್ ನೋಗರಾಜ್’ ಜನರ ಮುಂದೆ ಬರಲಿದ್ದಾನೆ.

 

ಸಾದ್ ಖಾನ್ ನಿರ್ದೇಶಿಸಿರುವ ಈ ಸೀರೀಸ್, ಜನವರಿ 6ರಂದು ವೂಟ್ ಸೆಲೆಕ್ಟ್​ ಒಟಿಟಿ ಮೂಲಕ ತೆರೆಕಾಣಲಿದೆ. ಪ್ರಕಾಶ್ ಬೆಳವಾಡಿ, ವಿಜಯ್ ಚೆಂಡೂರ್, ದಿಶಾ ಮದನ್ ಮೊದಲಾದವರು ಇದರಲ್ಲಿ ಕಾಣಿಸಿಕೊಂಡಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶಿಸಿದ್ದಾರೆ.

ವೂಟ್ ಸೆಲೆಕ್ಟ್​​ನಲ್ಲಿ ಬಿಡುಗಡೆಯಾಗುತ್ತಿರುವ ಈ ಸೀರೀಸ್ ಒಟ್ಟು 10 ಎಪಿಸೋಡ್​ಗಳನ್ನು ಹೊಂದಿದೆ. ಇದೀಗ ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ.

RELATED ARTICLES

Related Articles

TRENDING ARTICLES