Wednesday, January 22, 2025

ಡ್ರಗ್ಸ್ ಪೆಡ್ಲರ್ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ಆಟಿಕೆ ಬಾಕ್ಸ್​ಗಳಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ  ವ್ಯಕ್ತಿಯನ್ನು ಬಂಧಿಸಿರುವ ಪ್ರಕರಣ ವರದಿಯಾಗಿದೆ.  ಸೌತ್ ಆಫ್ರಿಕಾದ ಬೆಂಜಮೀನ್ ಸಂಡೆ ಅಲಿಯಾಸ್ ಅಂಥೋನಿಯನ್ನು NCB ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಯಿಂದ ಲಕ್ಷಾಂತರ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದು, ಈತ ಈಗಾಗಲೇ ಚನ್ನೈನಲ್ಲಿ ಎರಡು ಪ್ರಕರಣದಲ್ಲಿ ಬೇಕಾಗಿದ್ದಾನೆ. ಈತ ಭಾರತದಲ್ಲಿಯೇ ಉಳಿದುಕೊಳ್ಳುವ ಸಲುವಾಗಿ ತಮಿಳುನಾಡು ಮೂಲದ ಮಹಿಳೆಯನ್ನು ಮದುವೆಯಾಗಿದ್ದ.

ಹಾಗಾಗಿ ಮದುವೆಯಾದ ಮಹಿಳೆಯ ಸಹಾಯದಿಂದಲೂ ಈತ ಡ್ರಗ್ಸ್​ಅನ್ನು ಮಾರಾಟ ಮಾಡುತ್ತಾ ಇದ್ದ. ಈತನಿಂದ 968 ಗ್ರಾಂ ಅಪ್ತೇಮೇನ್ , 2kg 900 ಗ್ರಾಂ ಎಪೆದ್ರೇನ್ ಲಕ್ಷಾಂತರ ಮೌಲ್ಯದ ಮಾದಕವಸ್ತುಗಳನ್ನು  ವಶಪಡಿಸಲಾಗಿದೆ. ಆದರೆ 130 ಗ್ರಾಂ ಕೊಕೇನ್ ಮಾರಲು ಹೋಗಿ ಸಿಕ್ಕಿಬಿದ್ದದ್ದ ಈತ, ಬಳಿಕ ಜಾಮೀನು ಪಡೆದು ಎಸ್ಕೇಪ್ ಆಗಿದ್ದ. ಆದರೆ ಈಗ ಎರಡು ಪ್ರಕರಣದಲ್ಲಿ ಎನ್ ಸಿ ಬಿ  ಬಲೆಯಲ್ಲಿ ಬಿದ್ದು ಒದ್ದಾಡುತ್ತಿದ್ದಾನೆ.

RELATED ARTICLES

Related Articles

TRENDING ARTICLES